ಸಿದ್ದಾಪುರ: ಕುಶಾಲನಗರ ತಾಲೂಕು ಪದವಿ ಪೂರ್ವ ಕಾಲೇಜುಗಳ ಬಾಲಕ-ಬಾಲಕಿಯರ ಅಥ್ಲೆಟಿಕ್ಸ್ ಪಂದ್ಯಾಟವು ಕೂಡಿಗೆಯ ಕ್ರೀಡಾ ಶಾಲಾ ಮೈದಾನದಲ್ಲಿ ನಡೆಯಿತು. ಇದರಲ್ಲಿ ಭಾಗವಹಿಸಿದ್ದ ನೆಲ್ಯಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. 100 ಮೀಟರ್ ಓಟದಲ್ಲಿ ಮಹಮ್ಮದ್ ಜಾಸರ್ ಹಾಗೂ ಶಿಫಾನಾತ್ ಅವರು ದ್ವಿತೀಯ ಸ್ಥಾನ ಪಡೆದರು. 200 ಮೀಟರ್ ಓಟದಲ್ಲಿ ಶಮ್ನ ಅವರು ಪ್ರಥಮ ಸ್ಥಾನ ಗಳಿಸಿದರೆ, ಜಾಸರ್ ದ್ವಿತೀಯ ಸ್ಥಾನ ಪಡೆದರು. 3000 ಮೀಟರ್ ಓಟದಲ್ಲಿ ಕೌಶಲ್ಯ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಾಲಕರ 4x100 ಮೀಟರ್ ರಿಲೇಯಲ್ಲಿ ಜಾಸರ್, ಸುಧೀನ್, ಸಿನಾನ್ ಹಾಗೂ ನಾಗಪ್ಪ ಅವರನ್ನೊಳಗೊಂಡ ತಂಡವು ಪ್ರಥಮ ಸ್ಥಾನ ಪಡೆಯಿತು. ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ನಾಗಪ್ಪ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ ವಿದ್ಯಾರ್ಥಿಗಳಿಗೆ ತರಬೇತುದಾರರಾದ ಧನಂಜಯ ಕುಮಾರ್ ಎಸ್.ಎಂ. ಅವರು ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ, ಅಧ್ಯಾಪಕ ವೃಂದ, ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ವರದಿ✍️: ಶಿಹಬುದ್ದೀನ್ ವಿ.ಪಿ.ಎಸ್., ನೆಲ್ಯಹುದಿಕೇರಿ
ಅಥ್ಲೆಟಿಕ್ಸ್: ನೆಲ್ಯಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ
by Kodagu Varadi•ಅಕ್ಟೋಬರ್ 29, 2026BREAKING

ಕಾಮೆಂಟ್ಗಳು (0)