Google search engine
Home♦️ಇತ್ತೀಚಿನ ಸುದ್ದಿಗಳು.ಕಾನೂರು ವಲಯದ ನಿಟ್ಟೂರುನಲ್ಲಿ ಮಣ್ಣು ಪರೀಕ್ಷೆ ಹಾಗೂ ಮಾಹಿತಿ ಕಾರ್ಯಕ್ರಮ ಆಯೋಜನೆ.

ಕಾನೂರು ವಲಯದ ನಿಟ್ಟೂರುನಲ್ಲಿ ಮಣ್ಣು ಪರೀಕ್ಷೆ ಹಾಗೂ ಮಾಹಿತಿ ಕಾರ್ಯಕ್ರಮ ಆಯೋಜನೆ.

ಡಿ.20. ಕಾನೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್ (ರಿ )ವಿರಾಜಪೇಟೆ ತಾಲೂಕು, ಡಾ   ವೀರೇಂದ್ರ ಹೆಗ್ಗಡೆಯವರ ಮಾತೃಶ್ರೀ  ಹೇಮಾವತಿ ವಿ  ಹೆಗ್ಗಡೆಯವರ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟಗಳ ಆಶ್ರಯದ  ಕೃಷಿ ಕಾರ್ಯಕ್ರಮದಡಿಯಲ್ಲಿ ಮಣ್ಣು ಪರೀಕ್ಷೆ ಮಾಹಿತಿ ಕಾರ್ಯಕ್ರಮ ಕಾನೂರು ವಲಯದ ನಿಟ್ಟೂರು ಕಾರ್ಯಕ್ಷೇತ್ರದ ಕಾವೇರಿ ರವರ ಕೃಷಿ ತಾಕುವಿನಲ್ಲಿ  ನಡೆಯಿತು.

 ಸಂಪನ್ಮೂಲ ವ್ಯಕ್ತಿಯಾದ ಡಾ. ಮೋಹನ್ ಕುಮಾರ್  ಕೆ ಟಿ ವಿಷಯ ತಜ್ಞರು ( ಮಣ್ಣು ವಿಜ್ಞಾನ) ಅವರು ಮಾತನಾಡಿ ಮಣ್ಣು ಪರೀಕ್ಷೆ ಮತ್ತು ಮಣ್ಣು ಆರೋಗ್ಯ ಕಾರ್ಡ್ ಸಸ್ಯ ಪೋಷಕಾಂಶಗಳು ಪೋಷಕಾಂಶ ಅಸಮತೋಲನದ ಪರಿಣಾಮಗಳು ಮಣ್ಣು ಪರೀಕ್ಷೆಯ ಮಹತ್ವ ಮಣ್ಣು ಮಾದರಿ ಸಂಗ್ರಹಿಸಲು ಗಮನಿಸಬೇಕಾದ ಅಂಶಗಳು ಮಣ್ಣು ಮಾದರಿ ಸಂಗ್ರಹಣೆ ಪ್ರಕ್ರಿಯೆ ಹೇಗೆ ಮಾಡಬೇಕು ಮತ್ತು ಆಮ್ಲ ಮಣ್ಣು ಮತ್ತು ಅದರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು  

  ವಲಯದ ಮೇಲ್ವಿಚಾರಕರಾದ ಸುಜೀರ್. ಕೃಷಿ ಮೇಲ್ವಿಚಾರಕರಾದ ವಸಂತ್ ಕಾರ್ಯಕ್ರಮ ನಿರೂಪಿಸಿದರು ನಿಟ್ಟೂರು ಸೇವಾ ಪ್ರತಿನಿಧಿ  ಸರೋಜ ಸ್ವಾಗತಿಸಿದರು, ಬ್ರಹ್ಮಗಿರಿ ಸೇವಾ ಪ್ರತಿನಿಧಿ ಉದಯ್ ಪ್ರಗತಿಪರ ಕೃಷಿಕರು ನಿಟ್ಟೂರು ಒಕ್ಕೂಟದ ಪದಾಧಿಕಾರಿ ಕಾವೇರಿ ಸಂಘದ ಸದಸ್ಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!