Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಮಡಿಕೇರಿ – ಭಾಗಮಂಡಲ – ತಲಕಾವೇರಿ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭ: ಶಾಸಕ ಎ.ಎಸ್. ಪೊನ್ನಣ್ಣ ಸ್ಪಂದನೆಗೆ ಸಾರ್ವಜನಿಕರ ಹರ್ಷ

by Kodagu Varadi•ಅಕ್ಟೋಬರ್ 12, 2026BREAKING
ಮಡಿಕೇರಿ – ಭಾಗಮಂಡಲ – ತಲಕಾವೇರಿ ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಆರಂಭ: ಶಾಸಕ ಎ.ಎಸ್. ಪೊನ್ನಣ್ಣ ಸ್ಪಂದನೆಗೆ ಸಾರ್ವಜನಿಕರ ಹರ್ಷ

ಮಡಿಕೇರಿ : ಭಾಗಮಂಡಲ ಮತ್ತು ತಲಕಾವೇರಿ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಲವು ವರ್ಷಗಳ ಬಸ್ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ನೂತನ ಕೆ.ಎಸ್.ಆರ್.ಟಿ.ಸಿ. ಬಸ್ ಸೇವೆ ಮುಂಜಾನೆಯಿಂದ ಅಧಿಕೃತವಾಗಿ ಆರಂಭಗೊಂಡಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣನವರು ಭಾಗಮಂಡಲಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಸ್ಥಳೀಯ ಗ್ರಾಮಸ್ಥರು ಹಾಗೂ ಪೋಷಕರು ಮನವಿ ಸಲ್ಲಿಸಿದ್ದರು. "ಮುಂಜಾನೆ ಮತ್ತು ಸಂಜೆ ನಿಗದಿತ ಸಮಯಕ್ಕೆ ಸೂಕ್ತ ಬಸ್ ಸೇವೆ ಇಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ" ಎಂದು ಶಾಸಕರ ಗಮನಕ್ಕೆ ತಂದಿದ್ದರು. ಸಾರ್ವಜನಿಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕರು, ಸಂಬಂಧಪಟ್ಟ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಬಸ್ ಸೇವೆ ಆರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಶಾಸಕರ ಆದೇಶದ ಬೆನ್ನಲ್ಲೇ ಇಲಾಖೆಯು ತಕ್ಷಣ ಕ್ರಮ ಕೈಗೊಂಡು ಈ ಭಾಗಕ್ಕೆ ನೂತನ ಸಮಯದ ಬಸ್ ಸಂಚಾರವನ್ನು ಪ್ರಾರಂಬಿಸಿದೆ. ನೂತನ ಬಸ್ ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸಾರ್ವಜನಿಕರಿಂದ ಹಾಗೂ ಸಾರಿಗೆ ಸಿಬ್ಬಂದಿಯಿಂದ ವಿಶೇಷ ಪೂಜೆ ನೆರವೇರಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಕ್ಷಣ ಸ್ಪಂದಿಸಿ ಬಸ್ ವ್ಯವಸ್ಥೆ ಕಲ್ಪಿಸಿಕೊಟ್ಟ ಶಾಸಕ ಎ.ಎಸ್. ಪೊನ್ನಣ್ಣನವರಿಗೆ ಗ್ರಾಮಸ್ಥರು ಹಾಗೂ ಮುಖಂಡರು ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ. ಸಂಚಾರಿ ಅಧಿಕಾರಿ ಇರಸಪ್ಪ, ಬಸ್ ಚಾಲಕ ಮನುಕುಮಾರ್, ನಿರ್ವಾಹಕ ರಾಮಚಂದ್ರ, ವಕೀಲರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಸುನಿಲ್ ಪತ್ರಾವೋ, ಪ್ರಚಾರ ಸಮಿತಿ ಅಧ್ಯಕ್ಷರಾದ ಗೌರೀಶ್ ರೈ, ದೇವಾಲಯದ ಸಿಬ್ಬಂದಿವರ್ಗ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಬಸ್ ಸಂಚಾರದ ಸಮಯದ ವಿವರ: • ಬೆಳಗಿನ ಹಂತ: o ಮಡಿಕೇರಿಯಿಂದ ನಿರ್ಗಮನ: ಬೆಳಿಗ್ಗೆ 06:30 ➔ ಭಾಗಮಂಡಲ ಆಗಮನ: 07:45 o ಭಾಗಮಂಡಲದಿಂದ ನಿರ್ಗಮನ: ಬೆಳಿಗ್ಗೆ 08:00 ➔ ತಲಕಾವೇರಿ ಆಗಮನ: 08:20 o ತಲಕಾವೇರಿಯಿಂದ ನಿರ್ಗಮನ: ಬೆಳಿಗ್ಗೆ 08:30 ➔ ಭಾಗಮಂಡಲ ಆಗಮನ: 08:50 o ಭಾಗಮಂಡಲದಿಂದ ನಿರ್ಗಮನ: ಬೆಳಿಗ್ಗೆ 09:00 (ನಾಪೋಕ್ಲು, ಮೂರ್ನಾಡು ಮಾರ್ಗವಾಗಿ) ➔ ಮಡಿಕೇರಿ ಆಗಮನ: ಬೆಳಿಗ್ಗೆ 11:00 • ಮಧ್ಯಾಹ್ನದ ಹಂತ: o ಮಡಿಕೇರಿಯಿಂದ ನಿರ್ಗಮನ: ಬೆಳಿಗ್ಗೆ 11:30 ➔ ಭಾಗಮಂಡಲ ಆಗಮನ: ಮಧ್ಯಾಹ್ನ 12:45 o ಭಾಗಮಂಡಲದಿಂದ ನಿರ್ಗಮನ: ಮಧ್ಯಾಹ್ನ 01:30 ➔ ಮಡಿಕೇರಿ ಆಗಮನ: ಮಧ್ಯಾಹ್ನ 02:45 • ಸಂಜೆಯ ಹಂತ: o ಮಡಿಕೇರಿಯಿಂದ ನಿರ್ಗಮನ: ಮಧ್ಯಾಹ್ನ 03:30 ➔ ಭಾಗಮಂಡಲ ಆಗಮನ: ಸಂಜೆ 04:45 o ಭಾಗಮಂಡಲದಿಂದ ನಿರ್ಗಮನ: ಸಂಜೆ 05:00 ➔ ತಲಕಾವೇರಿ ಆಗಮನ: ಸಂಜೆ 05:20 o ತಲಕಾವೇರಿಯಿಂದ ನಿರ್ಗಮನ: ಸಂಜೆ 05:30 ➔ ಭಾಗಮಂಡಲ ಆಗಮನ: ಸಂಜೆ 05:50 o ಭಾಗಮಂಡಲದಿಂದ ನಿರ್ಗಮನ: ಸಂಜೆ 06:00 ➔ ಮಡಿಕೇರಿ ಆಗಮನ: ರಾತ್ರಿ 07:15 ✍️ವರದಿ ದುಗ್ಗಳ ಸದಾನಂದ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!