Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಕಡಿಯತ್ತೂರು ಭಗವತಿ ದೇವಾಲಯಕ್ಕೆ ಪ್ರಕಾಶ್ ರೈ ದಂಪತಿಯಿಂದ 12.78 ಲಕ್ಷ ರೂ. ದೇಣಿಗೆ

by Kodagu Varadi•ಅಕ್ಟೋಬರ್ 12, 2026BREAKING
ಕಡಿಯತ್ತೂರು ಭಗವತಿ ದೇವಾಲಯಕ್ಕೆ ಪ್ರಕಾಶ್ ರೈ ದಂಪತಿಯಿಂದ 12.78 ಲಕ್ಷ  ರೂ. ದೇಣಿಗೆ

ನಾಪೋಕ್ಲು: ಮಡಿಕೇರಿ ತಾಲೂಕಿನ ಐತಿಹಾಸಿಕ ಕಡಿಯತ್ತೂರು ಶ್ರೀ ಭಗವತಿ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮದ ಪ್ರಮುಖ ದಾನಿಗಳಾದ ಪ್ರಕಾಶ್ ರೈ ಹಾಗೂ ಉಷಾ ರೈ ದಂಪತಿ 12.78 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ. ಸುಮಾರು 400 ವರ್ಷಗಳ ಇತಿಹಾಸವಿರುವ ಈ ದೇವಾಲಯದಲ್ಲಿ ಮೇಲ್ಚಾವಣಿ, ಅಂಗಳ ಹಾಗೂ ಸಭಾಂಗಣದ ವಿವಿಧ ಜೀರ್ಣೋದ್ಧಾರ ಕಾಮಗಾರಿಗಳು ಬಾಕಿ ಉಳಿದಿದ್ದವು. ಈ ಹಿನ್ನೆಲೆಯಲ್ಲಿ ಪ್ರಕಾಶ್ ರೈ ದಂಪತಿ ತಮ್ಮ ತಂದೆ ದಿ. ಮಂಜಪ್ಪ ರೈ, ತಾಯಿ ದಿ. ನೀಲಮ್ಮ ರೈ ಮತ್ತು ಸಹೋದರ ದಿ. ರವಿ ರೈ ಅವರ ನೆನಪಿಗಾಗಿ ಸಂಪೂರ್ಣ ವೆಚ್ಚವನ್ನು ಭರಿಸಿ, ಕಾಮಗಾರಿಗಳನ್ನು ಪೂರ್ಣಗೊಳಿಸಿಕೊಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ದೇವಾಲಯದ ತೀರ್ಥ ಮಂಟಪವನ್ನು ಪುನರ್ ನಿರ್ಮಿಸಿದ್ದರು. ಈ ಹಿಂದೆ 1990ರಲ್ಲಿಯೂ ವಿಶೇಷ ಸಮಿತಿ ರಚಿಸಿಕೊಂಡು ಭಗವತಿ ದೇವಾಲಯದ ಜೀರ್ಣೋದ್ಧಾರ ನಡೆಸಲಾಗಿತ್ತು. ಗ್ರಾಮದ ಧಾರ್ಮಿಕ ಕೇಂದ್ರಗಳ ಪುನರುತ್ಥಾನಕ್ಕೆ ಕಡಿಯತ್ತೂರಿನಲ್ಲಿ ಸದಾ ಜನಬೆಂಬಲ ಸಿಕ್ಕಿದೆ. ಶ್ರೀ ಶಾಸ್ತಾವಿನ ದೇವಾಲಯವನ್ನು ಊರವರ ಸಹಕಾರದಿಂದ ಹಾಗೂ ವಿಷ್ಣುಮೂರ್ತಿ ದೇವಾಲಯವನ್ನು ಪೂರೆಯನ ಸತೀಶ್ ಅವರ ನೆರವಿನಿಂದ ಜೀರ್ಣೋದ್ಧಾರ ಮಾಡಲಾಗಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ. ✍️ ವರದಿ ದುಗ್ಗಳ ಸದಾನಂದ.

ಕಡಿಯತ್ತೂರು ಭಗವತಿ ದೇವಾಲಯಕ್ಕೆ ಪ್ರಕಾಶ್ ರೈ ದಂಪತಿಯಿಂದ 12.78 ಲಕ್ಷ  ರೂ. ದೇಣಿಗೆ image 3

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!