Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

by Kodagu Varadi•ಅಕ್ಟೋಬರ್ 20, 2026BREAKING
ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಮೈಸೂರು: ಇಲ್ಲಿನ ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಮೈಸೂರಿನಲ್ಲಿರುವ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಕುಲದೇವರಾದ ವೆಂಕಟರಮಣ ಸ್ವಾಮಿ ಹಾಗೂ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜಾ ವಿಧಿವಿಧಾನಗಳ ನಂತರ ಸಮಾವೇಶಗೊಂಡಿದ್ದ ನೂರಾರು ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಕೊಂಬಾರನ ಬಸಪ್ಪ, ಕಾರ್ಯದರ್ಶಿ ಪೊನ್ನೆಟಿ ನಂದ, ಖಜಾಂಚಿ ಉಳುವಾರನ ಸುರೇಶ್ ಹಾಗೂ ಸಹ ಕಾರ್ಯದರ್ಶಿ ನಡುಮನೆ ಚಂಗಪ್ಪ ಅಲ್ಲದೆ, ಸಮಾಜದ ನಿರ್ದೇಶಕರಾದ ನಡುವಟ್ಟಿರ ಲಕ್ಷ್ಮಣ್, ಪಟ್ಟಡ ಶಿವಕುಮಾರ್, ಹೊಸೂರು ರಾಘವ, ಕುಂಟುಪುಣಿ ರಮೇಶ್, ಮೊಟ್ಟನ ಕೌಶಿಕ್, ಚಪ್ಪೇರ ಯಮುನಾ, ಕುಂಟುಪುಣಿ ಶೀಲ ರಮೇಶ್, ಶಂಕರನ ಶ್ಯಾಮಲ ಸೇರಿದಂತೆ ಸಮಾಜದ ಪ್ರಮುಖರು ಹಾಗೂ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. - ✍️ವರದಿ ದುಗ್ಗಳ ಸದಾನಂದ.

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ image 3ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!