Google search engine
Home♦️ಇತ್ತೀಚಿನ ಸುದ್ದಿಗಳು.ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ

ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ

ಸುಂಟಿಕೊಪ್ಪ ಮೇ 25 : ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

    ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ಭಾನುವಾರದಂದು ನಡೆದ ಬೆಳ್ಳಿ ಮಹೋತ್ಸವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಬಾಲಕೃಷ್ಣ ಮಾತನಾಡಿ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮನೋಭಾವನೆಯನ್ನು ಬೆಳಿಸಿಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮು ಬಾಳು ರೀತಿಯಲ್ಲಿ ಸಮಾಜ ಮುಖಿಯಾಗಿ ಬಾಳಿ ಎಂದು ಕರೆ ನೀಡಿದರು.

    ವರ್ಕ್ ಶಾಪ್ ಮಾಲೀಕರ ಸಂಘವು ಅಪರೂಪದಲ್ಲೇ ಅಪರೂಪವೆನಿಸಿದ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದು ಇದು ನಮ್ಮ ಉತ್ಸಾಹವನ್ನು ಹಿಮ್ಮಡಿಗೊಳಿಸಿದೆ. ಸುಂಟಿಕೊಪ್ಪವು ಸರ್ವ ಭಾಷಿಕರ ನೆಲೆಬೀಡಾಗಿದ್ದು ಸರ್ವ ಜನಾಂಗೀಯ ಶಾಂತಿಯ ತೋಟ ಎಂದು ಹೆಸರು ಪಡೆದಿದೆ ಇಂತಹ ಪ್ರದೇಶದಲ್ಲಿ ನಾವು ಸೇವೆ ಸಲ್ಲಿಸಿ ನಮ್ಮ ಮಕ್ಕಳಿಗೂ ಸನ್ಮಾನ ಪಡೆಯುತ್ತಿರುವುದು ಅತ್ಯಂತ ಸಂತಸದ ವಿಚಾರ ಯಾವುದೇ ಸಂಘ ಸಂಸ್ಥೆಗಳು ಸಮಾಜಮುಖಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಜನ ಮಾನಸದಲ್ಲಿ ಶಾಶ್ವತವಾದ ನೆಲೆ ಮತ್ತು ಸ್ಥಾನವನ್ನು ಪಡೆಯುತ್ತೇವೆ ಎಂದು ಹೇಳಿದರು.

    ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದ ರಾಜ್ಯ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ್ ಮಾತನಾಡಿ ವರ್ಕ್ ಶಾಪ್ ಮಾಲೀಕರ ಸಂಘವು ತರಕಾರಿ ಶಾಲೆಯ ಮಕ್ಕಳನ್ನು ಸನ್ಮಾನಿಸುವ ಮೂಲಕ ಒಂದು ಅನುಸರಣೆಯ ಮಾದರಿಯನ್ನು ಹುಟ್ಟು ಹಾಕಿದ್ದು ಸಮಾಜಕ್ಕೆ ಅಳಿಲು ಸೇವೆ ಮಾಡುವ ಅವಕಾಶ ಸಿಗುವುದು ಶ್ಲಾಘನೀಯ ವಿಚಾರವೆಂದು ಹೇಳಿದರು.

    ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷರಾದ ಪಿ ಆರ್ ಸುನಿಲ್ ಕುಮಾರ್ 25 ವರ್ಷಗಳ ಬೆಳವಣಿಗೆ ಹಾದಿಯನ್ನು ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು ಹಾಗೂ ಸಂಘದ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಸಕ್ರಿಯರಾಗಿದ್ದು ಇಬ್ಬರು ಮಾಜಿ ಅಧ್ಯಕ್ಷರುಗಳು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಪಿಆರ್ ಕುಮಾರ್ ಅಧ್ಯಕ್ಷರಾಗಿ ಪಿಎಸ್ ಸುನಿಲ್ ಕುಮಾರ್ ಸೇವೆ ಸಲ್ಲಿಸಿದನ್ನು ಉಲ್ಲೇಖಿಸಿದರು.

     ಸಭೆಯನ್ನು ಉದ್ದೇಶಿಸಿ ಮಾಜಿ ಅಧ್ಯಕ್ಷರಾದ ವಿಎಸ್ ಸಂತೋಷ್ ಮತ್ತು ಕೆ ಪಿ ವಿನೋದನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಕ್ಷ ಮಾಲೀಕರ ಸಂಘದ ಅಧ್ಯಕ್ಷರಾದ ಬಿ ಎಸ್ ರಮೇಶ್ ಮಾತನಾಡಿ ಸಂಘದ 25 ವರ್ಷದ ಸಂದರ್ಭದಲ್ಲಿ ತಾವು ಅಧ್ಯಕ್ಷರಾಗಿರುವುದು ತಮ್ಮ ಪಾಲಿನ ಸೌಭಾಗ್ಯ ಬಂದು ಹೇಳಿದರಾದ ಮುಂದೆಯೂ ಸಂಘದ ಸದಸ್ಯರು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಗುರುತಿಸಿಕೊಳ್ಳುವಂತೆ ಸದಸ್ಯರಿಗೆ ಕರೆ ನೀಡಿದರು.

    ಸರಕಾರಿ ಪ್ರೌಢಶಾಲೆ ಶೇಕಡ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಅತಿ ಹೆಚ್ಚು ಅಂಕಗಳನ್ನು ಪಡೆದ ಮೊದಲ 10 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

     ವೇದಿಕೆಯಲ್ಲಿ ಕೊಡಗು ಪತ್ರಕರ್ತರ ಸಂಘ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ ಸಿ ದಿನೇಶ್, ವರ್ಕ್ ಶಾಪ್ ಮಾಲೀಕರ ಸಂಘದ ಹಿರಿಯ ಸದಸ್ಯ ಸೋಮಣ್ಣನವರು ಉಪಸ್ಥಿತರಿದ್ದರು.

     ಬೆಳ್ಳಿ ಹಬ್ಬದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಉಪ ಪ್ರಾಂಶುಪಾಲ ಬಾಲಕೃಷ್ಣ ಪ್ರೌಢಶಾಲೆ ಶಿಕ್ಷಕಿ ಎಂಪಿ ಲಿಯೋನ ಸಭಾಸ್ ಇನ್ ಹಿರಿಯ ಪತ್ರಕರ್ತ ಹಾಗೂ ಸಂಘದ ಹಿರಿಯ ಸದಸ್ಯರಾದ ಸೋಮಣ್ಣನವರನ್ನು ಸನ್ಮಾನಿಸಲಾಯಿತು.

     ಮೊದಲಿಗೆ ಶಾಲಾ ಮಕ್ಕಳಿಂದ ಪ್ರಾರ್ಥನೆ, ಗತಿಸಿದ ಸದಸ್ಯರಿಗೆ ಮೌನ ಆಚರಣೆ ನಡೆಯಿತು. ಪಿ ಆರ್ ಸುನಿಲ್ ಸ್ವಾಗತಿಸಿ, ಎಮ್ ಎಸ್ ಸುನಿಲ್ ಕಾರ್ಯಕ್ರಮ ನಿರೂಪಿಸಿ ಪಿಆರ್ ಸುಕುಮಾರ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!