ಕುಶಾಲನಗರ ಮೇ.30: ನೂತನ ಕುಶಾಲನಗರ ತಾಲ್ಲೂಕಿನ ಪ್ರಥಮ ತಹಶೀಲ್ದಾರರಾಗಿ ಜನಪರ, ದಕ್ಷ ಹಾಗೂ ಕ್ರಿಯಾಶೀಲ ಆಡಳಿತ ನೀಡಿದ ಕಿರಣ್ ಗೌರಯ್ಯ ಅವರು ತಮ್ಮ ವೃತ್ತಿ ಜೀವನದ ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ರ ಭಾನುವಾರ (ನಾಳೆ) ಕುಶಾಲನಗರದ ಕಲಾಭವನದಲ್ಲಿ ಅವರಿಗೆ ‘ಪ್ರಜ್ಞಾವಂತ ನಾಗರಿಕ ವೇದಿಕೆ’ ಮತ್ತು ತಾಲ್ಲೂಕಿನ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯ ನಾಗರಿಕ ಸನ್ಮಾನ ಹಾಗೂ ಪ್ರೀತಿಪೂರ್ವಕ ಬೀಳ್ಗೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.
ತಾಲ್ಲೂಕು ಕಚೇರಿಗೆ ಪ್ರತಿನಿತ್ಯ ಅಳುಕಿನಿಂದಲೇ ಬರುತ್ತಿದ್ದ ಜನಸಾಮಾನ್ಯರನ್ನು ಸೌಜನ್ಯದಿಂದ ಕರೆದು, ಕೂರಿಸಿ, ಅವರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿಕೊಡುವ ಕಿರಣ್ ಗೌರಯ್ಯ ಅವರ ಕಾರ್ಯಶೈಲಿ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು
ಒಳಿತನ್ನು ಪುರಸ್ಕರಿಸುವ ಮತ್ತು ಒಳ್ಳೆಯವರನ್ನು ಬೆಂಬಲಿಸುವ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪ್ರಜ್ಞಾವಂತ ನಾಗರಿಕ ವೇದಿಕೆಯು, ತಾಲ್ಲೂಕಿನ ಸಜ್ಜನ ನಾಗರಿಕರ ಸಮ್ಮುಖದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು. ವಿ.ಪಿ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ




