ಹಾಸನ ಜೂ. 26: ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮತ್ತು ಹಾಸನದ ವಿಜಯನಗರ ಬಡಾವಣೆಯ ಟಾರ್ಗೆಟ್ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ‘ನಾ ಮೆಚ್ಚಿದ ಪುಸ್ತಕ’ ವಿದ್ಯಾರ್ಥಿಗಳ ಓದು ಕಾರ್ಯಕ್ರಮವನ್ನು ಇದೆ ತಿಂಗಳ 29 ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಟಾರ್ಗೆಟ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಇದೇ ಸಂದರ್ಭದಲ್ಲಿ ‘ಮನೆಗೊಂದು ಗ್ರಂಥಾಲಯ’ ಹಾಸನ ಜಿಲ್ಲಾ ಜಾಗೃತ ಸಮಿತಿ ಪ್ರಮಾಣ ಪತ್ರಗಳನ್ನು ವಿತರಿಸಲಿದ್ದಾರೆ.
ಟಾರ್ಗೆಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಚ್. ಕೆ. ರಾಹುಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಾಸನದ ಖ್ಯಾತ ಸಾಹಿತಿಗಳಾದ ಗೊರೂರು ಅನಂತರಾಜು ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಕುಶಾಲ್ ಬರಗೂರು ಹಾಗೂ ಟಾರ್ಗೆಟ್ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎ. ಹೆಚ್. ಗಣೇಶ್ ಅಂಕಪುರ ಅವರು ಭಾಗವಹಿಸಲಿದ್ದಾರೆ. ಈ ವಿಶಿಷ್ಟ ಪುಸ್ತಕ ಓದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಭೂಮಿಕ ಎಸ್. ಗೌಡ, ಸಮೀಕ್ಷಾ, ವರ್ಷಿಣಿ ಜಿ.ಆರ್., ಇಂಚರ ಗೌಡ, ಹರ್ಷಿತಾ, ತೇಜಸ್ವಿನಿ, ಅನು ಮತ್ತು ಚಾಂದಿನಿ ಅವರುಗಳು ತಾವು ಮೆಚ್ಚಿದ ಪುಸ್ತಕಗಳ ಕುರಿತು ಓದಲಿದ್ದಾರೆ.




