Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಸಂಘಟನೆ ವತಿಯಿಂದ ಸಮಸ್ತ ಕನ್ನಡಿಗರಿಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

by Kodagu Varadi•ಅಕ್ಟೋಬರ್ 31, 2026BREAKING
ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಸಂಘಟನೆ ವತಿಯಿಂದ ಸಮಸ್ತ ಕನ್ನಡಿಗರಿಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

✍️✍️ ತನು ಕಿಶೋರ್, ಕೊಡಗು ಜಿಲ್ಲಾ ಉಸ್ತುವಾರಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲೆ ಹಾಗೂ ರಾಜ್ಯದ ಸಮಸ್ತ ಕನ್ನಡಿಗರಿಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏 ಭಾಷೆ ಎಂದರೆ ಕೇವಲ ಮಾತಿನ ಸಾಧನವಲ್ಲ. ಅದು ಜನಸಮುದಾಯದ ಅನ್ನ, ಅಸ್ಮಿತೆ ಮತ್ತು ಆತ್ಮಗೌರವ. ಕನ್ನಡ ನಾಡಿನಲ್ಲಿ ಕನ್ನಡಿಗನಿಗೆ ಉದ್ಯೋಗ, ಶಿಕ್ಷಣ ಮತ್ತು ಆಡಳಿತದಲ್ಲಿ ಕನ್ನಡ ಸಿಗದಿದ್ದರೆ, ನುಡಿಯ ಹೋರಾಟ ಬದುಕಿನ ಹೋರಾಟವೇ ಆಗುತ್ತದೆ. ಈ ತಿಳಿವಳಿಕೆಯಿಂದ ರಾಜ್ಯಾಧ್ಯಕ್ಷ ಪಿ. ಕೃಷ್ಣೆಗೌಡ್ರು ಅವರ ನೇತೃತ್ವದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ನಾಡು, ನುಡಿ, ನೆಲ, ಜಲದ ಹೋರಾಟದ ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯಲ್ಲೂ ತೊಡಗಿದೆ. ಘೋಷಣೆ, ಪ್ರತಿಭಟನೆಯಷ್ಟೇ ಅಲ್ಲ, ಜನರ ಕಷ್ಟಕ್ಕೆ ಕೈಜೋಡಿಸುವುದೂ ಹೋರಾಟದ ಭಾಗ ಎಂಬುದು ಸಂಘಟನೆಯ ನಿಲುವು. ಕನ್ನಡ ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಸೊತ್ತಲ್ಲ. ಕುವೆಂಪು ಅವರು ನಾಡನ್ನು “ಸರ್ವಜನಾಂಗದ ಶಾಂತಿಯ ತೋಟ” ಎಂದು ಕರೆದ ಆದರ್ಶವೇ ಕನ್ನಡ ಚಳವಳಿಯ ಆಧಾರ. ಅದಕ್ಕಾಗಿ ಜಾತ್ಯತೀತ, ಪಕ್ಷಾತೀತ ನೆಲೆಯಲ್ಲಿ ಕನ್ನಡಿಗರನ್ನು ಒಗ್ಗೂಡಿಸುವುದೇ ಸಂಘಟನೆಯ ಮೂಲ ಧ್ಯೇಯ. ಒಡೆದ ಸಮಾಜದಲ್ಲಿ ಭಾಷೆ ಉಳಿಯುವುದಿಲ್ಲ; ಒಗ್ಗೂಡಿದ ಸಮಾಜದಲ್ಲಿ ಮಾತ್ರ ಬೆಳೆಯುತ್ತದೆ. ನಾಡಿನ ಬೆನ್ನೆಲುಬು ರೈತ. ಬೆಲೆ ಕುಸಿತ, ಬೆಳೆ ಹಾನಿ, ವನ್ಯಜೀವಿ ಹಾವಳಿ, ಸಾಲದ ಹೊರೆ ಎದುರಾದಾಗ ಆತನ ಪರ ನಿಲ್ಲುವುದು ಸಂಘಟನೆಯ ಆದ್ಯತೆ. ರಸ್ತೆ, ನೀರು, ಶಾಲೆ, ಆಸ್ಪತ್ರೆಯಂತಹ ಸ್ಥಳೀಯ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು, ಆಡಳಿತಾಂಗ, ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅವರ ಜವಾಬ್ದಾರಿಯನ್ನು ನೆನಪಿಸುವ ಕೆಲಸವನ್ನೂ ಸಂಘಟನೆ ಮಾಡುತ್ತಿದೆ. ಜಾಗತೀಕರಣ, ವಲಸೆ, ಏರುತ್ತಿರುವ ಬೆಲೆ ಮತ್ತು ಉದ್ಯೋಗ ಅಭದ್ರತೆಯ ಈ ಕಾಲದಲ್ಲಿ ಕನ್ನಡಿಗನ ಬದುಕು ಅತಂತ್ರವಾಗುತ್ತಿದೆ. ಒಬ್ಬೊಬ್ಬರ ಧ್ವನಿ ದುರ್ಬಲ; ಸಂಘಟಿತ ಧ್ವನಿಗೆ ವ್ಯವಸ್ಥೆ ಕಿವಿಗೊಡುತ್ತದೆ. ಜನರ ನಂಬಿಕೆ ಭಾಷಣದಿಂದಲ್ಲ, ನಿರಂತರ ಕೆಲಸದಿಂದ ಬರುತ್ತದೆ. ಪ್ರಾಮಾಣಿಕ ಸೇವಾ ಮನೋಭಾವದವರು ಹೆಚ್ಚೆಚ್ಚು ಸಂಘಟನೆಗೆ ಬಂದಾಗ ಜಿಲ್ಲೆಯ ಅಭಿವೃದ್ಧಿಗೆ ಬಲವಾದ ಧ್ವನಿ ಸಿಗುತ್ತದೆ. ಕನ್ನಡ ಸಂಘಟನೆಗಳು ನೆನಪಿನ ದಿನಗಳ ಆಚರಣೆಗೆ ಸೀಮಿತವಾಗದೆ, ವರ್ಷದ ಎಲ್ಲ ದಿನಗಳಲ್ಲೂ ಜನರ ನಡುವೆ ಇದ್ದರೆ ಮಾತ್ರ ನಾಡು-ನುಡಿ ಉಳಿಯುತ್ತದೆ. ನಾಡಧ್ವಜದ ಗೌರವ...... ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಅಸ್ಮಿತೆಯ ಪ್ರತೀಕವಾದ ಹಳದಿ-ಕೆಂಪು ಬಾವುಟಕ್ಕೆ ಗೌರವ ಸಲ್ಲಿಸಿ, ಅದರ ಪಾವಿತ್ರ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. 1960ರ ದಶಕದಲ್ಲಿ ಹಿರಿಯ ಹೋರಾಟಗಾರ ಮಾ. ರಾಮಮೂರ್ತಿ ಅವರು ರೂಪಿಸಿದ ಈ ಬಾವುಟದಲ್ಲಿ ಹಳದಿ ಅರಿಶಿನ, ಸ್ನೇಹ ಮತ್ತು ಶಾಂತಿಯ ಸಂಕೇತ; ಕೆಂಪು ಕುಂಕುಮ, ಶೌರ್ಯ ಮತ್ತು ಕನ್ನಡಿಗರ ಕ್ರಾಂತಿಕಾರಿ ಮನೋಭಾವದ ಸಂಕೇತ. ಎರಡೂ ಬಣ್ಣಗಳು ನಮ್ಮ ಸಂಪ್ರದಾಯದ ಮಂಗಳಕರ ಸಂಕೇತಗಳಾಗಿದ್ದು, ಭೇದಭಾವವಿಲ್ಲದೆ ಎಲ್ಲ ಕನ್ನಡಿಗರನ್ನು ಒಗ್ಗೂಡಿಸುವ ಶಕ್ತಿ ಈ ಬಾವುಟಕ್ಕಿದೆ. ಕೊಡಗು ಜಿಲ್ಲೆಯ ಹಾಗೂ ನಾಡಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾಡು-ನುಡಿಯ ರಕ್ಷಣೆಗೆ ಎಲ್ಲರೂ ಕೈಜೋಡಿಸಿ, ದೈನಂದಿನ ಬದುಕಿನಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸೋಣ. ಶುಭಾಶಯ ಕೋರುವವರು: .......ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಡಗು ಜಿಲ್ಲಾ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್, ಉಪಾಧ್ಯಕ್ಷ ಸಜಿಲ್ ಕುಮಾರ್, ಗೌರವ ಅಧ್ಯಕ್ಷ ದಾಸನ್ ಪಿ.ಕೆ., ಸಲಹೆಗಾರ ಚಂದ್ರ ಎಚ್.ಜಿ., ಕುಶಾಲನಗರ ತಾಲೂಕು ಅಧ್ಯಕ್ಷ ಹರೀಶ್, ಮಡಿಕೇರಿ ಮಹಿಳಾ ಘಟಕ ಅಧ್ಯಕ್ಷೆ ನಂದಿನಿ, ಮಡಿಕೇರಿ ಕಾರ್ಮಿಕ ಘಟಕ ಅಧ್ಯಕ್ಷ ವೆಂಕಟೇಶ್, ನಾಪೋಕ್ಲು ಹೋಬಳಿ ಅಧ್ಯಕ್ಷೆ ಅನಿತಾ ಜಗದೀಶ್, ವಿರಾಜಪೇಟೆ ತಾಲೂಕು ಉಸ್ತುವಾರಿ ಕಾರ್ಯಪ್ಪ, ವಿರಾಜಪೇಟೆ ಕಾರ್ಯದರ್ಶಿ ದಿನೇಶ್ ಎ.ಡಿ., ವಿರಾಜಪೇಟೆ ಕಾರ್ಮಿಕ ಘಟಕ ಅಧ್ಯಕ್ಷ ಶಶಿಕುಮಾರ್, ಸಿದ್ದಾಪುರ ಘಟಕ ಅಧ್ಯಕ್ಷ ಗುರುಪ್ರಸಾದ್, ಸಿದ್ದಾಪುರ ಕಾರ್ಯದರ್ಶಿ ದಿನೇಶ್ ಕುಮಾರ್, ಸಿದ್ದಾಪುರ ಉಪಾಧ್ಯಕ್ಷ ರತೀಶ್ ಕೆ.ಆರ್., ನೆಲ್ಯಹುದಿಕೇರಿ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ರಶಾದ್, ಕಾರ್ಯದರ್ಶಿ ದಿಲೀಪ್, ನಿತೀಶ್ ಎಂ.ಎಚ್., ವಿರಾಜಪೇಟೆ ತಾಲೂಕಿನ ಇಂಜಿಲಗೆರೆ ಪದಾಧಿಕಾರಿಗಳಾದ ಮಣಿ, ಶಂಕರ, ರವಿ, ಫಿರೋಜ್ ಹಾಗೂ ಯುವ ಘಟಕ ಅಧ್ಯಕ್ಷ ಆದಿತ್ಯ ಸಿದ್ದಾಪುರ.

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಸಂಘಟನೆ ವತಿಯಿಂದ ಸಮಸ್ತ ಕನ್ನಡಿಗರಿಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು  image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!