Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ತಲಕಾವೇರಿ ತೀರ್ಥೋದ್ಭವ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆಗೆ ನಾಲ್ಕು ಹಂತದ ವ್ಯವಸ್ಥೆ

by Kodagu Varadi•ಅಕ್ಟೋಬರ್ 17, 2026BREAKING
ತಲಕಾವೇರಿ ತೀರ್ಥೋದ್ಭವ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆಗೆ ನಾಲ್ಕು ಹಂತದ ವ್ಯವಸ್ಥೆ

ಮಡಿಕೇರಿ, ಅ.17: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಇಂದು (17-10-2026) ಸಂಜೆ 7:50 ಗಂಟೆಗೆ ಪವಿತ್ರ ಕಾವೇರಿ ತೀರ್ಥೋದ್ಭವವಾಗಲಿದೆ. ಪೂಜಾ ಸಮಾರಂಭಕ್ಕೆ ಗಣ್ಯರೊಂದಿಗೆ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಸಹಸ್ರಾರು ಭಕ್ತಾದಿಗಳು ಆಗಮಿಸಲಿದ್ದು, ಇದಕ್ಕಾಗಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ. ಬಂದೋಬಸ್ತ್ ಕರ್ತವ್ಯಕ್ಕೆ 4 ಡಿವೈಎಸ್ಪಿ, 11 ಪೊಲೀಸ್ ಇನ್ಸ್‌ಪೆಕ್ಟರ್/ಸಿಪಿಐ, 16 ಪಿಎಸ್‌ಐ, 38 ಎಎಸ್‌ಐ, 283 ಹೆಡ್ ಕಾನ್‌ಸ್ಟೆಬಲ್/ಪೊಲೀಸ್ ಕಾನ್‌ಸ್ಟೆಬಲ್, 2 ಕೆಎಸ್‌ಆರ್‌ಪಿ ಹಾಗೂ 2 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ಭಕ್ತಾದಿಗಳ ನಿಯಂತ್ರಣಕ್ಕಾಗಿ ಕುಂಡಿಕೆಯ ಮುಂಭಾಗದಲ್ಲಿ ತಾತ್ಕಾಲಿಕ ಬ್ಯಾರಿಕೇಡ್ ಅಳವಡಿಸಲಾಗಿದೆ. ಪಾದಯಾತ್ರೆಯಲ್ಲಿ ತೆರಳುವ ಭಕ್ತರ ಸುರಕ್ಷತೆಗೂ ಪ್ರತ್ಯೇಕವಾಗಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ವಾಹನ ನಿಲುಗಡೆಗೆ ತಲಕಾವೇರಿಯಲ್ಲಿ ಒಟ್ಟು ನಾಲ್ಕು ಕಡೆ ಅವಕಾಶ ಕಲ್ಪಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನಗಳು, ನಿಲ್ದಾಣದ ಮೇಲ್ಭಾಗದಲ್ಲಿ ಲಘು ವಾಹನಗಳು ಹಾಗೂ ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಟಿ.ಟಿ. ವಾಹನಗಳನ್ನು ನಿಲ್ಲಿಸಬೇಕು. ನಾರಾಯಣಾಚಾರ್ ಮನೆಗೆ ಹೋಗುವ ಮೈದಾನದಲ್ಲೂ ಪಾರ್ಕಿಂಗ್‌ಗೆ ಅವಕಾಶವಿದೆ. ತಲಕಾವೇರಿಯ ಪಾರ್ಕಿಂಗ್ ಸ್ಥಳಗಳು ಭರ್ತಿಯಾದ ನಂತರ ಭಾಗಮಂಡಲದ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಾಹನ ನಿಲ್ಲಿಸಿ, ಮಾರುಕಟ್ಟೆ ಜಂಕ್ಷನ್‌ನಿಂದ ಬಸ್ಸಿನಲ್ಲಿ ತಲಕಾವೇರಿಗೆ ತೆರಳಬೇಕು. ಭಾಗಮಂಡಲದ ಚಾಮುಂಡಿಕಳದಲ್ಲೂ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅಲ್ಲಿಂದಲೂ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಭಾಗಮಂಡಲದ ಪಾರ್ಕಿಂಗ್ ಸ್ಥಳಗಳೂ ಭರ್ತಿಯಾದರೆ, ತಾವೂರಿನ ಕಾವೇರಿ ಕಾಲೇಜು ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ತಲಕಾವೇರಿ ಉಪ ಠಾಣೆ ಬಳಿ ಹಾಗೂ ಭಾಗಮಂಡಲದ ಸಂಗಮದ ಬಳಿ ತಲಾ ಒಂದು ಆಂಬುಲೆನ್ಸ್ ನಿಯೋಜಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಒಟ್ಟು 61 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ತಲಕಾವೇರಿ ಪ್ರಸಾದ ಕೌಂಟರ್ ಬಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ, ಹನಿ ಡ್ಯೂ ಸ್ಪೇಸಸ್ ಬಳಿ ಹಾಗೂ ಭಾಗಮಂಡಲದ ಸಂಗಮದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ತಲಕಾವೇರಿಗೆ ತೆರಳುವ ರಸ್ತೆ ಮಾರ್ಗದುದ್ದಕ್ಕೂ ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ.

ತಲಕಾವೇರಿ ತೀರ್ಥೋದ್ಭವ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆಗೆ ನಾಲ್ಕು ಹಂತದ ವ್ಯವಸ್ಥೆ image 3ತಲಕಾವೇರಿ ತೀರ್ಥೋದ್ಭವ: ಬಿಗಿ ಪೊಲೀಸ್ ಬಂದೋಬಸ್ತ್, ವಾಹನ ನಿಲುಗಡೆಗೆ ನಾಲ್ಕು ಹಂತದ ವ್ಯವಸ್ಥೆ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!