Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಬೆಂಗಳೂರಿನಲ್ಲಿ ಕರವೇ ಸ್ವಾಭಿಮಾನೀ ಬಣದ ಪೂರ್ವಭಾವಿ ಸಭೆ: ಸರ್ಕಾರಿ ಶಾಲೆ ಉಳಿವಿಗೆ ಶೀಘ್ರವೇ "ಜೈ ಕನ್ನಡ ಯಾತ್ರೆ" ಅಭಿಯಾನ, ಕೊಡಗಿನ ಪದಾಧಿಕಾರಿಗಳು ಬಾಗಿ.

by Kodagu Varadi•ಅಕ್ಟೋಬರ್ 16, 2026BREAKING
ಬೆಂಗಳೂರಿನಲ್ಲಿ ಕರವೇ ಸ್ವಾಭಿಮಾನೀ ಬಣದ ಪೂರ್ವಭಾವಿ ಸಭೆ: ಸರ್ಕಾರಿ ಶಾಲೆ ಉಳಿವಿಗೆ ಶೀಘ್ರವೇ "ಜೈ ಕನ್ನಡ ಯಾತ್ರೆ" ಅಭಿಯಾನ, ಕೊಡಗಿನ ಪದಾಧಿಕಾರಿಗಳು ಬಾಗಿ.

ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನೀ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಹಾಗೂ "ಸರ್ಕಾರಿ ಶಾಲೆಗಳ ಉಳಿವಿಗಾಗಿ ಮುಕ್ತ ಚರ್ಚೆ" ಕಾರ್ಯಕ್ರಮ ನಡೆಯಿತು. ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಮುಖ ಪದಾಧಿಕಾರಿಗಳು, ಮುಖಂಡರು ಹಾಗೂ ಐಟಿ-ಬಿಟಿ ವಲಯದ ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಲಾಯಿತು. ಇದರ ಭಾಗವಾಗಿ, ಸರ್ಕಾರಿ ಶಾಲೆಗಳ ಉಳಿವಿಗಾಗಿ ಶೀಘ್ರದಲ್ಲೇ "ಜೈ ಕನ್ನಡ ಯಾತ್ರೆ" ಅಭಿಯಾನವನ್ನು ಆರಂಭಿಸಲು ಸಂಘಟನೆಯ ಪದಾಧಿಕಾರಿಗಳು ನಿರ್ಧರಿಸಿದರು. ಕೊಡಗು ಜಿಲ್ಲೆಯಿಂದ ಜಿಲ್ಲಾ ಉಸ್ತುವಾರಿ ತನು ಕಿಶೋರ್, ಪ್ರಧಾನ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್, ಉಪಾಧ್ಯಕ್ಷ ಸಜಿಲ್ ನಾಯರ್, ಕುಶಾಲನಗರ ತಾಲೂಕು ಅಧ್ಯಕ್ಷ ಹರೀಶ್, ಘಟಕ ಅಧ್ಯಕ್ಷ ಗಿರೀಶ್, ಗೌರವ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಚಂದ್ರು, ಪದಾಧಿಕಾರಿಗಳಾದ ಪ್ರದೀಪ್ ಗೌಡ ಮತ್ತು ದಿನೇಶ್ ಅವರು ಪಾಲ್ಗೊಂಡು ಚರ್ಚೆಯಲ್ಲಿ ಭಾಗವಹಿಸಿದರು.

ಬೆಂಗಳೂರಿನಲ್ಲಿ ಕರವೇ ಸ್ವಾಭಿಮಾನೀ ಬಣದ ಪೂರ್ವಭಾವಿ ಸಭೆ: ಸರ್ಕಾರಿ ಶಾಲೆ ಉಳಿವಿಗೆ ಶೀಘ್ರವೇ "ಜೈ ಕನ್ನಡ ಯಾತ್ರೆ" ಅಭಿಯಾನ, ಕೊಡಗಿನ ಪದಾಧಿಕಾರಿಗಳು ಬಾಗಿ. image 3ಬೆಂಗಳೂರಿನಲ್ಲಿ ಕರವೇ ಸ್ವಾಭಿಮಾನೀ ಬಣದ ಪೂರ್ವಭಾವಿ ಸಭೆ: ಸರ್ಕಾರಿ ಶಾಲೆ ಉಳಿವಿಗೆ ಶೀಘ್ರವೇ "ಜೈ ಕನ್ನಡ ಯಾತ್ರೆ" ಅಭಿಯಾನ, ಕೊಡಗಿನ ಪದಾಧಿಕಾರಿಗಳು ಬಾಗಿ. image 4ಬೆಂಗಳೂರಿನಲ್ಲಿ ಕರವೇ ಸ್ವಾಭಿಮಾನೀ ಬಣದ ಪೂರ್ವಭಾವಿ ಸಭೆ: ಸರ್ಕಾರಿ ಶಾಲೆ ಉಳಿವಿಗೆ ಶೀಘ್ರವೇ "ಜೈ ಕನ್ನಡ ಯಾತ್ರೆ" ಅಭಿಯಾನ, ಕೊಡಗಿನ ಪದಾಧಿಕಾರಿಗಳು ಬಾಗಿ. image 5

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!