Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಕೊಡಗು ಜಿಲ್ಲೆಯಲ್ಲಿ ನೊಂದ ಮಹಿಳೆಯರಿಗೆ ಆಸರೆಯಾದ ಸಾಂತ್ವನ ಸಹಾಯವಾಣಿ: 5,894 ಪ್ರಕರಣ ದಾಖಲು, 5,860 ಇತ್ಯರ್ಥ

by Kodagu Varadi•ಅಕ್ಟೋಬರ್ 16, 2026BREAKING
ಕೊಡಗು ಜಿಲ್ಲೆಯಲ್ಲಿ ನೊಂದ ಮಹಿಳೆಯರಿಗೆ ಆಸರೆಯಾದ ಸಾಂತ್ವನ ಸಹಾಯವಾಣಿ: 5,894 ಪ್ರಕರಣ ದಾಖಲು, 5,860 ಇತ್ಯರ್ಥ

ಮಡಿಕೇರಿ: ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2002ರ ನವೆಂಬರ್ 4ರಂದು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಆರಂಭಗೊಂಡ ‘ಸಾಂತ್ವನ ಮಹಿಳಾ ಸಹಾಯವಾಣಿ’, ಜಿಲ್ಲೆಯಾದ್ಯಂತ ನೊಂದ ಮಹಿಳೆಯರ ಪಾಲಿಗೆ ಆಸರೆಯಾಗಿದೆ. ಮಹಿಳೆಯರು ವಿವಿಧ ಸ್ತರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ದಾಖಲಿಸಿಕೊಂಡು, ತಕ್ಷಣ ಸೂಕ್ತ ಸಲಹೆ-ಸೂಚನೆ ಹಾಗೂ ನೆರವು ನೀಡುವ ಕಾರ್ಯವನ್ನು ಕೇಂದ್ರ ಮಾಡಿಕೊಂಡು ಬಂದಿದೆ. ಸಾಂತ್ವನ ಕೇಂದ್ರದಲ್ಲಿ ಈವರೆಗೆ ವಿವಿಧ ಸ್ವರೂಪದ ಒಟ್ಟು 5,894 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 5,860 ಪ್ರಕರಣಗಳು ಇತ್ಯರ್ಥಗೊಂಡಿವೆ. 2026-27ನೇ ಆರ್ಥಿಕ ಸಾಲಿನಲ್ಲಿ 139 ಪ್ರಕರಣಗಳು ದಾಖಲಾಗಿದ್ದು, 113 ಪ್ರಕರಣಗಳು ಇತ್ಯರ್ಥಗೊಂಡಿವೆ. ಹಿಂದಿನ ಸಾಲಿನ ಉಳಿಕೆ ಪ್ರಕರಣಗಳೂ ಸೇರಿ ಉಳಿದ 34 ಪ್ರಕರಣಗಳು ಇತ್ಯರ್ಥದ ಹಂತದಲ್ಲಿವೆ. ಅಲ್ಲದೆ, 2026-27ನೇ ಸಾಲಿನಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಂತ್ವನ ಕೇಂದ್ರ ಹಾಗೂ ನ್ಯಾಯಾಲಯದ ಮೂಲಕ ಫಲಾನುಭವಿಗಳಿಗೆ ಒಟ್ಟು ರೂ.5.25 ಲಕ್ಷವನ್ನು ಕೊಡಿಸಿಕೊಡಲಾಗಿದೆ. ಮಹಿಳಾ ಸಹಾಯವಾಣಿಯ ಪ್ರಯೋಜನವನ್ನು ಸಂಕಷ್ಟದಲ್ಲಿರುವ ಮಹಿಳೆಯರು ಪಡೆದುಕೊಳ್ಳಬೇಕೆಂದು ಸಾಂತ್ವನ ಕೇಂದ್ರದ ಅಧ್ಯಕ್ಷರಾದ ಬಿ.ಕೆ. ರವೀಂದ್ರ ರೈ ಹಾಗೂ ಪ್ರಧಾನ ಕಾರ್ಯದರ್ಶಿ ನಮಿತ ಆರ್. ರೈ ಅವರು ಕೋರಿದ್ದಾರೆ

ಕೊಡಗು ಜಿಲ್ಲೆಯಲ್ಲಿ ನೊಂದ ಮಹಿಳೆಯರಿಗೆ ಆಸರೆಯಾದ ಸಾಂತ್ವನ ಸಹಾಯವಾಣಿ: 5,894 ಪ್ರಕರಣ ದಾಖಲು, 5,860 ಇತ್ಯರ್ಥ image 3ಕೊಡಗು ಜಿಲ್ಲೆಯಲ್ಲಿ ನೊಂದ ಮಹಿಳೆಯರಿಗೆ ಆಸರೆಯಾದ ಸಾಂತ್ವನ ಸಹಾಯವಾಣಿ: 5,894 ಪ್ರಕರಣ ದಾಖಲು, 5,860 ಇತ್ಯರ್ಥ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!