Google search engine
Home♦️ಇತ್ತೀಚಿನ ಸುದ್ದಿಗಳು.​ ಜುಲೈ 19 ರಂದು ಕುಶಾಲನಗರದಲ್ಲಿ ‘ಈಶ ಗ್ರಾಮೋತ್ಸವ 2026’ ಥ್ರೋಬಾಲ್ ಪಂದ್ಯಾವಳಿ; ₹5 ಲಕ್ಷ...

​ ಜುಲೈ 19 ರಂದು ಕುಶಾಲನಗರದಲ್ಲಿ ‘ಈಶ ಗ್ರಾಮೋತ್ಸವ 2026’ ಥ್ರೋಬಾಲ್ ಪಂದ್ಯಾವಳಿ; ₹5 ಲಕ್ಷ ಗೆಲ್ಲುವ ಸುವರ್ಣ ಅವಕಾಶ

ಕುಶಾಲನಗರ, ಜು.04: ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬ ಎಂದೇ ಪ್ರಸಿದ್ಧಿಯಾಗಿರುವ ‘ಈಶ ಗ್ರಾಮೋತ್ಸವ 2026’ರ ಭಾಗವಾಗಿ, ಕೊಡಗು ಜಿಲ್ಲೆಯ ಕುಶಾಲನಗರದ ‘ಪಿ ಎಂ ಶ್ರೀ ಶಾಲೆ’ ಆವರಣದಲ್ಲಿ ಬರುವ ಜುಲೈ 19ರ ಭಾನುವಾರದಂದು ಮಹಿಳೆಯರಿಗಾಗಿ ಬೃಹತ್ ಥ್ರೋಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

 ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಕ್ರೀಡಾಕೂಟಕ್ಕೆ ಯಾವುದೇ ಪ್ರವೇಶ ದರ ಇರುವುದಿಲ್ಲ.

 ಈ ಪಂದ್ಯಾವಳಿಯ ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾಗುವ ತಂಡಗಳಿಗೆ ಕ್ರಮವಾಗಿ ₹10,000, ₹7,000, ₹5,000 ಹಾಗೂ ₹3,000 ನಗದು ಬಹುಮಾನ ನೀಡಲಾಗುತ್ತದೆಯಲ್ಲದೆ, ಅಂತಿಮವಾಗಿ ಫೈನಲ್ ಮಟ್ಟದಲ್ಲಿ ವಿಜೇತರಾಗುವ ತಂಡಕ್ಕೆ  ₹5 ಲಕ್ಷ ನಗದು ಬಹುಮಾನ ಗೆಲ್ಲುವ ಮಹತ್ತರ ಅವಕಾಶ ಕಲ್ಪಿಸಲಾಗಿದೆ.

​ಗ್ರಾಮೀಣ ಭಾಗದ ನೈಜ ಪ್ರತಿಭೆಗಳಿಗೆ ಮಾತ್ರ ಮುಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಪಂದ್ಯಾವಳಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಅನ್ವಯಿಸಲಾಗಿದೆ. 

ಕ್ರೀಡಾಕೂಟದಲ್ಲಿ ಭಾಗವಹಿಸುವ ತಂಡದ ಎಲ್ಲಾ ಆಟಗಾರರು ಕಡ್ಡಾಯವಾಗಿ ಒಂದೇ ಗ್ರಾಮ ಪಂಚಾಯಿತಿಗೆ ಸೇರಿದವರಾಗಿರಬೇಕು ಮತ್ತು ಎಲ್ಲರ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯವಾಗಿದೆ. ಆಟಗಾರರಿಗೆ ಕನಿಷ್ಠ 13 ವರ್ಷ ವಯಸ್ಸಾಗಿರಬೇಕಾಗಿದ್ದು, ತಂಡದಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗರಿಷ್ಠ ಮೂವರಿಗೆ ಮಾತ್ರ ಆಡಲು ಅವಕಾಶವಿರುತ್ತದೆ. 

ಅಲ್ಲದೆ, ಗ್ರಾಮೀಣ ಆಟಗಾರರಿಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಅಂತರರಾಷ್ಟ್ರೀಯ, ರಾಷ್ಟ್ರೀಯ, ಸೌತ್ ಝೋನ್ ಮತ್ತು ಯೂನಿವರ್ಸಿಟಿ (Form-3) ಮಟ್ಟದ ವೃತ್ತಿಪರ ಆಟಗಾರರ ಭಾಗವಹಿಸುವಿಕೆಯನ್ನು ನಿರ್ಬಂಧಿಸಲಾಗಿದೆ. 

ಆಸಕ್ತ ತಂಡಗಳು ishagramotsavam.sadhguru.org ವೆಬ್‌ಸೈಟ್ ಮೂಲಕ ಇಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಮೊಬೈಲ್ ಸಂಖ್ಯೆ 8861641755 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!