Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಕುಶಾಲನಗರ ತಾಲೂಕಿಗೆ ಸಾಮಾನ್ಯ, ಹಾಗೂ ಬಿಸಿಎಂ 'ಬಿ' ಮೀಸಲಾತಿ ಇಲ್ಲ: ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅಸಮಾಧಾನ

by Kodagu Varadi•ಅಕ್ಟೋಬರ್ 11, 2026BREAKING
ಕುಶಾಲನಗರ ತಾಲೂಕಿಗೆ ಸಾಮಾನ್ಯ, ಹಾಗೂ ಬಿಸಿಎಂ 'ಬಿ' ಮೀಸಲಾತಿ ಇಲ್ಲ:  ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅಸಮಾಧಾನ

ಕುಶಾಲನಗರ, ಅ.11: ಹೊಸದಾಗಿ ರಚನೆಯಾಗಿರುವ ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಹಿಂದುಳಿದ ವರ್ಗ 'ಬಿ' (ಬಿಸಿಎಂ ಬಿ) ಮೀಸಲಾತಿ ಕಲ್ಪಿಸದಿರುವ ಬಗ್ಗೆ ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕೊಡಗು ಜಿಲ್ಲೆಯ ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಈ ಪಟ್ಟಿಯಲ್ಲಿ ಹೊಸ ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಬಿಸಿಎಂ 'ಬಿ' ವರ್ಗದ ಮೀಸಲಾತಿ ನೀಡಿಲ್ಲ ಎಂದು ತಿಳಿದುಬಂದಿದೆ. ಹೊಸ ತಾಲೂಕಾಗಿ ರೂಪುಗೊಂಡಿರುವ ಕುಶಾಲನಗರದಲ್ಲಿ ಎಲ್ಲಾ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ಸಿಗುವಂತೆ ಮೀಸಲಾತಿ ನಿಗದಿಯಾಗಬೇಕಿತ್ತು. ಸಾಮಾನ್ಯ ಹಾಗೂ ಬಿಸಿಎಂ 'ಬಿ' ವರ್ಗಗಳಿಗೆ ಅವಕಾಶವೇ ಇಲ್ಲದಂತಾಗಿರುವುದರಿಂದ ಆ ವರ್ಗಗಳ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಕಾಶ ಕೈತಪ್ಪಿದೆ ಎಂದು ನಂಗಾರು ಜಗ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕುಶಾಲನಗರ ಪಟ್ಟಣ ಪಂಚಾಯಿತಿ ರೂಪುಗೊಂಡ ಸಮಯದಲ್ಲಿ ಕೆಲವು (ಗುಡ್ಡೆ ಹೊಸೂರು ಮತ್ತು ಕೂಡಿಗೆ ) ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಭೌಗೋಳಿಕ ಭಾಗವು ಕುಶಾಲನಗರ ಪಟ್ಟಣ ಪಂಚಾಯಿತಿಗೆ ಸೇರಲ್ಪಟ್ಟಿದ್ದು ಇದನ್ನು ಸಹ ಮೀಸಲಾತಿ ಪಟ್ಟಿ ತಯಾರಿಸುವಾಗ ಗಣನೆಗೆ ತೆಗೆದುಕೊಳ್ಳದೆ ಅಧಿಕಾರಿಗಳು ಏಕಾಭಿಪ್ರಾಯದಿಂದ ಮೀಸಲಾತಿ ಪಟ್ಟಿಯನ್ನು ತಯಾರಿಸಿರುವ ಕ್ರಮ ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ, ಕುಶಾಲನಗರ ತಾಲೂಕಿಗೆ ಸಾಮಾನ್ಯ ಹಾಗೂ ಬಿಸಿಎಂ 'ಬಿ' ವರ್ಗದ ಮೀಸಲಾತಿಯನ್ನು ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!