Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಪವಿತ್ರ ಕೆ.ಬಿ. ಅವರಿಗೆ 'ಯೋಗ ಜ್ಯೋತಿ ಪ್ರಶಸ್ತಿ-2026' ಗೌರವ

by Kodagu Varadi•ನವೆಂಬರ್ 1, 2026BREAKING
ಪವಿತ್ರ ಕೆ.ಬಿ. ಅವರಿಗೆ 'ಯೋಗ ಜ್ಯೋತಿ ಪ್ರಶಸ್ತಿ-2026' ಗೌರವ

ನಾಪೋಕ್ಲು: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಪವಿತ್ರ ರಾಜೇಶ್ ಗೆ ಪ್ರತಿಷ್ಠಿತ 'ಯೋಗ ಜ್ಯೋತಿ ಪ್ರಶಸ್ತಿ-2026' ನೀಡಿ ಗೌರವಿಸಲಾಯಿತು. ಬಲ್ಲಮಾವಟಿ ಎಡಿಕೇರಿಯವರಾದ ಪವಿತ್ರ ರಾಜೇಶ್‌ ಅವರು ಕಳೆದ 9 ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಉಚಿತ ಯೋಗ ತರಬೇತಿ ನೀಡುತ್ತಾ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ 'ಯೋಗ ಜ್ಯೋತಿ ಪ್ರಶಸ್ತಿ-2026' ನೀಡಿ ಗೌರವಿಸಲಾಗಿದೆ. ಪವಿತ್ರ ಕೆ.ಬಿ. ಅವರು ಬಲ್ಲಮಾವಟಿ ಎಡಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಹಾಗೂ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸತತ 9 ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವವನ್ನು ತಿಳಿಸಿಕೊಡುತ್ತಾ, ಅವರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಬದ್ಧತೆ, ಜ್ಞಾನ, ಅನುಭವ, ಶಿಸ್ತು ಹಾಗೂ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ವರದಿ ✍️ದುಗ್ಗಳ ಸದಾನಂದ.

ಪವಿತ್ರ ಕೆ.ಬಿ. ಅವರಿಗೆ 'ಯೋಗ ಜ್ಯೋತಿ ಪ್ರಶಸ್ತಿ-2026' ಗೌರವ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!