Google search engine
Home♦️ಇತ್ತೀಚಿನ ಸುದ್ದಿಗಳು.ಮುರ್ನಾಡನಲ್ಲಿ ಶ್ರೀ ಯೋಗಿ ನಾರೇಯಣ ಕೊಡಗು ಜಿಲ್ಲಾ ಬಲಿಜ ಸಂಘದ ವತಿಯಿಂದ 2026 ನೇ ಸಾಲಿನ...

ಮುರ್ನಾಡನಲ್ಲಿ ಶ್ರೀ ಯೋಗಿ ನಾರೇಯಣ ಕೊಡಗು ಜಿಲ್ಲಾ ಬಲಿಜ ಸಂಘದ ವತಿಯಿಂದ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ.

ಮುರ್ನಾಡು: ಶ್ರೀ ಯೋಗಿ ನಾರೇಯಣ ಕೊಡಗು ಜಿಲ್ಲಾ ಬಲಿಜ ಸಂಘದ ವತಿಯಿಂದ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಮುರ್ನಾಡು ಶ್ರೀ ಅಯ್ಯಪ್ಪ ದೇವಾಲಯದಲ್ಲಿ ನಡೆಯಿತು 

ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮದ ಮೂಲಕ ಕ್ಯಾಲೆಂಡರ್ ಅನ್ನು ಬಲಿಜ ಸಮಾಜದ ಹಿರಿಯರಾದ ಟಿ.ಎಲ್. ಲೋಕನಾಥ್ ಅವರು ಬಿಡುಗಡೆ ಮಾಡಿ ಮಾತನಾಡಿ, ಮುಂಬರುವ ದಿನಗಳಲ್ಲಿ ಸರ್ವರಿಗೂ ಅನುಕೂಲವಾಗುವಂತೆ ದೇವರು ಅನುಗ್ರಹಿಸಲಿ. ಬಲಿಜ ಸಮಾಜ ಇನ್ನಷ್ಟು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಆಶಿಸಿದರು .

ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷರಾದ ಗಣೇಶ್ ನಾಯ್ಡು ಅವರು ಮಾತನಾಡಿ ಜಿಲ್ಲೆಯಲ್ಲಿ ಈಗಾಗಲೇ ಬಲಿಜ ಸಮೂಹದ ಅಭ್ಯುದಾಯಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಆರ್ ಸುಬ್ರಮಣಿ, ಖಜಾಂಚಿ ಟಿ. ಎ. ಪ್ರಕಾಶ್, ನಿರ್ದೇಶಕರಾದ ಟಿ.ಎಸ್ .ರಮಿತಾ, ಯಶ್ವಂತ್ ಕುಮಾರ್ ನಾಯ್ಡು, ಟಿ.ಜಿ ಹರ್ಷ, ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕರು, ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!