ಮಡಿಕೇರಿ: ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಮಡಿಕೇರಿ ವತಿಯಿಂದ ಮುಂಬರುವ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಮಿನಿ ಒಲಂಪಿಕ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕಾಗಿ ಕೊಡಗು ಜಿಲ್ಲಾಮಟ್ಟದ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಈ ಆಯ್ಕೆ ಪ್ರಕ್ರಿಯೆಯು ದಿನಾಂಕ 24 ಅಕ್ಟೋಬರ್ 2026ರ ಶನಿವಾರದಂದು ಕೂಡಿಗೆಯ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಲಿದೆ. ವಿವರಗಳು ಹಾಗೂ ಅರ್ಹತೆ: ವಯೋಮಿತಿ: 14 ವರ್ಷ ಮತ್ತು 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಅವಕಾಶ ನೀಡಲಾಗಿದೆ. ವಯೋಮ : ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 24/10/2026ರ ಬೆಳಿಗ್ಗೆ 8:30 ಗಂಟೆಗೆ ಸರಿಯಾಗಿ ಮೈದಾನದಲ್ಲಿ ಹಾಜರಿರಬೇಕು. ಅಗತ್ಯ ದಾಖಲೆಗಳು: ಸ್ಪರ್ಧಿಗಳು ತಮ್ಮ ಜನ್ಮ ದಿನಾಂಕದ ಮೂಲ ಪ್ರಮಾಣಪತ್ರ ಆಧಾರ್ ಕಾರ್ಡ್ ಮತ್ತು ಯುಐಡಿ ದಾಖಲೆಗಳೊಂದಿಗೆ ಆಗಮಿಸುವುದು ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಆಯ್ಕೆ ಪ್ರಕ್ರಿಯೆಯ ಕುರಿತು ಹೆಚ್ಚಿನ ವಿವರಗಳಿಗಾಗಿ ಕೆಳಗಿನ ತರಬೇತುದಾರರನ್ನು ಸಂಪರ್ಕಿಸಬಹುದು. ಮಂಜುನಾಥ್ ಬಿ. ಜಿ. – 93425 63014 ಮಹಾಬಲ ಕೆ. – 99808 87499 ಪ್ರದೀಪ – 73377 52731. ವರದಿ ✍️ದುಗ್ಗಳ ಸದಾನಂದ




ಕಾಮೆಂಟ್ಗಳು (0)