ಇವರಿಗೆ,
ಶ್ರೀಮಾನ್ ಸತೀಶ್ ರವರಿಗೆ ಇಂಜಿನಿಯರ್ ಎ.ಇ.ಇ, ಲೋಕೋಪಯೋಗಿ ಇಲಾಖೆ ವಿರಾಜಪೇಟೆ 571218
ಬುಟ್ಟಂಗಾಲ ಬಿ. ಶೆಟ್ಟಿಗೇರಿ ಮುಖ್ಯ ರಸ್ತೆಯಲ್ಲಿ ಬರುವ ರುದ್ರುಗುಪ್ಪೆ ಸೇತುವೆ ಬಹಳ ಹಳೆಯದಾಗಿದ್ದು, ಸದರಿ ಸೇತುವೆಯ ಮಧ್ಯಭಾಗದ ಕಂಬದಲ್ಲಿ ಮರ ದೊಡ್ಡದಾಗಿ ಬೆಳೆದು ಮರದ ದೊಡ್ಡ ದೊಡ್ಡ ಬೇರುಗಳು ಕಂಬದ ಒಳಗೆ ನುಗ್ಗಿ ಸಿಮೆಂಟ್ ಮತ್ತು ಕಂಬಿಯನ್ನು ತಿಂದು ಸೇತುವೆಯ ಭದ್ರತೆಗೆ ಅಪಾಯವಾಗುವುದನ್ನು ತಿಳಿದ ನಾವು ವಿರಾಜಪೇಟೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶ್ರೀಮಾನ್ ಸತೀಶ್ ರವರನ್ನು (ಎ.ಇ.ಇ )ಪತ್ರ ಮುಖೇನ ಸೇತುವೆಯ ದುರಸ್ತಿಯನ್ನು ಮಾಡಿಕೊಡಲು ವಿಶೇಷ ಮನವಿ

ಮಾಡಿಕೊಂಡಾಗ ಅವರು ಪ್ರಕರಣದ ಗಂಭೀರತೆಯನ್ನು ಅರಿತು ತುರ್ತಾಗಿ ಸದರಿ ಸೇತುವೆಯ ಕಂಬದಲ್ಲಿ ಬೆಳೆದ ಮರ ಮತ್ತು ಮರದ ಬೇರನ್ನು ಸಂಪೂರ್ಣವಾಗಿ ಹೊರತೆಗೆದು ಸೇತುವೆಯ ಭದ್ರತೆ ಮತ್ತು ದೀರ್ಘ ಬಾಳಿಕೆಯನ್ನು ಹೆಚ್ಚಾಗುವಂತೆ ಮಾಡಿ ಸರ್ಕಾರದ ಆಸ್ತಿಯನ್ನು ರಕ್ಷಿಸಿ ಸದರಿ ಸೇತುವೆಯಲ್ಲಿ ವಾಹನ ಸವಾರರು ದೈರ್ಯವಾಗಿ ಸಂಚರಿಸಲು ಅನೂಕೂಲ ಮಾಡಿಕೊಟ್ಟಂತಹ ವಿರಾಜಪೇಟೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಶ್ರೀಮಾನ್ ಸತೀಶ್ ರವರ ಎ.ಇ.ಇ ತುರ್ತು ಕಾರ್ಯ ವೈಖರಿ ನಮಗೆ ಅತೀವ ಸಂತಸ ತಂದಿದೆ. ಮತ್ತು ಈ ಸೇತುವೆಯ ದುರಸ್ತಿ ಕಾರ್ಯದಲ್ಲಿ ಭಾಗಿಯಾದಂತಹ ಶ್ರೀಮಾನ್ ದಿಲಿಪ್, ಶ್ರೀಮಾನ್ ಶರಣ್ ಮತ್ತು ಶ್ರೀಮಾನ್ ಚಂದೂರ ಸಂದೇಶ್ ತಿಮ್ಮಯ್ಯ. ಶ್ರೀಮಾನ್ ಬಳಪಂಡ ಪಟ್ಟು, ಶ್ರೀಮಾನ್ ಚಿಮ್ಮಚ್ಛಿರ ಶಫೀಕ್, ಶ್ರೀಮಾನ್ ಚಿಮ್ಮಚ್ಚಿರ ಮೈದು. ಶ್ರೀಮಾನ್ ಗಣೇಶ್, ಶ್ರೀಮಾನ್ ಮಾದು ರವರಿಗೆ ಕೊಡಗಿನ ಕಾವೇರಿ ಮಾತೆ .ಇಗ್ಗುತ್ತಪ್ಪ ತಾಯಿ ಚಾಮುಂಡೇಶ್ವರಿ ಮತ್ತು ಬೇರಳಿನಾಡಿನ ಜೋಡು ಭಗವತಿ, ಕಮ್ಮರಟ್ಟಪ್ಪ ದೇವರ ಅನುಗ್ರಹ ಸದಾ ನಿಮ್ಮೆಲ್ಲರ ಮೇಲೆ ಇರಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತಾ ತಮಗೆಲ್ಲರಿಗೂ ನಾವು ವಿಶೇಷವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ವಂದನೆಗಳೊಂದಿಗೆ🙏🙏
🖍️🖍️🖍️ಕೆಂಜಂಗಡ ರೋಶನ್ ನಾಣಯ್ಯ ರಾಷ್ಟ್ರಮಟ್ಟದ ಸಾಮಾಜಿಕ ಕಾರ್ಯಕರ್ತ ,ಕೊಡಗು ಬೆಂಗಳೂರು 9448619408




