Google search engine
Home♦️ಇತ್ತೀಚಿನ ಸುದ್ದಿಗಳು.ಸುಂಟಿಕೊಪ್ಪದ ಎಸ್ ಎಸ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾಗುವ ಕವಿಶಿಷ್ಯ ಪಂಜೆ ಮಂಗೇಶರಾಯರ ಭವ್ಯ ವೇದಿಕೆಯಲ್ಲಿ 17ನೇ...

ಸುಂಟಿಕೊಪ್ಪದ ಎಸ್ ಎಸ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾಗುವ ಕವಿಶಿಷ್ಯ ಪಂಜೆ ಮಂಗೇಶರಾಯರ ಭವ್ಯ ವೇದಿಕೆಯಲ್ಲಿ 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು  ನಡೆಯಲಿದೆ.♦️ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ  ಕುರಿತಾಗಿ ಸಂಪೂರ್ಣ ಮಾಹಿತಿ.

ಮಡಿಕೇರಿ ಮೇ 26:  17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು 29.05.2026 ಮತ್ತು 30,05.2026 ರಂದು ಸುಂಟಿಕೊಪ್ಪದ ಎಸ್ ಎಸ್ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ನಿರ್ಮಿಸಲಾಗುವ ಕವಿಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯಲ್ಲಿ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಶೀದ್ ರವರು ಕಾರ್ಯನಿರ್ವಹಿಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರೂ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಡಾ

 ಮಂತರ್ ಗೌಡ ನಿರ್ವಹಿಸಲಿದ್ದಾರೆ. ಕಾರ್ಯಾಧ್ಯಕ್ಷರಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಗೌರವಾಧ್ಯಕ್ಷರಾಗಿ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಬೋಸರಾಜು ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ ಎ.ಎಸ್ ಪೊನ್ನಣ್ಣ ರವರು ಹಾಗೂ ಪೋಷಕರುಗಳಾಗಿ ಸಂಸದರು ವಿಧಾನ ಪರಿಷತ್ ಸದಸ್ಯರು ಸೇವೆ ಸಲ್ಲಿಸುತ್ತಿದ್ದಾರೆ.

   ದಿನಾಂಕ 29.05.2026ರ ಬೆಳಿಗ್ಗೆ ಎಂಟು ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜದ ಆರೋಹಣೆಯೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದೆ. 

      ಸುಂಟಿಕೊಪ್ಪ ಪ್ರದೇಶದಲ್ಲಿ ಸಮಾಜ ಸೇವೆ ಮಾಡಿ ತಮ್ಮ ಆದರ್ಶ ಮತ್ತು ತ್ಯಾಗಗಳಿಗೆ ಹೆಸರುವಾಸಿಯಾಗಿ  ಮರೆಯಾದ ಹಿರಿಯರ ಹೆಸರಿನಲ್ಲಿ, ಅವರ ನೆನಪಿಗಾಗಿ 19 ದ್ವಾರಗಳನ್ನು ನಿರ್ಮಿಸಲಾಗಿದ್ದು ಸಮಾಜದ ಗಣ್ಯರು ಇವುಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದು ಬೆಳಗ್ಗೆ 9:00ಗೆ ಸರಕಾರಿ ಪ್ರಾಥಮಿಕ ಶಾಲೆಯಿಂದ ಮುಖ್ಯ ರಸ್ತೆಗಾಗಿ ಶ್ರೀ ಅಯ್ಯಪ್ಪ ದೇವಾಲಯದ ಮುಖಾಂತರ ಗದ್ದೆ ಹಳ್ಳದ ಎಸ್ ಎಸ್ ಇಂಟರನ್ಯಾಷನಲ್ ಹಾಲ್ ನಲ್ಲಿ ನಿರ್ಮಿಸಲಾಗಿರುವ ಗುಂಡುಗುಟ್ಟಿ ಮಂಜನಾಥಯ್ಯ ಸಭಾಂಗಣದವರೆಗೆ ವಿವಿಧ ಕಲಾತಂಡಗಳು, ಕಳಶ ಹೊತ್ತ ಮಹಿಳೆಯರು, ವಾದ್ಯ ತಂಡಗಳು, ಸ್ರ್ತೀಶಕ್ತಿ, ಸಂಜೀವಿನಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಅಂಗನವಾಡಿ ಸದಸ್ಯರುಗಳು, ಶಿಕ್ಷಕರುಗಳು, ಜನಪ್ರತಿನಿಧಿಗಳು ಸೇರಿದಂತೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಲಿದೆ.

    ಸಾಹಿತಿ ಡಿ ಎನ್ ಕೃಷ್ಣಯ್ಯ ಮಹಾದ್ವಾರ, ಸಾಹಿತಿ ಜಿ.ಟಿ ನಾರಾಯಣ್ ರಾವ್ ಪುಸ್ತಕ ಮಳಿಗೆ, ಛಾಯಾಗ್ರಾಹಕ ಬಿ ಎಫ್ ಚಿತ್ರಕಲಾ ಪ್ರದರ್ಶನ ಮಳಿಗೆ. ಕಮಲ ಕರಿಯಪ್ಪ ಜ್ಞಾಪಕಾರ್ಥ ಸ್ತ್ರೀಶಕ್ತಿ ಮಳಿಗೆ, ಗುಂಡುಗುಟ್ಟಿ ಮಂಜುನಾಥಯ್ಯ ಸಭಾಂಗಣ ಮತ್ತು ಕವಿ ಶಿಷ್ಯ ಪಂಜೆ ಮಂಗೇಶರಾಯರ ವೇದಿಕೆಯ ಉದ್ಘಾಟನೆಯನ್ನು ಗಣ್ಯರು ಮಾಡಲಿದ್ದಾರೆ.

10.30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ನಾಡಗೀತೆ ರೈತ ಗೀತೆ ಕುಂಚಗಾಯನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳುವ ಸಭೆಯ ಅಧ್ಯಕ್ಷತೆಯನ್ನು ಸಮ್ಮೇಳನಾದ ಸರ್ವಾಧ್ಯಕ್ಷರಾದ ಅಬ್ದುಲ್ ರಶೀದ್ ವಹಿಸಿಕೊಳ್ಳಲಿದ್ದು ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು, 17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಡಾ. ಮಂತರ್ ಗೌಡ ನಿರ್ವಹಿಸಲಿದ್ದಾರೆ. ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎ ಲೋಕೇಶ್ ಕುಮಾರ್ ಸ್ವಾಗತಿಸಲಿದ್ದಾರೆ. ಪ್ರಾಸ್ತಾವಿಕ ನುಡಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ನಿರ್ವಹಿಸಲಿದ್ದು, ಸಮ್ಮೇಳನದ ನೆನಪಿಗಾಗಿ ಹೊರ ತರುವ ಸ್ಮರಣ ಸಂಚಿಕೆ “ಸಾಹಿತ್ಯ ಸೌಹಾರ್ದ” ವನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜು ರವರು ಬಿಡುಗಡೆಗೊಳಿಸಲಿದ್ದು ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ತಂಗಡಗಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ ಎ.ಎಸ್ ಪೊನ್ನಣ್ಣ ಉಪಸ್ಥಿತರಿರುತ್ತಾರೆ.

     ವಿವಿಧ ಸಾಹಿತ್ಯ ಕೃತಿಗಳನ್ನು ವೇದಿಕೆಯಲ್ಲಿರುವ ಗಣ್ಯರು ಬಿಡುಗಡೆಗೊಳಿಸಲಿದ್ದು ಜನಪ್ರತಿನಿಧಿಗಳಾದ ಸಂಸದ ಯದುವೀರ ಕೃಷ್ಣ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯರಾದ ಸುಜಾಕುಶಾಲಪ್ಪ, ವಿಧಾನಸಭಾ ಮಾಜಿ ಅಧ್ಯಕ್ಷರಾದ ಕೆ ಜಿ ಬೋಪಯ್ಯ, ಮಾಜಿ ಸಚಿವರಾದ ಅಪ್ಪಚ್ಚು ರಂಜನ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ ,ಕೊಡಗು ಜಿಲ್ಲಾ ಮಾಜಿ ಅಧ್ಯಕ್ಷರಾದ ಟಿ.ಪಿ ರಮೇಶ್ ಉಪಸ್ಥಿತರಿರುತ್ತಾರೆ. ಮುಖ್ಯ ಭಾಷಣಕಾರರಾಗಿ ಮೂಡಬಿದ್ರೆಯ ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಮಾತನಾಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷರಾದ ಅಬ್ದುಲ್ ರಶೀದ್ ರವರು ತಮ್ಮ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.

    ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರು, ಹಲವರು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರುತ್ತಾರೆ. 

    ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳಾದ ಇ.ಸುಲೇಮಾನ್ ರಚಿಸಿದ ರಾಗವಿಲ್ಲದ ಕವಿತೆ. ಹೆಚ್ ಮಂಜುನಾಥ್ ರಚಿಸಿದ ಮನುಷ್ಯತ್ವದ ಸಾರ. ಜಯಪ್ರಕಾಶ್ ಪುತ್ತೂರು ರಚಿಸಿದ ವ್ಯಕ್ತಿತ್ವ ವಿಕಸನದ ವಿಚಾರ ಧಾರೆ. ಡಾಕ್ಟರ್ ಬೆಸೂರು ಮೋಹನ್ ಪಾಳೆಗಾರ್ ರಚಿಸಿದ ಸ್ವಾತಂತ್ರ್ಯ ಕ್ರಾಂತಿಯ ಕಿಡಿ. ಗಣೇಶ ಶರ್ಮ ರಚಿಸಿದ ಮಕ್ಕಳ ಕಥೆ. ಹೇಮಂತ್ ಪಾರೇರ ರಚಿಸಿದ ಶಕುನದ ಹಕ್ಕಿ, ಲಾವಣ್ಯ ಮೋಹನ್ ರಚಿಸಿದ ಛಾಯಾ ಕೃತಿಗಳು ಬಿಡುಗಡೆಗೊಳ್ಳುತ್ತಿವೆ.

     ಉದ್ಘಾಟನಾ ಕಾರ್ಯಕ್ರಮದ ನಂತರ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆಯ ಗಾಯಕರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

      ನಂತರ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ವೈದ್ಯರು ಮತ್ತು ಸಾಹಿತಿಗಳಾದ ಡಾ. ಕೆ.ಬಿ ಸೂರ್ಯ ಕುಮಾರ್ ಅವರು ವಹಿಸಲಿದ್ದು ಆಶಯ ನುಡಿಯನ್ನು ಸಾಹಿತಿಗಳಾದ ಕಾಜೂರು ಸತೀಶ್ ನಡೆಸಿಕೊಡಲಿದ್ದಾರೆ.

     ಕೊಡಗು ಕಂಡ ಮಹಿಳಾ ಸಾಹಿತಿಗಳು ಮತ್ತು ಅವರ ಕೃತಿಗಳು ವಿಚಾರವಾಗಿ ಸಾಹಿತಿ ಎನ್.ಕೆ ಮಾಲಾದೇವಿ ಮೂರ್ತಿ ಉಪನ್ಯಾಸ ನೀಡಲಿದ್ದಾರೆ. ಪ್ರವಾಸೋದ್ಯಮ ಮತ್ತು ಕೈಗಾರಿಕೋತ್ಸವದಲ್ಲಿ ಆಗಬೇಕಾದ ಮೂಲಭೂತ ಸೌಕರ್ಯ ಕುರಿತು ಕೊಡಗು ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಲಿದ್ದಾರೆ. ವನ್ಯಜೀವಿಗಳ ಉಪಟಳ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರರಾದ ಎಸ್.ಜಿ ಉಮೇಶ್ ಉಪನ್ಯಾಸ ನೀಡಲಿದ್ದಾರೆ.

       ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿ ಪರಿಷತ್ತಿನ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿರುವ 10 ದತ್ತಿದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಮತ್ತು ತಾಲೂಕು ಮತ್ತು ಹೋಬಳಿ ಅಧ್ಯಕ್ಷರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

       ಸಂಜೆ 6:00 ಗಂಟೆಗೆ ಜಿಲ್ಲೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.

     ದಿನಾಂಕ 30.05.2026ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಕೋಡಿರ ಲೋಕೇಶ್ ಮೊಣ್ಣಪ್ಪ ವಹಿಸಿಕೊಳ್ಳಲಿದ್ದು, ಆಶಯ ನುಡಿಯನ್ನು ಶಕ್ತಿ ಪತ್ರಿಕೆಯ ಸಂಪಾದಕರಾದ ಜಿ.ಚಿದ್ವಿಲಾಸ್ ನಡೆಸಿ ಕೊಡಲಿದ್ದಾರೆ. ಕನ್ನಡ ಕಥಾ ಜಗತ್ತು ಮತ್ತು ಕೊಡಗು ಕುರಿತು ಸಾಹಿತಿ ಡಾ.ಜೆ ಸೋಮಣ್ಣ, ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಕುರಿತು ಕೃಷಿ ವಿಜ್ಞಾನಿ ಡಾ. ಮುರುಳಿಧರ್ ಮಾತನಾಡಲಿದ್ದಾರೆ. ಸಾಹಿತ್ಯ ಕ್ಷೇತ್ರದತ್ತ ಯುವ ಪೀಳಿಗೆಯನ್ನು ಆಕರ್ಷಿಸುವ ದಾರಿ ಕುರಿತು ಆರ್ ಕೆ ಬಾಲಚಂದ್ರ ರವರು ಮಾತನಾಡಲಿದ್ದು, ಕೊಡಗು ಕ್ರೀಡೆಯ ತವರೂರು ಆಗಬೇಕಾದ ಅನುಕೂಲತೆಗಳ ಕುರಿತು ಚೆಪ್ಪುಡಿರ ಕಾರ್ಯಪ್ಪ ಮಾತನಾಡಲಿದ್ದಾರೆ

ಅಪರಾಹ್ನ ನಡೆಯುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಕೃಪಾ ದೇವರಾಜ್ ವಹಿಸಲಿದ್ದು, ಆಶಯ ನುಡಿಯನ್ನು ಸಾಹಿತಿ ಲಾವಣ್ಯ ಮೋಹನ್ ಆಡಲಿದ್ದಾರೆ.

    ಜಿಲ್ಲೆಯ ಕವಿಗಳಾದ ಇ.ಸುಲೇಮಾನ್, ವಿಜಯಲಕ್ಷ್ಮಿ ಮಂಜುನಾಥ್, ಹೇಮಂತ್ ಪಾರೇರ, ರಾಧಿಕಾ ವಿಶ್ವನಾಥ್, ವಹೀದ್ ಜಾನ್, ಗೀತಾಂಜಲಿ ಮಹೇಶ್, ಪಿ.ಎಫ್ ಸಭಾಸ್ಟಿನ್, ಭಾಗೀರಥಿ, ದಿಲೀಶ್ ನಾಯರ್, ಸುನಿತಾ ವಿಶ್ವನಾಥ್, ಸತೀಶ್ ಬಿ ಎಸ್, ಜಗದೀಶ್ ಜೋಡುಬಿಟಿ, ರಂಜಿತ್ ಕವಲಪಾರ, ಶಾಪಿ ಅನ್ಸಾರಿ ಕಾಫಿ ಭಾಗವಹಿಸಲಿದ್ದಾರೆ.

     ಮಧ್ಯಾಹ್ನ 1:00ಗೆ ಜಿಲ್ಲೆಯ ಉದ್ಯೋನ್ಮುಖ ಗಾಯಕರಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.

   ನಂತರ ನಡೆಯುವ ಬಹಿರಂಗ ಆಧಿವೇಶನದಲ್ಲಿ ಕೊಡಗಿನ ಸಮಸ್ಯೆಗಳ ಕುರಿತು ನಿರ್ಣಯ ಮಂಡಿಸಿ ಸಂಬಂಧಪಟ್ಟ ಇಲಾಖೆ ಮತ್ತು ಸರಕಾರಕ್ಕೆ ನಿರ್ಣಯ ಸಲ್ಲಿಸಲಾಗುವುದು.

 ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳು ವಕೀಲರು ಆದ ಕೆ.ಪಿ ಬಾಲಸುಬ್ರಹ್ಮಣ್ಯ ಅವರು ವಹಿಸಲಿದ್ದಾರೆ. ಕಿರಿಕೊಡ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮಿಗಳು ಸಾಧಕರನ್ನು ಸನ್ಮಾನಿಸಲಿದ್ದಾರೆ.

   ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ರಾಷ್ಟ್ರೀಯ ಫುಟ್ಬಾಲ್ ತೀರ್ಪುಗಾರರಾದ ದಿರಜ್ ಕುಮಾರ್. ಅಂತರರಾಷ್ಟ್ರೀಯ ಹಾಕಿ ತರಬೇತಿದಾರರಾದ ಅಂಕಿತ ಸುರೇಶ್, ಅಂತರರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರರಾದ ನವನೀತ ಆದರ್ಶ, ಸೆಸ್ಟೋಬಾಲ್ ರಾಷ್ಟ್ರೀಯ ಕ್ರೀಡಾಪಟುಗಳಾದ ಇರ್ಶಾಕ್ ಮುಸ್ತಾಫ ಮತ್ತು ಸಾಯಿಲ್ ಉಸ್ಮಾನ್ ರವರನ್ನು ಸನ್ಮಾನಿಸಲಾಗುವುದು.

 ತಮ್ಮ ಜೀವಮಾನದ ಸಾಧನೆಗಾಗಿ ಸಾಹಿತ್ಯ ಕ್ಷೇತ್ರದಿಂದ ಸಾಹಿತಿ ವಿರಾಜಪೇಟೆಯ ಪಿ.ಎಸ್ ವೈಲೇಶ್, ಶಿಕ್ಷಣ ಕ್ಷೇತ್ರದಿಂದ ಗೋಣಿಕೊಪ್ಪಲಿನ ಹೆಚ್.ಕೆ ಕುಮಾರ್, ಜ್ಞಾನವಿಜ್ಞಾನ ಸೇವೆ ಕ್ಷೇತ್ರದಿಂದ ಕುಶಾಲನಗರದ ಟಿ.ಜಿ ಪ್ರೇಮ್ ಕುಮಾರ್, ಸೇನಾ ವಲಯದಿಂದ ಹರದೂರು ಗ್ರಾಮದ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ ಕುಮಾರ್, ಸಹಕಾರ ಕ್ಷೇತ್ರದಿಂದ ಸುಂಟಿಕೊಪ್ಪದ ಚಟ್ರಂಡ ಲೀಲಾ ಮೇದಪ್ಪ,  ಸಮಾಜ ಸೇವ ಕ್ಷೇತ್ರದಿಂದ ಅಮ್ಮತ್ತೀಯ ಚೋಕಂಡ ಸಂಜು ಸುಬ್ಬಯ್ಯ, ರಂಗಭೂಮಿ ಕ್ಷೇತ್ರದಿಂದ ಕುಶಾಲನಗರದ ಬರಮಣ್ಣ ಬೆಟ್ಟಗೇರಿ, ಜನಸೇವೆ ಕ್ಷೇತ್ರದಿಂದ ಸುಂಟಿಕೊಪ್ಪದ ಜರ್ಮಿ ಡಿಸೋಜ, ಉದ್ಯಮ ಕ್ಷೇತ್ರದಿಂದ ಸುಂಟಿಕೊಪ್ಪದ ಆರ್. ಶಾಂತರಾಮ್ ಕಾಮತ್, ಜನಪದ ಕ್ಷೇತ್ರದಿಂದ ಯವಕಪಾಡಿ ಗ್ರಾಮದ ಕುಡಿಯರ ಯಶೋಧ, ಗಾಯನ ಕ್ಷೇತ್ರದಿಂದ ಬಾಳೆಲೆಯ ಅನ್ವಿತ್ ಕುಮಾರ್, ನೃತ್ಯ ಕ್ಷೇತ್ರದಿಂದ ಮಡಿಕೇರಿಯ ಏಂಜಲ್ ರಶ್ಮಿ, ಮಾಧ್ಯಮ ಕ್ಷೇತ್ರದಿಂದ ಕೊಡೆಗರ ಹಳ್ಳಿಯ ಬಿ.ಸಿ ದಿನೇಶ್, ಜಾನಪದ ಪರಿಕರ ಕ್ಷೇತ್ರದಿಂದ ಮದೇನಾಡಿನ ಶ್ರೀಮತಿ ತೋಟಂಬೈಲು ಪಾರ್ವತಿ ಮೋಹನ್, ವೈದ್ಯಕೀಯ ಕ್ಷೇತ್ರದಿಂದ ಮಡಿಕೇರಿಯ ಡಾ.ಚೆರಿಯಮನೆ ಪ್ರಶಾಂತ್, ನಾಟಿ ವೈದ್ಯ ಕ್ಷೇತ್ರದಿಂದ ಗಾಳಿಬೀಡಿನ ಶ್ರೀ ವಿಶ್ವನಾಥ್ ರೈ, ಕೃಷಿ ಕ್ಷೇತ್ರದಿಂದ ಸಿದ್ದಲಿಂಗಪುರದ ರಾಮಣ್ಣಗೌಡ, ನೈರ್ಮಲ್ಯ ಕ್ಷೇತ್ರದಿಂದ ಸುಂಟಿಕೊಪ್ಪದ ಶ್ರೀ ಮುರುಗೇಶ್, ನಾಣ್ಯ ಮತ್ತು ನೋಟುಗಳ ಸಂಗ್ರಹ ಕ್ಷೇತ್ರದಿಂದ ವಿರಾಜಪೇಟೆಯ ಎಂ.ಎನ್ ಅಜಯ್ ರಾವ್ ಗೌರವ ಸನ್ಮಾನ ಸ್ವೀಕರಿಸಲಿದ್ದಾರೆ.

    ಈ ಬಾರಿ ವಿಶೇಷವಾಗಿ ವಿಶೇಷ ಚೇತನರಲ್ಲಿ ಸಾಧನೆಗೈದವರನ್ನು ಗುರುತಿಸುವ ಮತ್ತು ಬಾಲ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ವಿಶೇಷ ಚೇತನರ ಕ್ರೀಡಾ ಕ್ಷೇತ್ರದಿಂದ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಪದಕ ಗಳಿಸಿದ ಸುಂಟಿಕೊಪ್ಪದ ಜಂಶೇದ್, ಯೋಗಾಸನದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಪಾಲಿಬೆಟ್ಟದ ಸುಮೇಶ್, ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕುಮಾರಿ ನಿಷ್ಬಾ ಹಾಗೂ ವಿಶೇಷ ಚೇತನರ ಕ್ಷೇತ್ರದ ಅಧ್ಯಾಪಕ ಶಿವರಾಜ್ ರವರನ್ನು ಸನ್ಮಾನಿಸಲಾಗುವುದು.

    ಬಾಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾಷಣ ಕಲೆಯಲ್ಲಿ ಗುರುತಿಸಿಕೊಂಡಿರುವ ಸುಂಟಿಕೊಪ್ಪದ ಕುಮಾರಿ ಶ್ರೀಶ, ಟೆನ್ನಿಸ್ ಕ್ರೀಡೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ಕಾನ್ ಬೈಲು ಗ್ರಾಮದ ಕು.ತನುಷ್ ಶೇಖರ್ ಯೋಗದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಮಲೆನಾಡು ಗ್ರಾಮದ ಕುಮಾರಿ ಸಿಂಚನ ಗಾಯನದಲ್ಲಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಲ್ಲೂರು ಗ್ರಾಮದ ಕು.ಸುಮುಕ್ ಗಾಂಧಾರ ವಿದ್ಯೆಯಲ್ಲಿ ಸಾಧನೆಗೈದಿರುವ ಗೋಣಿಕೊಪ್ಪಲಿನ ಕು. ಪ್ರದೋತ್ ಮತ್ತು ಕುಶಾಲನಗರದ ಕು. ಕೆ. ಎಸ್ ಚಿನ್ಮಿತ್ ರವರನ್ನು ಸನ್ಮಾನಿಸಲಾಗುವುದು.

    ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ರವರು ವಹಿಸಲಿದ್ದು ವಿಶೇಷ ಆಹ್ವಾನಿತರಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಬೋಸರಾಜು ಮತ್ತು ಮಡಿಕೇರಿ  ವಿಧಾನಸಭಾ ಕ್ಷೇತ್ರದ ಶಾಸಕರೂ, ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರು ಆದ ಡಾ.ಮಂತರ ಗೌಡ ಭಾಗವಹಿಸಲಿದ್ದಾರೆ. ಆಶಯ ನುಡಿಯನ್ನು ಸಮ್ಮೇಳನ ಅಧ್ಯಕ್ಷ ಅಬ್ದುಲ್ ರಶೀದ್ ನೆರವೇರಿಸಲಿದ್ದಾರೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಸಮ್ಮೇಳನದ ಸಮಾರಂಭ ಭಾಷಣ ಮಾಡಲಿದ್ದಾರೆ. ಅತಿಥಿಗಳಾಗಿ ಹಲವಾರು ಗಣ್ಯರು ಮತ್ತು ಉಪಸಮಿತಿಗಳ ಅಧ್ಯಕ್ಷರು ಮತ್ತು ಸಂಚಾಲಕರು ಭಾಗವಹಿಸಲಿದ್ದಾರೆ. ಎಂದು  ಇಂದು ಮಡಿಕೇರಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ  ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಲಾಯಿತು. 

ಪತ್ರಿಕಾಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ ಕೇಶವ ಕಾಮತ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ ಪಿ ರಮೇಶ್,   17ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಎ ಲೋಕೇಶ್ ಕುಮಾರ್, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ    ಕೆ.ಎಸ್.ನಾಗೇಶ್ ,  ಸುಂಟಿಕೊಪ್ಪ ಹೋಬಳಿಯ ಅಧ್ಯಕ್ಷ ರಾದ

 ಪಿ .ಎಪ್. ಸೆಬಾಸ್ಟ್ಯನ್ , ಸದಸ್ಯರಾದ ಬಿ.ಸಿ  ದಿನೇಶ್ ಅವರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!