Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಬೆಳಕು ಕಾಣದ ಮನೆಗಳಿಗೆ ಸೌರ ವಿದ್ಯುತ್ ಬೆಳಗು : ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಸೋಲಾರ್ ಅಳವಡಿಕೆ ಕಾಮಗಾರಿಗೆ ಚಾಲನೆ.

by Kodagu Varadi•ಅಕ್ಟೋಬರ್ 15, 2026BREAKING
ಬೆಳಕು ಕಾಣದ ಮನೆಗಳಿಗೆ ಸೌರ ವಿದ್ಯುತ್ ಬೆಳಗು : ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಸೋಲಾರ್ ಅಳವಡಿಕೆ  ಕಾಮಗಾರಿಗೆ ಚಾಲನೆ.

ವೀರಾಜಪೇಟೆ : ದಶಕಗಳಿಂದ ಕತ್ತಲಲ್ಲೇ ಬದುಕುತ್ತಿದ್ದ ಕುಟುಂಬಗಳ ಮನೆಗಳಿಗೆ ಕೊನೆಗೂ ಬೆಳಕು ಬರುವ ಸಮಯ ಬಂದಿದೆ. ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಭಾಗದ 29 ಕುಟುಂಬಗಳು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿದ್ದು, ತಾತ್ಕಾಲಿಕ ಸೌರ ವಿದ್ಯುತ್ ಸಂಪರ್ಕ ಕೋರಿದ್ದ ಸುಮಾರು 22 ಕುಟುಂಬಗಳಿಗೆ ಅರಣ್ಯ ಇಲಾಖೆಯ ಮೂಲಕ ಸೋಲಾರ್ ಅಳವಡಿಸುವ ಕಾಮಗಾರಿ ಆರಂಭವಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಸೂಚನೆಯಂತೆ ಈ ಯೋಜನೆ ಕೈಗೊಳ್ಳಲಾಗಿದ್ದು, ಕಮಲ ಬದಿಕೋಡಿ ಅವರ ಮನೆಗೆ ಸೋಲಾರ್ ಅಳವಡಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಯಿತು. ಉಳಿದ ಮನೆಗಳಿಗೂ ಹಂತಹಂತವಾಗಿ, ನಿರಂತರವಾಗಿ ಅಳವಡಿಸಲಾಗುವುದು ಎಂದು ತಿಳಿಸಲಾಗಿದೆ. ಶಾಸಕ ಪೊನ್ನಣ್ಣ ಹಾಗೂ ಧರ್ಮಜ ಉತ್ತಪ್ಪ ಅವರ ಅನುಪಸ್ಥಿತಿಯಲ್ಲಿ, ಅವರ ಸೂಚನೆಯಂತೆ ಕೊಲ್ಯದ ಗಿರೀಶ್, ಸಂಪಾಜೆ ವಲಯ ಅರಣ್ಯ ಅಧಿಕಾರಿ ಡಿನ್ಸಿ ದೇಚಮ್ಮ ಮತ್ತು ಸಿಬ್ಬಂದಿ, ರವಿರಾಜ್ ಹೊಸೂರು, ಸೂರಜ್ ಹೊಸೂರು ಹಾಗೂ ಸ್ಥಳೀಯರು ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಲಯ ಅರಣ್ಯಾಧಿಕಾರಿ ದೇಚಮ್ಮ ಮಾತನಾಡಿ, ಶಾಸಕರ ಸೂಚನೆಯಂತೆ ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರದ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದರು. ಫಲಾನುಭವಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕೊಲ್ಯದ ಗಿರೀಶ್ ಮಾತನಾಡಿ, ಶಾಸಕರ ಪರವಾಗಿ ತಾನು ಬಂದಿರುವುದಾಗಿ ತಿಳಿಸಿ, ಅವರು ವಿಶೇಷ ಕಾಳಜಿಯಿಂದ ನೀಡಿದ ಈ ಸೌಲಭ್ಯ ಪ್ರತಿಯೊಬ್ಬರಿಗೂ ತಲುಪಲಿ ಎಂದು ಹಾರೈಸಿದರು. ಸ್ಥಳೀಯರ ಪರವಾಗಿ ಮಾತನಾಡಿದ ಸೂರಜ್ ಹೊಸೂರು, ಬೆಳಕಿಲ್ಲದ ಮನೆಗಳಿಗೆ ಬೆಳಕು ಕಲ್ಪಿಸಲು ವಿಶೇಷ ಪ್ರಯತ್ನ ಮಾಡಿದ ಶಾಸಕರಿಗೆ ಹಾಗೂ ಸದಾ ಬೆಂಬಲವಾಗಿ ನಿಂತಿರುವ ಧರ್ಮಜ ಉತ್ತಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಹಿರಿಯರಾದ ಸೋಮಣ್ಣ ಬಾಲಂಬಿ, ಬಂಗಾರಕೋಡಿ ವೆಂಕಟರಮಣ, ರಘುನಾಥ್ ಬಾಲಂಬಿ, ಮಾಣಿಕಲ್ಲು ವಿನಯ, ಹರ್ಷಿತ್ ಚೆಂಡೆಡ್ಕ, ಉದಯ ಹೊದ್ದಟ್ಟಿ, ಕೊಪ್ಪದ ಶಿವರಾಮ, ಕೊಪ್ಪದ ಭುವನೇಶ್ವರ, ಹೊಸೂರು ಗಿರೀಶ್, ಕೆದಂಬಾಡಿ ಗಿರೀಶ್, ಬಂಗಾರಕೋಡಿ ವಿಕಿ ಹಾಗೂ ಗ್ರಾಮಸ್ಥರು, ಫಲಾನುಭವಿಗಳು ಉಪಸ್ಥಿತರಿದ್ದರು. ಹೊಸೂರು ಗಿರೀಶ್ ವಂದಿಸಿದರು.

ಬೆಳಕು ಕಾಣದ ಮನೆಗಳಿಗೆ ಸೌರ ವಿದ್ಯುತ್ ಬೆಳಗು : ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಸೋಲಾರ್ ಅಳವಡಿಕೆ  ಕಾಮಗಾರಿಗೆ ಚಾಲನೆ. image 3ಬೆಳಕು ಕಾಣದ ಮನೆಗಳಿಗೆ ಸೌರ ವಿದ್ಯುತ್ ಬೆಳಗು : ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಸೋಲಾರ್ ಅಳವಡಿಕೆ  ಕಾಮಗಾರಿಗೆ ಚಾಲನೆ. image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!