ಕುಶಾಲನಗರ ಜೂ.29: ಶಾಸಕ ಮಂತರ್ ಗೌಡ ಅವರು ಜೂನ್ 30ರ ಮಂಗಳವಾರದಂದು ಕುಶಾಲನಗರ ತಾಲ್ಲೂಕಿನಾದ್ಯಂತ ಲಕ್ಷಾಂತರ ರೂಪಾಯಿಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ. ಪಿ. ಶಶಿಧರ್ ತಿಳಿಸಿದ್ದಾರೆ.
ಇದರ ಭಾಗವಾಗಿ ನಾಳೆ ಬೆಳಿಗ್ಗೆ 10:30ಕ್ಕೆ ಹೆಬ್ಬಾಲೆ ಶಾಲಾ ಆವರಣದಲ್ಲಿ ₹20 ಲಕ್ಷದ ರಂಗಮಂದಿರ ಕಾಮಗಾರಿಗೆ ಹಾಗೂ 11:15ಕ್ಕೆ ಕಣಿವೆ ರಾಮಲಿಂಗೇಶ್ವರ ದೇವಸ್ಥಾನದ ₹10 ಲಕ್ಷದ ಅಭಿವೃದ್ಧಿ ಕೆಲಸಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 12:00ಕ್ಕೆ ಕೂಡ್ಲೂರು ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ 12:30ಕ್ಕೆ ಕುಶಾಲನಗರ ಜಿ.ಎಂ.ಪಿ ಶಾಲೆಯ ₹39 ಲಕ್ಷ ವೆಚ್ಚದ ಕೊಠಡಿ ಮತ್ತು ತಡೆಗೋಡೆಯನ್ನು ಹಾಗೂ 1:15ಕ್ಕೆ ಬಸವನಹಳ್ಳಿ ಪ್ರೌಢಶಾಲೆಯ ₹35 ಲಕ್ಷದ ನೂತನ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನದ ವಿರಾಮದ ಬಳಿಕ, 3:00 ಗಂಟೆಗೆ 7ನೇ ಹೊಸಕೋಟೆ ಶಾಲೆಯ ₹17 ಲಕ್ಷದ ಹೊಸ ಕೊಠಡಿ ಉದ್ಘಾಟಿಸಲಿರುವ ಶಾಸಕರು, ಸಂಜೆ 3:30ಕ್ಕೆ ಸುಂಟಿಕೊಪ್ಪ ವಾಹನ ನಿಲ್ದಾಣದ ₹40 ಲಕ್ಷ ವೆಚ್ಚದ ಮೇಲ್ಚಾವಣಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೊನೆಯದಾಗಿ ಸಂಜೆ 4:30ಕ್ಕೆ ಕೆದಕ್ಕಲ್ ಪಂಚಾಯತ್ ವ್ಯಾಪ್ತಿಯ ಹೊರೂರು ಮಠದ ಬಳಿ ₹30 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ಎಲ್ಲಾ ಪ್ರಗತಿಪರ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ. ಪಿ. ಶಶಿಧರ್ ಕೋರಿದ್ದಾರೆ.




