ಸುಂಟಿಕೊಪ್ಪ ಜೂ.29: ಲಯನ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಸುಂಟಿಕೊಪ್ಪ ಲಯನ್ಸ್ ಕ್ಲಬ್ (ವಲಯ – III, ಪ್ರಾಂತ್ಯ – V, ಜಿಲ್ಲೆ – 317D) ವತಿಯಿಂದ 2026-27ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮಂಡಳಿಯ ಅಧಿಕಾರ ಪದಗ್ರಹಣ ಸಮಾರಂಭವು ನಾಳೆ ಜುಲೈ 1ರ ಬುಧವಾರದಂದು ಸಂಜೆ 7:00 ಗಂಟೆಗೆ ಸುಂಟಿಕೊಪ್ಪದ ಕೆನರಾ ಬ್ಯಾಂಕ್ ಎದುರಿನ ಪಿ.ಎ.ಸಿ.ಎಸ್ (PACS) ಸಭಾಂಗಣದಲ್ಲಿ ಆಯೋಜನೆಗೊಂಡಿದೆ.
ಕಾರ್ಯಕ್ರಮದಲ್ಲಿ ಲಯನ್ಸ್ ಜಿಲ್ಲೆ 317D ರ ಪ್ರಥಮ ಉಪ ಜಿಲ್ಲಾ ಗವರ್ನರ್ ಆಗಿರುವ ಲಯನ್ ಗೋವರ್ಧನ್ ಶೆಟ್ಟಿ MJF ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಬೋಧನೆ ಮಾಡಲಿದ್ದಾರೆ.
ಮುಂಬರುವ ಸಾಲಿಗೆ ನೂತನ ಅಧ್ಯಕ್ಷರಾಗಿ ಲಯನ್ ಶ್ರೀನಿವಾಸ್ ಎಸ್.ಜಿ., ಕಾರ್ಯದರ್ಶಿಯಾಗಿ ಲಯನ್ ಗ್ಲೆನ್ ಮೆನೆಜಸ್ ಹಾಗೂ ಖಜಾಂಚಿಯಾಗಿ ಲಯನ್ ಜಗನ್ನಾಥ್ ಕೆ.ಪಿ. ಅವರು ಅಧಿಕಾರ ವಹಿಸಿಕೊಳ್ಳಲಿದ್ದು, ಪ್ರಸ್ತುತ ಅಧ್ಯಕ್ಷರಾದ ಲಯನ್ ರಕ್ಷಿತ್ ಚೆಟ್ಟಿಮಾಡ ಹಾಗೂ ನಿರ್ಗಮಿತ ಪದಾಧಿಕಾರಿಗಳು ನೂತನ ಮಂಡಳಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಲಿದ್ದಾರೆ.
ಈ ಸಮಾರಂಭಕ್ಕೆ ಕ್ಲಬ್ನ ಸದಸ್ಯರು, ಅವರ ಕುಟುಂಬಸ್ಥರು ಭಾಗವಹಿಸಬೇಕಾಗಿ ಲಯನ್ಸ್ ಕ್ಲಬ್ ಕೋರಿದ್ದು, ಸಭಾ ಕಾರ್ಯಕ್ರಮದ ನಂತರ ಸ್ನೇಹಕೂಟ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




