Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಸುಂಟಿಕೊಪ್ಪದಲ್ಲಿ ಆಟೋ ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜೆ; ದಾನಿಗಳು, ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಸನ್ಮಾನ

by Kodagu Varadi•ಅಕ್ಟೋಬರ್ 20, 2026BREAKING
ಸುಂಟಿಕೊಪ್ಪದಲ್ಲಿ ಆಟೋ ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜೆ; ದಾನಿಗಳು, ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಸನ್ಮಾನ

ಸುಂಟಿಕೊಪ್ಪ ಆ.20 : ಇಲ್ಲಿನ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇಂದು ಆಯುಧ ಪೂಜೆ ಹಾಗೂ ಸಮಾರಂಭದ ವೇದಿಕೆ ಕಾರ್ಯಕ್ರಮವು ಅತ್ಯಂತ ವಿಜೃಂಭಣೆ ಮತ್ತು ಸಡಗರದಿಂದ ಜರುಗಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಧರ್ಮಗಳ ಗಣ್ಯರು ಮನುಕುಲಕ್ಕೆ ನೀಡುವ ಸಂದೇಶ ಹಾಗೂ ಧಾರ್ಮಿಕ ಆಚರಣೆಗಳ ಮಹತ್ವದ ಕುರಿತು ಮಾತನಾಡಿದರು. ಎಲ್ಲಾ ಧರ್ಮಗಳ ಆಶಯದಂತೆ ಮನುಕುಲಕ್ಕೆ ನೆಮ್ಮದಿ, ಗುಣ ಮತ್ತು ಒಳಿತನ್ನು ನೀಡುವುದೇ ಗುರಿಯಾಗಿದೆ. ಮಂದಿರ, ಮಸೀದಿ, ಚರ್ಚ್‌ಗಳ ಪೂಜಾ ವಿಧಿವಿಧಾನಗಳೆಲ್ಲವೂ ಜಗತ್ತಿನ ಒಳಿತಿಗಾಗಿಯೇ ಹೊರತು ಯಾರಿಗೂ ಕೆಡುಕನ್ನು ಬಯಸುವುದಿಲ್ಲ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರ ಸಂಘಕ್ಕೆ ದ್ವಾರ ನಾಮಫಲಕವನ್ನು ದಾನವಾಗಿ ನೀಡಿದ ಕಾಫಿ ಬೆಳೆಗಾರ ಟಿ.ಕೆ. ಸಾಯಿಕುಮಾರ್, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ಲತೀಫ್ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿನಿ ಶ್ರೀಶಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಿ.ಎಂ. ಹಮೀದ್ ಮಾಲವಿ, ಸಿ.ಎಸ್.ಐ. ಚರ್ಚ್ ಧರ್ಮಗುರು ಜೈಸನ್ ಗೌಂಡರ್, ವಕೀಲರಾದ ಎ. ಲೋಕೇಶ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ಮಾಜಿ ಸದಸ್ಯರಾದ ರಫೀಕ್ ಖಾನ್, ಪ್ರಸಾದ್ ಕುಟ್ಟಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಆಟೋ ಚಾಲಕರ ಸಂಘದ ಅಧ್ಯಕ್ಷ ಶರೀಫ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ. ಕಿಟ್ಟಣ್ಣ ರೈ, ದಾನಿಗಳಾದ ವಿಲಿಯಂ, ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಇ. ಕರೀಂ, ಸದಸ್ಯರಾದ ಆಲಿಕುಟ್ಟಿ, ಪಿ.ಎಫ್. ಸಬಾಸ್ಟೀನ್, ವಸಂತಿ, ಶಾಂತಿ, ತಾ.ಪಂ. ಮಾಜಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ. ದಿನೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಬಿ.ಡಿ. ರಾಜು ರೈ, ಆಟೋ ಚಾಲಕರ ಸಂಘದ ಕಾರ್ಯದರ್ಶಿ ಸಚಿನ್, ಪತ್ರಕರ್ತರುಗಳಾದ ಅನಿಲ್ ಕುಮಾರ್ ಕೆ.ಎಸ್, ಸುನಿಲ್ ಎಂ,ಎಸ್, ಎಂ.ಬಿ ವಿನ್ಸೆಂಟ್ ಹಾಗೂ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಸಂಘದ ಕಚೇರಿಯಲ್ಲಿ ಗಣೇಶ್ ಉಪಾಧ್ಯಾಯ ಅವರು ಆಟೋರಿಕ್ಷಾಗಳಿಗೆ ಸಾಮೂಹಿಕ ಪೂಜೆ ನೆರವೇರಿಸಿದರು. ಶ್ರೀಶಾ ಪ್ರಾರ್ಥಿಸಿದರು. ಬಿ.ಕೆ. ಪ್ರಶಾಂತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು..

ಸುಂಟಿಕೊಪ್ಪದಲ್ಲಿ ಆಟೋ ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜೆ; ದಾನಿಗಳು, ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಸನ್ಮಾನ image 3ಸುಂಟಿಕೊಪ್ಪದಲ್ಲಿ ಆಟೋ ಚಾಲಕರ ಸಂಘದಿಂದ ವಿಜೃಂಭಣೆಯ ಆಯುಧ ಪೂಜೆ; ದಾನಿಗಳು, ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಸನ್ಮಾನ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!