Google search engine
Home♦️ಇತ್ತೀಚಿನ ಸುದ್ದಿಗಳು.ಇಂದು ಸಂಜೆ ಮಡಿಕೇರಿಯಲ್ಲಿ 27ನೇ ಕಾರ್ಗಿಲ್ ವಿಜಯ್ ದಿವಸ್, -140ಕ್ಕೂ ಅಧಿಕ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇಂದು...

ಇಂದು ಸಂಜೆ ಮಡಿಕೇರಿಯಲ್ಲಿ 27ನೇ ಕಾರ್ಗಿಲ್ ವಿಜಯ್ ದಿವಸ್, -140ಕ್ಕೂ ಅಧಿಕ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಇಂದು ಸಂಜೆ  ಪುಷ್ಪನಮನ, ಗಾನ ನಮನ ಕಾರ್ಯಕ್ರಮ.

ಮಡಿಕೇರಿ ಜು.26:  ಪ್ರತಿ ವರ್ಷ ಜುಲೈ 26ರಂದು ದೇಶ “ಕಾರ್ಗಿಲ್ ವಿಜಯ ದಿವಸ”ವನ್ನು ಆಚರಿಸುತ್ತದೆ. 1999ರಲ್ಲಿ ಪಾಕಿಸ್ತಾನಿ ಸೈನಿಕರು ಮತ್ತು ನುಸುಳುಕೋರರು ನಿಯಂತ್ರಣ ರೇಖೆ ದಾಟಿ ಕಾರ್ಗಿಲ್‌ನ ಟೈಗರ್ ಹಿಲ್, ಟೊಲೊಲಿಂಗ್, ಬಟಾಲಿಕ್‌ನಂತಹ ಎತ್ತರದ ಶಿಖರಗಳನ್ನು ಗುಪ್ತವಾಗಿ ಆಕ್ರಮಿಸಿಕೊಂಡಿದ್ದರು. ಇದನ್ನು ಗಮನಿಸಿದ ಭಾರತೀಯ ಸೇನೆ “ಆಪರೇಷನ್ ವಿಜಯ್” ಆರಂಭಿಸಿ, ಸಮುದ್ರಮಟ್ಟದಿಂದ 16,000 ಅಡಿಗಳಿಗೂ ಎತ್ತರದ ಕಡಿದಾದ ಪ್ರದೇಶದಲ್ಲಿ ಶತ್ರುವನ್ನು ಎದುರಿಸಿತು.

ಕ್ಯಾಪ್ಟನ್ ವಿಕ್ರಂ ಬಾತ್ರಾ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಸೇರಿದಂತೆ ಹಲವು ಯೋಧರು ಅಪ್ರತಿಮ ಶೌರ್ಯ ಮೆರೆದರು. ಸುಮಾರು ಎರಡು ತಿಂಗಳ ಸಂಘರ್ಷದಲ್ಲಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ಜುಲೈ 26, 1999ರಂದು ಭಾರತ ತನ್ನ ಎಲ್ಲಾ ಪ್ರದೇಶಗಳನ್ನು ಮರುವಶಪಡಿಸಿಕೊಂಡು ವಿಜಯ ಘೋಷಿಸಿತು.

ಈ ವಿಜಯೋತ್ಸವದ ನೆನಪಿನ ಗೌರವಾರ್ಥವಾಗಿ ಕೊಡಗು ಪತ್ರಕರ್ತರ ಸಂಘ (ರಿ) ಮಡಿಕೇರಿ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವುಗಳ ಪ್ರಸ್ತುತಿಯಲ್ಲಿ, 27ನೇ ಕಾರ್ಗಿಲ್ ವಿಜಯ್ ದಿವಸ್ 2026 “ಭಾರತೀಯ ಯೋಧರಿಗೆ ಗೌರವ ನಮನ” ಕಾರ್ಯಕ್ರಮವನ್ನು ಜುಲೈ 26, ಇಂದು (ಭಾನುವಾರ) ಸಂಜೆ 5.00 ಗಂಟೆಗೆ ಮಡಿಕೇರಿಯ ಗೌಡ ಸಮಾಜದಲ್ಲಿ  ಆಯೋಜಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ, ಶಕ್ತಿ ಪ್ರತಿಷ್ಠಾನ ಮಡಿಕೇರಿ, ಕೊಡಗು ಔಷಧಿ ವ್ಯಾಪಾರಸ್ಥರ ಸಂಘ, ಭಾರತೀಯ ಮೆಡಿಕಲ್ ಅಸೋಸಿಯೇಷನ್ ಕೊಡಗು ಘಟಕ, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ (ರಿ) ಮೂರ್ನಾಡು, ಕೂರ್ಗ್ ಹೋಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಮಡಿಕೇರಿ, ಜ್ಞಾನ ಗಂಗಾ ರೆಸಿಡೆನ್ಸಿಯಲ್ ಸ್ಕೂಲ್ ಅತ್ತೂರು-ಹಾರಂಗಿ, ಇನ್ನರ್ ವೀಲ್ ಮಡಿಕೇರಿ, ಶ್ರೀ ಅಯ್ಯಪ್ಪ ಫ್ಲವರ್ ಸ್ಟಾಲ್ ಮಡಿಕೇರಿ, ಕೊಡಗು ಜಿಲ್ಲಾ ಪೌಂಡ್ಸ್-ಲೈಟ್ಸ್-ಶಾಮಿಯಾನ ಡೆಕೋರೇಷನ್ ಮಾಲೀಕರ ಸಂಘ ಮಡಿಕೇರಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ಮಡಿಕೇರಿ, ಕೊಡಗು ಗೌಡ ಸಮಾಜ ಮಡಿಕೇರಿ ಹಾಗೂ ಚೇಂಬರ್ ಆಫ್ ಕಾಮರ್ಸ್ ಮಡಿಕೇರಿ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಈ 27ನೇ ಕಾರ್ಗಿಲ್ ವಿಜಯ್ ದಿವಸ್ – ಯೋಧರಿಗೆ ಗೌರವ ನಮನ ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.

ಉದ್ಘಾಟನೆ ಮತ್ತು ಗೀತ ಪ್ರಸ್ತುತಿ

ಕಾರ್ಯಕ್ರಮವನ್ನು ಆರ್ಮಿ ಕ್ಯಾಂಟೀನ್ ಮಡಿಕೇರಿಯ ಹಿರಿಯ ವ್ಯವಸ್ಥಾಪಕರಾದ ಲೆಫ್ಟಿನೆಂಟ್ ಕರ್ನಲ್ ಕಾವೇರಿಯಪ್ಪ ಎನ್.ಎಸ್ ಉದ್ಘಾಟಿಸಲಿದ್ದಾರೆ. ಹಾಗೂ ಮೈಸೂರಿನ ರಾಜೇಶ್ ಪಡಿಯಾರ್ ಮತ್ತು ತಂಡದವರು ದೇಶ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

140ಕ್ಕೂ ಅಧಿಕ ಸಂಘ-ಸಂಸ್ಥೆಗಳ ಸಹಭಾಗಿತ್ವ

ಈ ಬಾರಿ ದಾಖಲೆಯ 140ಕ್ಕು ಅಧಿಕ ಸಂಘಸಂಸ್ಥೆಗಳಾದ ಕೊಡಗು ಜಿಲ್ಲಾ ಬಂಟರ ಸಂಘ, ಜಾತ್ಯಾತೀತ ಜನತಾದಳ ಕೊಡಗು, ಎಸ್‌ಡಿಪಿಐ ಕೊಡಗು, ಪೊಮ್ಮಕ್ಕಡ ಕೂಟ ಮಡಿಕೇರಿ, ಪೊಮ್ಮಕ್ಕಡ ಕೂಟ ವಿರಾಜಪೇಟೆ, ಲಯನ್ಸ್ ಕ್ಲಬ್ ಮಡಿಕೇರಿ, ಲಯನ್ಸ್ ಕ್ಲಬ್ ಸುಂಟಿಕೊಪ್ಪ, ರೆಡ್ ಕ್ರಾಸ್ ಕೊಡಗು ಘಟಕ, ಶಾಂತಿ ನಿಕೇತನ ಯುವಕ ಸಂಘ ಮಡಿಕೇರಿ, ಕೊಡಗು ವಿದ್ಯಾಲಯ ಮಡಿಕೇರಿ, ಕೊಡಗು ಜಿಲ್ಲಾ ವಿಶ್ವಕರ್ಮ ಸಮಾಜ ಸೇವಾ ಸಂಘ ಮಡಿಕೇರಿ, ಮಹದೇವಪೇಟೆ ಮಹಿಳಾ ಸಹಕಾರ ಸಂಘ ಮಡಿಕೇರಿ, ಆರೋಹಣ ತಂಡ ಕೊಡಗು, ಜಿಲ್ಲಾ ಕುಲಾಲ ಸಮಾಜ ಕೊಡಗು, ಹಿಂದೂ ಮಲಯಾಳಿ ಸಮಾಜ ಕೊಡಗು, ಬಿಲ್ಲವ ಸಮಾಜ ಕೊಡಗು, ಜಿಲ್ಲಾ ಮೊಗೇರ ಸಮಾಜ ಕೊಡಗು, ದಲಿತ ಸಂಘರ್ಷ ಸಮಿತಿ ಕೊಡಗು, ಬ್ಯಾರಿ ವೆಲ್ವೇರ್ ಟ್ರಸ್ಟ್ ಮಡಿಕೇರಿ, ಕ್ರೈಸ್ತರ ಸೇವಾ ಸಂಘ ಮಡಿಕೇರಿ, ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು, ವೀರಶೈವ ಸಮಾಜ ಮಡಿಕೇರಿ, ಜಿಲ್ಲಾ ಜಮಾಅತ್ ಎ ಇಸ್ಲಾಂ ಹಿಂದ್ ಕೊಡಗು,

ಗೌಡ ಮಹಿಳಾ ಒಕ್ಕೂಟ ಚೇರಂಬಾಣಿ, ಸಮರ್ಥ ಕನ್ನಡಿಗರು ಸಂಸ್ಥೆ ಕೊಡಗು, ಕನ್ನಡ ಸಿರಿ ಸ್ನೇಹಬಳಗ ಕುಶಾಲನಗರ, ಗೌಡ ಸಮಾಜಗಳ ಒಕ್ಕೂಟ ಕೊಡಗು, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಮಹಿಳಾ ಸಂಘ, ಪೋಟೋಗ್ರಾಫರ್ಸ್ ಅಸೋಸಿಯೇಷನ್ ಕೊಡಗು, ಕೊಡವ ಸಮಾಜ ಮಾದಾಪುರ, ಕರ್ನಾಟಕ ನಾಯರ್ಸ್ ಸರ್ವೀಸ್ ಸೊಸೈಟಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ಮಡಿಕೇರಿ, ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕೊಡಗು, ಕೊಡಗು ಅಭಿವೃದ್ಧಿ ವೇದಿಕೆ, ತ್ರಿನೇತ್ರ ಯುವಕ ಸಂಘ ಹಾಕತ್ತೂರು, ಶ್ರೀ ಸೋಮೇಶ್ವರ ದೇವಾಲಯ ಸಮಿತಿ ಸೋಮವಾರಪೇಟೆ, ಕೊಡಗು ಗೌಳಿ ಸಮುದಾಯ, ಗೃಹರಕ್ಷಕ ದಳ ಕೊಡಗು, ವಾಹನ ಚಾಲಕರು ಮಾಲೀಕರ ಸಂಘ ಸೋಮವಾರಪೇಟೆ, ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ, ಮಾನವೀಯ ಸ್ನೇಹಿತರ ಒಕ್ಕೂಟ ಕೊಡಗು, ಟ್ಯಾಕ್ಸಿ ಡೈವರ್ಸ್ ಅಸೋಸಿಯೇಷನ್ ಸೋಮವಾರಪೇಟೆ, ಭಾರವಿ ಕನ್ನಡ ಸಂಘ ಕುಶಾಲನಗರ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಕುಶಾಲನಗರ, ಕೊಡಗು ಜನ ಅಭಿವೃದ್ಧಿ ಸಮಿತಿ ಮಡಿಕೇರಿ, ಮರ್ಕೇರಾ ಡೌನ್ಸ್ ಗಾಲ್ಫ್ ಕ್ಲಬ್ ಮಡಿಕೇರಿ, ಕಾಸ್ಕೋಪಾಲಿಟನ್ ಕ್ಲಬ್ ಮಡಿಕೇರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನೀಮಾ) ಕೊಡಗು, ದಸರಾ ದಶಮಂಟಪ ಸಮಿತಿ ಮಡಿಕೇರಿ, ಸೇವಾ ಭಾರತಿ ಕೊಡಗು, ಸರ್ವೋದಯ ಸಮಿತಿ ಮಡಿಕೇರಿ, ಎಸ್‌ಎನ್‌ಡಿಪಿ ಯೂನಿಯನ್ ಕೊಡಗು, ಸರ್ಕಾರಿ ನೌಕರರ ಸಂಘ ಕೊಡಗು, ಕೊಡಗು ಜಾನಪದ ಪರಿಷತ್ ಮಡಿಕೇರಿ, ಜಾನಪದ ಪರಿಷತ್ ಸೋಮವಾರಪೇಟೆ ತಾಲೂಕು ಘಟಕ, ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕ, ಕೊಡಗು ಲೇಖಕ ಮತ್ತು ಕಲಾವಿದರ ಬಳಗ, ಸವಿತಾ ಸಮಾಜ ಮಡಿಕೇರಿ, ಸೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ತಾಲ್ಲೂಕು, ಪೌರಕಾರ್ಮಿಕರ ಸಂಘ ಮಡಿಕೇರಿ, ಕೊಡಗು ಕಲಾವಿದರ ಸಂಘ, ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕ, ವೀರ ಮಡಿವಾಳರ ಸಂಘ ಕೊಡಗು, ಕೃಷಿ ಪತ್ತಿನ ಸಹಕಾರ ಸಂಘ ಮದೆ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಲಿ 2ನೇ ಮೊಣ್ಣಂಗೇರಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ, ಶ್ರೀಮತಿ ಡಿ. ಚೆನ್ನಮ್ಮ ಶಿಕ್ಷಣ ಸಂಸ್ಥೆ ಮಾದಾಪುರ,

ಕೂರ್ಗ್ ಟ್ರಾವೆಲ್ ಅಸೋಸಿಯೇಷನ್ ಮಡಿಕೇರಿ, ಕೊಡಗು ಯೋಗಿ ನಾರಾಯಣ ಬಲಿಜ ಸಮಾಜ ಮೂರ್ನಾಡು, ಕೊಡಗು ಹಿತರಕ್ಷಣಾ ವೇದಿಕೆ, ಜಿಲ್ಲಾ ಮಹಿಳಾ ಬರಹಗಾರರ ಸಂಘ ಕೊಡಗು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೊಡಗು, ಲಾರಿ ಮಾಲೀಕರ-ಚಾಲಕರ ಸಂಘ ಮಡಿಕೇರಿ, ಕನ್ನಡ ಭವನ ಮತ್ತು ಚುಟುಕು ಸಾಹಿತ್ಯ ಸಂಘ ಕೊಡಗು, ಜ್ಞಾನದೀಪ ದೈವಜ್ಞ ಬ್ರಾಹ್ಮಣ ಮಹಿಳಾ ಸಂಘ ಮಡಿಕೇರಿ, ಯೂರೋ ಕಿಡ್ಸ್ ಪಬ್ಲಿಕ್ ಸ್ಕೂಲ್ ಮಡಿಕೇರಿ, ಜೀಪು ಮಾಲೀಕರ ಮತ್ತು ಚಾಲಕರ ಸಂಘ ಮಾಂದಲಪಟ್ಟಿ ಕೊಡಗು, ಶ್ರೀ ಕೋದಂಡರಾಮ ರಾಮೋತ್ಸವ ಸಮಿತಿ ಮಡಿಕೇರಿ, ಗೌಡ ಸಮಾಜ ಕುಶಾಲನಗರ, ಗೌಡ ಸಮಾಜ ಗುಡ್ಡೆಹೊಸೂರು, ಗೌಡ ಯುವವೇದಿಕೆ ಕೊಡಗು, ಗೌಡ ನಿವೃತ್ತ ನೌಕರರ ಸಂಘ ಕೊಡಗು, ಗೌಡ ವಿದ್ಯಾ ಸಂಘ ಕೊಡಗು, ಗೌಡ ಮಹಿಳಾ ಒಕ್ಕೂಟ ಕೊಡಗು, ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ಮಡಿಕೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಡಗು, ಕೋಟೆ ಚನ್ನಯ್ಯ ಬಿಲ್ಲವರ ಸಮಾಜ ಕುಶಾಲನಗರ, ಕಲಾನಗರ ಸಾಂಸ್ಕೃತಿಕ ಕಲಾವೇದಿಕೆ ಮಡಿಕೇರಿ, ಜನನಿ ಮಹಿಳಾ ಮಂಡಳಿ ಮಡಿಕೇರಿ, ಸೌಟ್ಸ್ ಮತ್ತು ಗೈಡ್ಸ್ ಮಡಿಕೇರಿ ತಾಲೂಕು, ಭಾರತ್ ಸೇವಾ ದಳ ಕೊಡಗು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ, ಕರವೇ ಸ್ವಾಭಿಮಾನಿ ಬಣ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು, ಮಡಿಕೇರಿ ಮಾಜಿ ಸೈನಿಕರ ಸಂಘ, ಕೊಡಗು ಮಾಜಿ ಸೈನಿಕರ ಸಂಘ, ಮಾಜಿ ಸೈನಿಕರ ಸಂಘ ಕುಶಾಲನಗರ, ಮಾಜಿ ಸೈನಿಕರ ಸಂಘ ಸೋಮವಾರಪೇಟೆ, ಅರೆಸೇನಾ ಪಡೆ ನಿವೃತ್ತ ಯೋಧರ ಒಕ್ಕೂಟ, ಕೊಡಗು ಗೌಡ ಮಾಜಿ ಸೈನಿಕರ ಸಂಘ, ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಮಡಿಕೇರಿ, ಸ್ಥಸ್ಥ ವಿಶೇಷ ಮಕ್ಕಳ ಶಾಲೆ ಸುಂಟಿಕೊಪ್ಪ, ಕೊಡಗು ಶಿಶು ಕಲ್ಯಾಣ ಸಂಸ್ಥೆ ಮಡಿಕೇರಿ, ಕೊಡಗು ಜಿಲ್ಲಾ ಪೊಲೀಸ್ ಮಡಿಕೇರಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಕೊಡಗು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕೊಡಗು, ನಗರಾಭಿವೃದ್ಧಿ ಪ್ರಾಧಿಕಾರ ಮಡಿಕೇರಿ, ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಮಡಿಕೇರಿ, ವಕೀಲರ ಸಂಘ ಮಡಿಕೇರಿ, ರೋಟರಿ ಮಡಿಕೇರಿ ವುಡ್ಸ್, ರೋಟರಿ ಹಿಲ್ಸ್ ಸೋಮವಾರಪೇಟೆ, ರೋಟರಿ ಕ್ಲಬ್ ಶನಿವಾರಸಂತೆ, ರೋಟರಿ ಕ್ಲಬ್ ಗೋಣಿಕೊಪ್ಪ, ರೋಟರಿ ಕ್ಲಬ್ ಕುಶಾಲನಗರ, ಇನ್ನರ್ ವೀಲ್ ಸೋಮವಾರಪೇಟೆ, ತಮಿಳು ಯೂತ್ ಫೆಡರೇಷನ್ ಕೊಡಗು, ಕೊಡವ ಸಮಾಜ ಮಡಿಕೇರಿ, ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಕೊಡಗು ಮಡಿಕೇರಿ, ಕೊಡಗು ಚೇಂಬರ್ ಆಫ್ ಕಾಮರ್ಸ್, ಹೋಂಸ್ಟೇ ಅಸೋಸಿಯೇಷನ್ ಕೊಡಗು, ಜಿಲ್ಲಾ ಕಾಂಗ್ರೆಸ್ ಸಮಿತಿ ಕೊಡಗು, ಭಾರತೀಯ ಜನತಾ ಪಾರ್ಟಿ ಕೊಡಗು ಮತ್ತು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ಎಸ್.ಎನ್.ಡಿ.ಪಿ. ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ನಡೆಯುವ ಪುಷ್ಪನಮನ, ಗಾನ ನಮನ ಹಾಗೂ ಗೌರವ ನಮನದ ಮೂಲಕ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಕೊಡಗು ಪತ್ರಕರ್ತರ ಸಂಘದ (ರಿ) ಅಧ್ಯಕ್ಷ ಹೆಚ್.ಟಿ. ಅನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ. ಆರ್. ರಾಜೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಚೇತನ್ ಜಿ.ಡಿ ಹಾಗೂ ಕೊಡಗು ಪತ್ರಕರ್ತರ ಸಂಘ (ರಿ) ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿಯ ಎಲ್ಲಾ ಸದಸ್ಯರುಗಳು ಕಾರ್ಯಕ್ರಮಕ್ಕೆ ಸರ್ವರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!