Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಷ್ಟ್ರೀಯ

ಪ್ರಧಾನ ಮಂತ್ರಿ ವಿಕಸಿತ ಗ್ರಾಮ್ ಸ್ವರಾಜ್ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

by Kodagu Varadi•ಅಕ್ಟೋಬರ್ 28, 2026BREAKING
ಪ್ರಧಾನ ಮಂತ್ರಿ ವಿಕಸಿತ ಗ್ರಾಮ್ ಸ್ವರಾಜ್ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ, ಅ. 28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು, 2026-27 ರಿಂದ 2030-31 ರವರೆಗೆ (ಹದಿನಾರನೇ ಹಣಕಾಸು ಆಯೋಗದ ಅವಧಿ) ಜಾರಿಯಲ್ಲಿರುವಂತೆ 'ಪ್ರಧಾನ ಮಂತ್ರಿ ವಿಕಸಿತ ಗ್ರಾಮ್ ಸ್ವರಾಜ್ ಯೋಜನೆ'ಗೆ (PM VGSY) ಕೇಂದ್ರ ಪುರಸ್ಕೃತ ಯೋಜನೆಯಾಗಿ ಅನುಮೋದನೆ ನೀಡಿದೆ. ಯೋಜನೆಯ ಒಟ್ಟು ವೆಚ್ಚ ₹7,395.55 ಕೋಟಿಯಾಗಿದ್ದು, ಇದರಲ್ಲಿ ಕೇಂದ್ರದ ಪಾಲು ₹4,869.48 ಕೋಟಿ ಮತ್ತು ರಾಜ್ಯಗಳ ಪಾಲು ₹2,526.07 ಕೋಟಿ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ಭಾಗ-IX ಅಲ್ಲದ ಪ್ರದೇಶಗಳ ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ, ಯೋಜನೆ ವಿಸ್ತರಿಸಲಿದೆ. ಸುಮಾರು 2.55 ಲಕ್ಷ ಪಂಚಾಯತ್‌ಗಳು ಹಾಗೂ ಸಾಂಪ್ರದಾಯಿಕ ಸ್ಥಳೀಯ ಸಂಸ್ಥೆಗಳ ಸುಮಾರು 32 ಲಕ್ಷ ಚುನಾಯಿತ ಪ್ರತಿನಿಧಿಗಳು, ಸಿಬ್ಬಂದಿ ಮತ್ತು ಪಾಲುದಾರರು ಯೋಜನೆಯ ನೇರ ಫಲಾನುಭವಿಗಳಾಗಲಿದ್ದಾರೆ. ಪ್ರತಿ ಜಾಗೃತಿ ಅಭಿಯಾನವೂ ಕನಿಷ್ಠ 1 ಕೋಟಿ ನಾಗರಿಕರನ್ನು ತಲುಪಲಿದೆ. ಯೋಜನೆಯಡಿ ಇ-ಗ್ರಾಮ್ ಸ್ವರಾಜ್ ಪೋರ್ಟಲ್‌ನಲ್ಲಿ ವಾರ್ಷಿಕ 2.55 ಲಕ್ಷ ಸಮಗ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳ (GPDP) ಸಿದ್ಧತೆಗೆ ಬೆಂಬಲ ನೀಡಲಾಗುವುದು. ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳ ಯೋಜನಾ ಪ್ರಕ್ರಿಯೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲಾಗುತ್ತದೆ; ಆದರೆ ಪ್ರತ್ಯೇಕ ಯೋಜನೆಗಳ ವಿತರಣೆಗೆ ಅಸ್ತಿತ್ವದಲ್ಲಿರುವ ಇಲಾಖಾ ವ್ಯವಸ್ಥೆಗಳು ಮುಂದುವರಿಯುತ್ತವೆ. ಸರ್ಕಾರಿ ಯೋಜನೆಗಳನ್ನು ಸರಳ ಭಾಷೆಯಲ್ಲಿ ವಿವರಿಸಲು 17 ಭಾರತೀಯ ಭಾಷೆಗಳಲ್ಲಿ ಎಐ-ಸಮರ್ಥಿತ ದ್ವಿಮುಖ ಸಂವಹನ ವೇದಿಕೆ 'ಪಂಚಮ್' ಬಳಸಲಾಗುವುದು. ಸಾಮರ್ಥ್ಯ ವೃದ್ಧಿ ಮತ್ತು ಡಿಜಿಟಲ್ ಮಾರ್ಗದರ್ಶನದ ಮೂಲಕ ವಾರ್ಷಿಕ ಸುಮಾರು 32 ಲಕ್ಷ ಜನರ ಆಡಳಿತ ಸಾಮರ್ಥ್ಯ ಬಲಪಡಿಸಲಾಗುವುದು. ಹದಿನಾರನೇ ಹಣಕಾಸು ಆಯೋಗವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸು ಮಾಡಿರುವ ಸುಮಾರು ₹4.35 ಲಕ್ಷ ಕೋಟಿ ಅನುದಾನದ ಪರಿಣಾಮಕಾರಿ ಬಳಕೆಗೆ ಪಂಚಾಯತ್‌ಗಳನ್ನು ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ, ವಾರ್ಷಿಕ ಕನಿಷ್ಠ 2.55 ಲಕ್ಷ ಆನ್‌ಲೈನ್ ಆಡಿಟ್ ಯೋಜನೆಗಳು ('ಆಡಿಟ್‌ಆನ್‌ಲೈನ್' ಮೂಲಕ), ಸ್ವಂತ ಮೂಲದ ಆದಾಯ (OSR) ಕ್ರೋಢೀಕರಣ ಮತ್ತು ಸಾರ್ವಜನಿಕ ಬಹಿರಂಗಪಡಿಸುವಿಕೆಗೆ ಒತ್ತು ನೀಡಲಾಗುವುದು. ಈ ಯೋಜನೆಯಡಿ ಕಾಯಂ ಹುದ್ದೆಗಳ ಸೃಷ್ಟಿ ಇರೋದಿಲ್ಲ ಆದರೆ ರಾಜ್ಯ, ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ಅಗತ್ಯಾಧಾರಿತ ಗುತ್ತಿಗೆ ಮಾನವ ಸಂಪನ್ಮೂಲ ತೊಡಗಿಸಿಕೊಳ್ಳಬಹುದು. ಅನುಷ್ಠಾನದಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಾರ್ಷಿಕ ಕ್ರಿಯಾ ಯೋಜನೆಗಳನ್ನು ಸಲ್ಲಿಸುತ್ತವೆ; ನಿಯೋಜಿತ ಕೇಂದ್ರ ಉನ್ನತಾಧಿಕಾರ ಸಮಿತಿ ಅವುಗಳನ್ನು ಮೌಲ್ಯಮಾಪನ ಮಾಡಿ ಅನುಮೋದಿಸುತ್ತದೆ

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!