Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಷ್ಟ್ರೀಯ

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಪ್ಪಳಿಸುವ ಭೀತಿ: ದೇಶಾದ್ಯಂತ ಹೈಅಲರ್ಟ್ ಘೋಷಣೆ

by Kodagu Varadi•ಅಕ್ಟೋಬರ್ 26, 2026BREAKING
ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಪ್ಪಳಿಸುವ ಭೀತಿ: ದೇಶಾದ್ಯಂತ ಹೈಅಲರ್ಟ್ ಘೋಷಣೆ

ನವದೆಹಲಿ ಅ.26: ​ಬಂಗಾಳ ಕೊಲ್ಲಿಯಲ್ಲಿ ರೂಪಾಂತರಗೊಂಡಿರುವ ‘ಅರ್ನಾಬ್’ ಚಂಡಮಾರುತವು ಅಕ್ಟೋಬರ್ 28, 2026 ರ ಪೂರ್ವಾಹ್ನದ ವೇಳೆಗೆ ಆಂಧ್ರಪ್ರದೇಶದ ಬಾಪಟ್ಲ ಮತ್ತು ವಿಶಾಖಪಟ್ಟಣ ನಡುವೆ ಗಂಟೆಗೆ 115 ರಿಂದ 140 ಕಿ.ಮೀ ಗರಿಷ್ಠ ವೇಗದ ಬಿರುಗಾಳಿಯೊಂದಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಸನ್ನದ್ಧತೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಸಂಪುಟ ಕಾರ್ಯದರ್ಶಿ ಡಾ. ಟಿ. ವಿ. ಸೋಮನಾಥನ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ (NCMC) ಉನ್ನತ ಮಟ್ಟದ ಸಭೆ ಇಂದು ಜರುಗಿದೆ. ಯಾವುದೇ ಜೀವಹಾನಿಯಾಗದಂತೆ ತಡೆಯುವುದು ಹಾಗೂ ಮೂಲಸೌಕರ್ಯಗಳಿಗೆ ಕನಿಷ್ಠ ಹಾನಿಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶ ಎಂದು ತಿಳಿಸಿದ ಸಂಪುಟ ಕಾರ್ಯದರ್ಶಿಯವರು, ಎನ್‌ಡಿಆರ್‌ಎಫ್, ಸಶಸ್ತ್ರ ಪಡೆಗಳು ಹಾಗೂ ಕರಾವಳಿ ಕಾವಲು ಪಡೆಯನ್ನು ಸಂಪೂರ್ಣ ಸಿದ್ಧಸ್ಥಿತಿಯಲ್ಲಿಡುವಂತೆ ಸೂಚಿಸಿದ್ದಾರೆ. ಕರಾವಳಿ ಪ್ರದೇಶಗಳ ಜನರನ್ನು ಸುರಕ್ಷಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಅಕ್ಟೋಬರ್ 26 ರಿಂದ 29 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ. ಈ ಚಂಡಮಾರುತದಿಂದ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಛತ್ತೀಸ್‌ಗಢ, ಪುದುಚೇರಿ ಮಾತ್ರವಲ್ಲದೆ ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿಯೂ ಭಾರಿ ಮಳೆಯಾಗುವ ಸಾದ್ಯತೆ ಇದೆ ಎಂದು ತಿಳಿಸಲಾಗಿದೆ

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!