Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ವಿದ್ಯುತ್ ಕೇಬಲ್ ಬದಲಿಸಲು ಚೆಸ್ಕಾಂಗೆ ಮನವಿ: ಕಂಡಂಗಾಲ ಶಾಲಾ ಮಕ್ಕಳ ಜೀವಕ್ಕೆ ಅಪಾಯ

by Kodagu Varadi•ಅಕ್ಟೋಬರ್ 23, 2026BREAKING
ವಿದ್ಯುತ್ ಕೇಬಲ್ ಬದಲಿಸಲು ಚೆಸ್ಕಾಂಗೆ ಮನವಿ: ಕಂಡಂಗಾಲ ಶಾಲಾ ಮಕ್ಕಳ ಜೀವಕ್ಕೆ ಅಪಾಯ

ಬಿ.ಶೆಟ್ಟಿಗೇರಿ: ಬುಟ್ಟಂಗಾಲ – ಬಿ.ಶೆಟ್ಟಿಗೇರಿ ಮುಖ್ಯರಸ್ತೆಯಲ್ಲಿ ಬರುವ ರುದ್ರುಗುಪ್ಪೆ ಸೇತುವೆಯ ಸ್ವಲ್ಪ ಮುಂದಿನಿಂದ ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ ಸುಮಾರು 2 ಕಿ.ಮೀ. ದೂರ ಅಳವಡಿಸಿರುವ 50–60 ವರ್ಷಗಳ ಹಳೆಯ ವಿದ್ಯುತ್ ಕೇಬಲ್ ಅನ್ನು ತೆಗೆದು ಹೊಸ ಕೇಬಲ್ ಅಳವಡಿಸಬೇಕೆಂದು ಒತ್ತಾಯಿಸಲಾಗಿದೆ. ಈ ಬಗ್ಗೆ ರಾಷ್ಟ್ರಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಶನ್ ನಾಣಯ್ಯ ಅವರು ಚಾಮುಂಡೇಶ್ವರಿ ವಿದ್ಯುತ್ ನಿಗಮದ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸೋಮಶೇಖರ್, ಮಡಿಕೇರಿಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಶೇಷ ಮನವಿ ಪತ್ರ ಸಲ್ಲಿಸಿದ್ದಾರೆ. ಮನವಿಯಲ್ಲಿ, ರಸ್ತೆ ಬದಿಯಲ್ಲಿರುವ ಅಲ್ಯೂಮಿನಿಯಂ ಕೇಬಲ್ ತೀರಾ ಹಳೆಯದಾಗಿದ್ದು, ಗಾಳಿ–ಮಳೆಗೆ ಪದೇಪದೇ ತುಂಡಾಗುತ್ತಿದೆ. ಹಲವು ಬಾರಿ ಜಾಯಿಂಟ್ ಮಾಡಿ ದುರಸ್ತಿ ಮಾಡಿರುವುದರಿಂದ ಸಣ್ಣ ಗಾಳಿ ಬಂದರೂ ತಂತಿಗಳು ತುಂಡಾಗಿ ಬೀಳುವ ಸ್ಥಿತಿಯಲ್ಲಿವೆ ಎಂದು ತಿಳಿಸಲಾಗಿದೆ. ಇದೇ ರಸ್ತೆಯಲ್ಲಿ ಆ ಭಾಗದ ಮಕ್ಕಳು ಮಳೆ–ಗಾಳಿಯ ಸಮಯದಲ್ಲೂ ನಡೆದುಕೊಂಡು ಕಂಡಂಗಾಲ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಗಾಳಿ–ಮಳೆಗೆ ಅಥವಾ ಸಣ್ಣ ಮರದ ಕೊಂಬೆಗಳು ತಂತಿಯ ಮೇಲೆ ಬಿದ್ದರೂ ಆಕಸ್ಮಿಕವಾಗಿ ತಂತಿ ಮಕ್ಕಳ ಮೇಲೆ ಬಿದ್ದು ಜೀವಹಾನಿಯಾಗುವ ಅಪಾಯವಿದೆ. ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೂ ಇದೇ ರೀತಿಯ ಅಪಾಯ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಹಳೆಯ ಕೇಬಲ್ ತೆಗೆದು ಹೊಸ ಕೇಬಲ್ ಅಳವಡಿಸಿ, ಶಾಲಾ ಮಕ್ಕಳು ಮತ್ತು ಸಾರ್ವಜನಿಕರ ಜೀವ ರಕ್ಷಣೆಗೆ ಮುಂದಾಗಬೇಕೆಂದು ಅವರು ವಿಶೇಷವಾಗಿ ಮನವಿ ಮಾಡಿದ್ದಾರೆ.

ವಿದ್ಯುತ್ ಕೇಬಲ್ ಬದಲಿಸಲು ಚೆಸ್ಕಾಂಗೆ ಮನವಿ: ಕಂಡಂಗಾಲ ಶಾಲಾ ಮಕ್ಕಳ ಜೀವಕ್ಕೆ ಅಪಾಯ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!