Google search engine
Home♦️ಇತ್ತೀಚಿನ ಸುದ್ದಿಗಳು.ಡಿ.21 ರಂದು  ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ (ರಿ.), ಕುಶಾಲನಗರ ತಾಲೂಕು ಘಟಕದ ವತಿಯಿಂದ  ವಾರ್ಷಿಕೋತ್ಸವ...

ಡಿ.21 ರಂದು  ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ (ರಿ.), ಕುಶಾಲನಗರ ತಾಲೂಕು ಘಟಕದ ವತಿಯಿಂದ  ವಾರ್ಷಿಕೋತ್ಸವ ಮತ್ತು ಗುರು ನಮನ ಕಾರ್ಯಕ್ರಮ.

ಕೆುಶಾಲನಗರ : 21/12/2015 ಭಾನುವಾರ ಬೆಳಿಗ್ಗೆ 8:30 ಗಂಟೆಗೆ  ಸೋಲೂರು ಮಠದ ಪರಮಪೂಜ್ಯ ವಿಖ್ಯಾತನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದೊಂದಿಗೆ  ಸಮಾಜದ ಎಲ್ಲಾ ಬಾಂಧವರು ಬ್ರಹ್ಮಶ್ರೀ ನಾರಾಯಣಗುರು ಮತ್ತು ಕೋಟಿ ಚೆನ್ನಯ್ಯರವರ ಭಾವಚಿತ್ರದ ಅಲಂಕೃತ ಮಂಟಪದ ಭವ್ಯ ಶೋಭಾ ಯಾತ್ರೆಯ ಮೆರವಣಿಗೆ ನಡೆಯಲಿದೆ

ವಾದ್ಯಗೋಷ್ಠಿಯೊಂದಿಗೆ ಸಾಗುವ ಶೋಭಾ ಯಾತ್ರೆಯು ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದಿಂದ ಗಣಪತಿ ದೇವಸ್ಥಾನವನ್ನು ಸುತ್ತುವರಿದು ನಂತರ  ಕುಶಾಲನಗರದ ಐ.ಬಿ ರಸ್ತೆಯ ಎ.ಪಿ.ಸಿ.ಎಂ.ಎಸ್ ಹಾಲ್ ಸಭಾಂಗಣಕ್ಕೆ ಸೇರುವುದು. ಅನಂತರದಲ್ಲಿ ಗುರುವಂದನೆ ಹಾಗೂ ಸಭಾ ಕಾರ್ಯಕ್ರಮ, ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜ (ರಿ) ನ ಕಾರ್ಯದರ್ಶಿಗಳಾದ ಬಿ.ಟಿ ದಿನೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ಕುಶಾಲನಗರ  ತಾಲೂಕು ಕೋಟಿ ಚೆನ್ನಯ್ಯ ಬಿಲ್ಲವ ಅಧ್ಯಕ್ಷರಾದ ಎಸ್ ಸುಧೀರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂತರ್ ಗೌಡ, ವಿಧಾನಪರಿಷತ್ ಸದಸ್ಯದರಾದ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಕುಮಾರ್, ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷರಾದ ಸತ್ಯಜಿತ್ ಸೂರತ್ಕಲ್ ಹಾಗೂ  ಸಮಾಜದ ಅನೇಕ ಗಣ್ಯರು  ಭಾಗವಹಿಸಲಿರುವರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಎಲ್ಲಾ ಬಾಂಧವರು ಆಗಮಿಸುವಂತೆ  ಅವರು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!