Google search engine
Home♦️ಇತ್ತೀಚಿನ ಸುದ್ದಿಗಳು.🖍️🖊️ ಚೋಮಕ್ಕಿ ಜಯೇಂದ್ರ ಕೆದಮುಳ್ಳೂರು ನಿವಾಸಿ.🟣

🖍️🖊️ ಚೋಮಕ್ಕಿ ಜಯೇಂದ್ರ ಕೆದಮುಳ್ಳೂರು ನಿವಾಸಿ.🟣

ಮಾನ್ಯರೇ

ಭಗವಂತನ ಆಶೀರ್ವಾದದಿಂದ  ಅಂಧನ ಬಾಳಿಗೆ ಬೆಳಕು ಚೆಲ್ಲಿದ ಮಹಾನುಭಾವರಾದ ನಮ್ಮ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ ಎಸ್ ಪೊನ್ನಣ್ಣ ಹಾಗೂ ಬಡವರ ಪಾಲಿಗೆ ಆಶಾದಾಯಕರು ಆದ ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯರವರಿಗೆ ಕೋಟಿ ಕೋಟಿ ನಮನಗಳನ್ನು ಸಲ್ಲಿಸಿದರು ಸಾಲದು.

ನಾನು ಕೊಡಗಿನ ಕೆದಮುಳ್ಳೂರು ನಿವಾಸಿ ಚೋಮಕ್ಕಿ ಜಯೇಂದ್ರ. ನನ್ನ ಪತಿ ಜಯೇಂದ್ರನಿಗೆ ಚರ್ಮದ ರೋಗ ಇದ್ದುದ್ದರಿಂದ ತಮ್ಮ 7ನೇ ವಯಸ್ಸಿನಲ್ಲಿ ಎರಡು ಕಣ್ಣುಗಳಿಗೆ ಬೀಕರವಾದ ಕಾಯಿಲೆ ಆವರಿಸಿ ತಮ್ಮ ದೃಷ್ಟಿ ಕಳೆದುಕೊಂಡು ಒಂದು ಕಣ್ಣು ಕುರುಡಾಗಿ ಇನ್ನೊಂದು ಕಣ್ಣು ಮಂದಾವಾಗ ತೊಡಗಿ  ಅಲ್ಪ ಸ್ವಲ್ಪ  ಕಣ್ಣು ಕಾಣಿಸುತಿತ್ತು. 

ನಮ್ಮ ಮದುವೆಯ ಸಮಯಕ್ಕಿಂತ ಮೂರು ವರ್ಷದ ಮೊದಲು ಅವರಿಗೆ ಆ ಒಂದು ಕಣ್ಣು ಸಹ ಪೂರ್ತಿಯಾಗಿ ಕಾಣದೆ  ಎರಡೂ ಕಣ್ಣುಗಳು ಪೂರ್ತಿಯಾಗಿ ಕುರುಡಾಯಿತು.

ನಾನು ಇವರನ್ನು ಜೊತೆಯಲ್ಲಿ ಕರೆದುಕೊಂಡು ಮಡಿಕೇರಿ,ಮೈಸೂರು, ಬೆಂಗಳೂರು ಎಂದು ಹಲವಾರು ಕಣ್ಣಿನ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಹೋದಲ್ಲಿ ಏನು ಫಲಕಾರಿಯಾಗದೆ, ಕಡೆಗೆ ನಾರಾಯಣ ನೇತ್ರಾಲಯ ಅಸ್ಪತ್ರೆ ಬೆಂಗಳೂರಿನ ವೈದ್ಯರು ತಪಾಸಣೆ ಮಾಡಿ ಈ ಎರಡೂ ಕಣ್ಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಧೃಷ್ಟಿ ಬರಬಹುದು ಎನ್ನುವ ಒಂದು ಭರವಸೆ ನೀಡಿದರು. ಆದರೆ ಶಸ್ತ್ರಚಿಕಿತ್ಸೆಯ ಖರ್ಚು ಸುಮಾರು 1ಲಕ್ಷ 50 ಸಾವಿರದಿಂದ 2 ಲಕ್ಷ ರೂಪಾಯಿಗಳ ವರೆಗೆ ಒಂದು ಕಣ್ಣಿಗೆ  ವೆಚ್ಚ ತಗುಲಬಹುದು ಎಂದು ಹೇಳುವಾಗ ನಮ್ಮ ಎದೆ ಬಡಿದಂತಾಯಿತು.

ಕಡೂ ಬಡವರಾದ ನಾವು ಕೂಲಿ ಕೆಲಸ ಮಾಡಿಕೊಂಡು ಆಶ್ರಯಕ್ಕೆ ಸರಿಯಾದ ಒಂದು ಮನೆ ಕೂಡ ಇಲ್ಲದೆ, ಜೀವನವನ್ನು ಸಾಗಿಸುತ್ತಿರುವ ನಮಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸಲು ಸಾಮರ್ಥ್ಯವಿಲ್ಲದ ನಾವು ನಮ್ಮ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಸರ್ ಅವರನ್ನು 6 ತಿಂಗಳ ಹಿಂದೆ ಭೇಟಿ ಮಾಡಿ ನಮ್ಮ ಅಳಲನ್ನು ಹೇಳಿಕೊಂಡೆವು. ಮಾನ್ಯ ಶಾಸಕರು ನಮ್ಮ ಸಂಕಷ್ಟವನ್ನು ಅರಿತು ಕೂಡಲೇ ಸಮಸ್ಯೆಗೆ ಸ್ಪಂದಿಸಿ, ಆರೋಗ್ಯ ಕ್ಷೇತ್ರದಲ್ಲಿ ಶಾಸಕರೊಂದಿಗೆ ಬೆರೆತು ಬಡ ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಚೋಕಂಡ ಸಂಜು ಸುಬ್ಬಯ್ಯರವರನ್ನು ಬರಮಾಡಿ, ಅವರೊಂದಿಗೆ ಈ ಸಮಸ್ಯೆಯನ್ನು ಯಾವ ರೀತಿಯಲ್ಲಿ ಬಗೆಹರಿಸಬಹುದು ಎಂದು ಇಬ್ಬರೂ ವಿಮರ್ಶೆ ಮಾಡಿ ನಮಗೆ ಸಹಾಯ ಮಾಡುವಂತೆ ತಿಳಿಸಿದರು.

ಸಂಜು ಸರ್ ಅವರು ಕೂಡಲೇ ಈ ನಮ್ಮ ಸಮಸ್ಯೆಯನ್ನು ಪರಿಹರಿಸಲು, ಅವರ ಸ್ನೇಹಿತರಾದ ಮಡಿಕೇರಿಯ Iksha Eye Hospitalನ ಡಾ. ಧ್ಯಾನ್ ಚಿಣ್ಣಪ್ಪನವರೊಟ್ಟಿಗೆ  ಮಾತನಾಡಿ ಈ ನಮ್ಮ ಸಮಸ್ಯೆಗೆ ಚಿಕಿತ್ಸೆ ಕೊಡಿಸಬೇಕಾಗಿ ವಿನಂತಿಸಿಕೊಂಡರು.ಸಂಜು ಸರ್ ಅವರ ವಿನಂತಿಗೆ ಸ್ಪಂದಿಸಿ,

ಡಾ. ಧ್ಯಾನ್  ಸರ್ ರವರು ಕೂಡ ಸಂಪೂರ್ಣ ಉಚಿತವಾಗಿ ಪರೀಕ್ಷೆ  ನಡೆಸಿಕೊಟ್ಟು, ನನ್ನ ಪತಿಯ ಕಣ್ಣಿಗೆ Xeroderma pigments with Corneal scaring ಎನ್ನೋ ಕಾಯಿಲೆ ಇದೆ ಎಂದು ದೃಢಪಟ್ಟ ಸಲುವಾಗಿ, ಈ ಕಾಯಿಲೆಯನ್ನು ಬೆಂಗಳೂರಿನ ಯಾವುದಾದರು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನುರಿತ ಕಣ್ಣಿನ ಶಸ್ತ್ರಚಿಕಿತ್ಸೆಯ ತಜ್ಞರಿಂದ ಮಾಡಿಸಬೇಕಾಗಿ ಸಲಹೆ ನೀಡಿದರು. 

ಅದೇ ರೀತಿಯಾಗಿ ಸಂಜು ಸುಬ್ಬಯ್ಯ ಸರ್ ಅವರು ಬೆಂಗಳೂರಿನ ಪ್ರತಿಷ್ಠಿತ ಕಣ್ಣಿನ Minto ಆಸ್ಪತ್ರೆಯ ನಿರ್ದೇಶಕರಾದ ಡಾ.ಸುರೇಶ್ ಬಾಬು ರವರನ್ನು ಸಂಪರ್ಕಿಸಿ, ನಮ್ಮ ಶಾಸಕರಿಂದ ಅವರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿಸಿ, ಈ ಶಸ್ತ್ರಚಿಕಿತ್ಸೆಯನ್ನು ಬಿ ಪಿ ಎಲ್ ಪಡಿತರ ಚೀಟಿಯ ಮೂಲಕ ಸರ್ಕಾರದ ABARK ಯೋಜನೆಯಡಿಯಲ್ಲಿ ಸಂಪೂರ್ಣ ಉಚಿತವಾಗಿ ಮಾಡಿಸಿಕೊಡುವಂತೆ ವಿನಂತಿಸಿಕೊಂಡು, ನಮ್ಮ ಶಾಸಕರಿಂದ ಶಿಫಾರಸ್ಸಿನ ಪತ್ರವನ್ನು ದೊರಕಿಸಿಕೊಟ್ಟು, ಬೆಂಗಳೂರಿಗೆ ಹೋಗಿ ಬರಲು ಸ್ವಂತ ಖರ್ಚಿಗೂ ಹಣವಿಲ್ಲದ ಸಮಯದಲ್ಲಿ,ನಮ್ಮ ಸ್ವಂತ ಖರ್ಚಿಗೆ ಶಾಸಕರು 10,000/-  ರೂಗಳನ್ನು ಸಹ ತುಂಬು ಮನಸ್ಸಿನಿಂದ ಕೊಟ್ಟಿರುತ್ತಾರೆ. 

ಬೆಂಗಳೂರಿನ Minto ಆಸ್ಪತ್ರೆಯ ನಿರ್ದೇಶಕರು ಕೂಡಲೇ ಆಸ್ಪತ್ರೆಯಲ್ಲಿ ನಮಗೆ ಬೇಕಾದ ಎಲ್ಲಾ  ಸಹಕಾರ ಹಾಗೂ ಸೌಕರ್ಯಗಳನ್ನೆಲ್ಲ ನೀಡಿ, ಅತೀ ಶೀಘ್ರದಲ್ಲಿ , ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನಡೆಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 ಚಿಕಿತ್ಸೆ ಮುಗಿದು 6 ತಿಂಗಳ ನಂತರ 7ನೇ ವಯಸ್ಸಿನಿಂದ ದೃಷ್ಟಿ ಕಾಣದ ನನ್ನ ಪತಿಯ ಎರಡು ಕಣ್ಣುಗಳಲ್ಲಿ, ಒಂದು ಕಣ್ಣಿಗೆ ಶೇಕಡ 80ರಷ್ಟು ಧೃಷ್ಟಿ ಬಂದು ಕಣ್ಣು ಚೆನ್ನಾಗಿ ಕಾಣುವಂತಾಗಿದೆ.

ನಮ್ಮಂತಹ ಕಡೂ ಬಡವರಿಗೆ ನೀವು ಮಾಡಿದಂತ  ಈ ನಿಮ್ಮ ಸೇವೆಯು ನಮ್ಮ ಜೀವನಪೂರ್ತಿ ಬೆಲೆಕಟ್ಟಲಾಗದಂತಹ ಉಡುಗೋರೆ ಎಂದು ಬಾವಿಸುತ್ತೇವೆ.

ನಮ್ಮ ನೆಚ್ಚಿನ ಶಾಸಕರಾದ   ಶ್ರೀ ಪೊನ್ನಣ್ಣ ಸರ್ ಹಾಗೂ ಸಮಾಜ ಸೇವಕರು ಆದ ಸಂಜು ಸುಬ್ಬಯ್ಯ ಸರ್ ಅವರೇ, ನೀವು ನಿಜವಾಗಿಯೂ ನಮ್ಮ ಪಾಲಿನ ಆಪತ್ಬಾಂದವರು. ನಿಮಗೆ ನಾವು ಯಾವಾಗಲೂ ಚಿರಋಣಿ.

ಧನ್ಯವಾದಗಳು🙏🙏

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!