Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ.

by Kodagu Varadi•ಅಕ್ಟೋಬರ್ 15, 2026BREAKING
ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ.

ನಾಪೋಕ್ಲು : ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮವನ್ನು ಅಕ್ಟೋಬರ್ 20 ರಂದು ಮಂಗಳವಾರ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ತಿಳಿಸಿದರು. ಪಟ್ಟಣದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ 1:30 ಗಂಟೆಗೆ ಹಳೆ ತಾಲೂಕಿನಿಂದ ಅಲಂಕೃತಗೊಂಡ ವಾಹನಗಳ ಮೆರವಣಿಗೆ ಪ್ರಾರಂಭವಾಗಲಿದೆ . ಬಳಿಕ ಸಾಯಂಕಾಲ 4:00 ಗಂಟೆಗೆ ನಾಪೋಕ್ಲುವಿನ ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ,. ಪ್ರಖ್ಯಾತ ಮಹಾ ನವಮಿ ಕಲಾವಿದರಿಂದ ಆರ್ಕೆಸ್ಟ್ರಾ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಚಂದ್ರಮೌಳಿ ನಾಪೋಕ್ಲು ಪೋಲೀಸ್ ಠಾಣಾಧಿಕಾರಿ ರಾಘವೇಂದ್ರ , ಹೊದ್ದೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ , ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪಾ ಅಯ್ಯಪ್ಪ , ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮತ್ತು ನಿವೃತ್ತ ವೈದ್ಯ , ನಂದಿನಿ ಆಸ್ಪತ್ರೆಯ ವೈದ್ಯರಾದ ಡಾ. ಹೆಚ್.ವಿ. ದೇವದಾಸ್ , ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸೌಕತ್ ಅಲಿ, ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್ , ನಾಪೋಕ್ಲು ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ,, ನಾಪೋಕ್ಲು ಅಂಕುರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಕೇಟೋಳಿರ ರತ್ನಾಚರ್ಮಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾಪ್ರಭು , ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಿರೋಡಿರಾ ನಿರೂಪ್ , ನಾಪೊಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ ಪ್ರ ತೀಪ್ , ಕೊಣಂಜಗೇರಿ ಮಾಜಿ ಪಂಚಾಯಿತಿ ಸದಸ್ಯ ನಾಯಕಂಡ ಮುತ್ತಣ್ಣ , ಗೂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಕೆ. ಅನಿಲ್ ನಾಪೋಕ್ಲು ,ಮೂರ್ನಾಡು ನಕ್ಷತ್ರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ, ,ನಾಪೋಕ್ಲು, ಅಮ್ಮಾ ಕನ್ಸ್ಟ್ರಕ್ಷನ್, ಪಿ.ಡಬ್ಲ್ಯೂ.ಡಿ ಗುತ್ತಿಗೆದಾರ ಬಿ.ಆರ್ ಜಲೇಂದ್ರ , ನಾಪೋಕ್ಲು ಸೆಂಟ್ ಮೇರಿಸ್ ಚರ್ಚ್ ನ ಫಾದರ್ ವಿಕ್ಟರ್ , ,ಹಾಗೂ ವಕೀಲರು , ಸಂಘದ ಸಲಹೆಗಾರರಾದ ಅಚ್ಚಾoಡಿರ ಪವನ್ ಪೆಮ್ಮಯ್ಯ , ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಲಹೆಗಾರರು ಆಗಿರುವ ಬಿದ್ದಾಟಂಡ ರೋಜಿ ಚಿಣ್ಣಪ್ಪ , ಪತ್ರಕರ್ತರು ಹಾಗೂ ಸಲಹೆಗಾರರಾದ ದುಗ್ಗಳ ಸದಾನಂದ ಮತ್ತು ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಅಬ್ದುಲ್ ರಜಾಕ್ (ಗುಂಡು) ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.. ಕಾರ್ಯಕ್ರಮದಲ್ಲಿ ಈ ವರ್ಷ ವಿಶೇಷವಾಗಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿರುವ ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆಗೆ ಸಲ್ಲಿಸಿರುವ ನಿವೃತ್ತ ವೈದ್ಯರಾದ ದಾನಿ ಡಾ. ಹೆಚ್.ವಿ. ದೇವದಾಸ್ ಅವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಗುವುದು ಈ ಸಂದರ್ಭ ವಿಶೇಷ ಅಲಂಕಾರ ಮಾಡಿರುವ ಸೈಕಲ್, ಎರಡು ಚಕ್ರದ ವಾಹನ, ಆಟೋ, ನಾಲ್ಕು ಚಕ್ರದ ವಾಹನ, ಟ್ರ್ಯಾಕ್ಟರ್, ವರ್ಕ್ ಶಾಪು ಅಂಗಡಿ, ಅಲಂಕಾರಿಗಳಿಗೆ ವಿಶೇಷ ಟ್ರೋಫಿ ಬಹುಮಾನಗಳನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ಮಾಹಿತಿ ನೀಡಿ. ಸಮಸ್ತ ಚಾಲಕರು , ಮಾಲೀಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘದ ಪದಾಧಿಕಾರಿಗಳು ಕೋರಿದ್ದಾರೆ ಈ ಸಂದರ್ಭ ಸಂಘದ ಉಪಾಧ್ಯಕ್ಷ ಸತೀಶ ಎ ಯು, ಪ್ರಧಾನ ಕಾರ್ಯದರ್ಶಿ ಹಂಸ ಬಿ ಎಂ, ಖಜಾಂಜಿ ಚೇತನ್ ಏ ಎಂ, ಗೌರವ ಅಧ್ಯಕ್ಷ ಅಬ್ದುಲ್ ರಜಾಕ್, ಸಮರ್ಥ್ ಸಮಿತಿ ಸದಸ್ಯರಾದ ಶ್ರೀಜೇಷ್, ಆನಂದ ಉಪಸ್ಥಿತರಿದ್ದರು. ವರದಿ✍️ ದುಗ್ಗಳ ಸದಾನಂದ.

ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ. image 3ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ. image 4ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮ. image 5

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!