ಚಿಕ್ಲಿಹೊಳೆ ಜಲಾನಯನ ಪ್ರದೇಶದ ರೈತರುಗಳ ದ್ವನಿಯಾಗಿ ಸಮಸ್ಯೆಗಳ ಗಂಭೀರತೆಯನ್ನು ನಿರಂತರವಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹೋರಾಟದ ಮೂಲಕ ಮನವರಿಕೆ ಮಾಡಿಕೊಡುತ್ತಿರುವ ಸ್ಥಳೀಯರಾದ ಆರ್.ಕೆ. ಚಂದ್ರು,

ಮುಂಗಾರಿನ ಕೊರತೆಯಿಂದ ಇನ್ನು ಭರ್ತಿಯಾಗದ ಡ್ಯಾಂ

ಅಪಾಯಕ್ಕೆ ಮುನ್ಸೂಚನೆ ನೀಡುತ್ತಿರುವ ಜಲಾಶಯ ಮುಂಭಾಗದಲ್ಲಿರುವ ದೊಡ್ಡ ಮೊಳಿ ರಂದ್ರದ ಮೂಲಕ ನೀರು ಹೊರಹೋಗುತ್ತಿರುವ ದೃಶ್ಯ.

ತೆರೆದ ಸ್ಥಿತಿಯಲ್ಲಿರುವ ಕಾಲುವೆಗೆ ನೀರು ಹರಿಸಲು ನಿರ್ಮಿಸಲಾಗಿರುವ ತೂಬಿನ ಗೇಟ್

ಎಡದಂಡೆ ಕಾಲುವೆಗೆ ಹರಿದು ಪೊಲಾಗುತ್ತಿರುವ ನೀರು.

ಅವ್ಯವಸ್ಥೆಯ ಆಗರವಾಗಿರುವ ಕಾಲುವೆಗೆ ಹರಿಸಿದರೆ ನೀರು ಸೋರಿಕೆಯಾಗಿ ಮನೆಗಳು ಕುಸಿಯವ ಆತಂಕದಲ್ಲಿರುವ ರೈತ ನೂಜಿಮನೆ ರಾಮಚಂದ್ರ ಅವರು.

ಮಡಿಕೇರಿ,ಜು.09: ಕುಶಾಲನಗರ ತಾಲ್ಲೂಕಿನ ರಂಗಸಮುದ್ರ ಗ್ರಾಮದಲ್ಲಿರುವ ‘ಚಿಕ್ಲಿಹೊಳೆ ಜಲಾಶಯ’ದ ಎಡದಂಡೆ ಮತ್ತು ಬಲದಂಡೆ ನಾಲೆಗಳ ತುರ್ತು ದುರಸ್ತಿ ಹಾಗೂ ಹೂಳು ಎತ್ತುವ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ಗೆ ಪತ್ರದ ಮೂಲಕ ಸೂಚಿಸಿದ್ದಾರೆ.
ಜಲಾಶಯದ ಉಭಯ ನಾಲೆಗಳು ದೀರ್ಘಕಾಲದಿಂದ ಹೂಳು ತುಂಬಿಕೊಂಡು ತೀವ್ರವಾಗಿ ಶಿಥಿಲಗೊಂಡಿದ್ದು, ಹೂಳು ಮತ್ತು ಸಸ್ಯವರ್ಗದಿಂದ ಮುಚ್ಚಿಹೋಗಿರುವುದರಿಂದ ಜಲಾಶಯದಿಂದ ಬಿಡಲಾಗುವ ನೀರು ನಾಲೆಯ ಕೊನೆಯ ಭಾಗದ (ಟೇಲ್ ಎಂಡ್) ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ತಲುಪುತ್ತಿಲ್ಲ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರ ಹಿತದೃಷ್ಟಿಯಿಂದ ನಾಲೆಗಳ ಪುನಶ್ಚೇತನ ಕಾರ್ಯ ಅತ್ಯಂತ ತುರ್ತಾಗಿ ಆಗಬೇಕಿದೆ. ಆದ್ದರಿಂದ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಉಭಯ ನಾಲೆಗಳ ಹೂಳು ತೆಗೆಯಲು ಮತ್ತು ಶಿಥಿಲಗೊಂಡಿರುವ ಭಾಗಗಳನ್ನು ಯುದ್ಧೋಪಾದಿಯಲ್ಲಿ ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ತಮ್ಮ ಕಛೇರಿಗೆ ಶೀಘ್ರವಾಗಿ ಮಾಹಿತಿ ಸಲ್ಲಿಸಬೇಕೆಂದು ಯದುವೀರ್ ಒಡೆಯರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.





