Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ವಾಲ್ಮೀಕಿ ಜಯಂತಿ: ಪಿಡಿಒಗಳ ಗೈರುಹಾಜರಿಗೆ ಕರವೇ ಆಕ್ರೋಶ

by Kodagu Varadi•ಅಕ್ಟೋಬರ್ 26, 2026BREAKING
ವಾಲ್ಮೀಕಿ ಜಯಂತಿ: ಪಿಡಿಒಗಳ ಗೈರುಹಾಜರಿಗೆ ಕರವೇ ಆಕ್ರೋಶ

​ಸೋಮವಾರಪೇಟೆ ಅ.26: ಸರ್ಕಾರದ ಆದೇಶವಿದ್ದರೂ ವಾಲ್ಮೀಕಿ ಜಯಂತಿಯಂದು ಕಚೇರಿಗೆ ಗೈರಾಗಿ, ಕೇವಲ ನೀರುಗಂಟೆಗಳಿಂದ ಕಾಟಾಚಾರಕ್ಕೆ ಕಾರ್ಯಕ್ರಮ ಮುಗಿಸಿರುವ ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಹಾಗೂ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕರವೇ ಸ್ವಾಭಿಮಾನಿ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ​ಜವಾಬ್ದಾರಿಯುತ ಪಿಡಿಒಗಳು ಜಯಂತಿ ದಿನ ನಾಪತ್ತೆಯಾಗಿ ಮಹರ್ಷಿ ವಾಲ್ಮೀಕಿಯವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಅಧಿಕಾರಿಗಳ ನಿಜವಾದ ಉಪಸ್ಥಿತಿಯನ್ನು (ಹಾಜರಾತಿಯನ್ನು) ಖಚಿತಪಡಿಸಿಕೊಳ್ಳಲು ಮತ್ತು ಸುಳ್ಳು ದಾಖಲೆ ಸೃಷ್ಟಿಸುವುದನ್ನು ತಡೆಯಲು ಕೂಡಲೇ ಕಚೇರಿಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ವಾಲ್ಮೀಕಿ ಜಯಂತಿ: ಪಿಡಿಒಗಳ ಗೈರುಹಾಜರಿಗೆ ಕರವೇ ಆಕ್ರೋಶ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!