Google search engine
Home♦️ಇತ್ತೀಚಿನ ಸುದ್ದಿಗಳು.ಗುಡ್ಡೆಹೊಸೂರು ಪಂಚಾಯಿತಿ  ವಾರ್ಡ್ಗಳ ಜೋಡಣೆ ಭೌಗೋಳಿಕವಾಗಿ ಅಸಂಬದ್ಧವಾಗಿದೆ. ...

ಗುಡ್ಡೆಹೊಸೂರು ಪಂಚಾಯಿತಿ  ವಾರ್ಡ್ಗಳ ಜೋಡಣೆ ಭೌಗೋಳಿಕವಾಗಿ ಅಸಂಬದ್ಧವಾಗಿದೆ. ♦️ಬೆಂಗಳೂರಿನ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗಕ್ಕೆ ಬೇಟಿ ನೀಡಿ ಆಕ್ಷೇಪಣೆ ಪತ್ರ ಸಲ್ಲಿಸಿದ ಸ್ಥಳೀಯ ನಂಗಾರು ಜಗ 

ಕುಶಾಲನಗರ ಮೇ. 18:  ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ ಸ್ಥಾನಗಳ ಮರುಹಂಚಿಕೆ ಮತ್ತು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಕುರಿತಾಗಿ  ದಿನಾಂಕ 18-04-2026 ರಂದು ಹೊರಡಿಸಲಾದ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಮುಕ್ತ  ಅವಕಾಶ ಕಲ್ಪಿಸಲಾಗಿತ್ತು.

ಈ ಸಂಭಂದ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟಂತೆ ಬಾಳುಗೋಡು ಹಾಗೂ ಅತ್ತೂರು ಬೂತುಗಳ ಬೇರೆ ಬೇರೆಯಾಗಿದ್ದು ವಾರ್ಡ್ಗಳ ಜೋಡಣೆ ಭೌಗೋಳಿಕವಾಗಿ ಅಸಂಬದ್ಧವಾಗಿದೆ ಎಂಬ ತಕರಾರು ಅರ್ಜಿಯನ್ನು  ಗ್ರಾಮಸ್ಥರ ಪರವಾಗಿ ಸ್ಥಳೀಯರಾದ ನಂಗಾರು ಜಗ್ಗ ಅವರು  ಬೆಂಗಳೂರಿನಲ್ಲಿರುವ  ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಿರ್ದೇಶಕರಿಗೆ  ಈ ಮೇಲ್ ಮೂಲಕ   ಆಕ್ಷೇಪಣಾ ಮನವಿ ಪತ್ರ ಸಲ್ಲಿಸಿದ್ದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರ ನಂಗಾರು ಜಗ ಅವರನ್ನು 14/5/26 ರಂದು ಖುದ್ದಾಗಿ ಬೆಂಗಳೂರಿನ ಕಚೇರಿಗೆ  ಭೇಟಿ ನೀಡಿ ಆಕ್ಷೇಪಣೆ ಸಲ್ಲಿಸಿದ ಕುರಿತಾಗಿ ಸ್ಪಷ್ಟನೆ ನೀಡಲು  ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ನಿರ್ದೇಶನ ನೀಡಿತ್ತು.

ಆಯೋಗದ ಅದಾಲತ್ತಿನ ನಿಯೋಗ ಮುಂದೆ ಹಾಜರಾಗಿ ಸ್ಪಷ್ಟ ನೀಡಿದ ಜಗ ಅವರು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಬೂತ್ ಸಂಖ್ಯೆ 185 ರ ರಸಲ್ಪೂರ ಮತ್ತು  ಅತ್ತೂರು ಗ್ರಾಮದ  ಬೂತ್ ಸಂಖ್ಯೆ 184 , ಇವುಗಳೆರಡು ಬೂತ್ ಗಳು ಒಂದೇ ವಾರ್ಡಿಗೆ ಒಳಪಟ್ಟಿರುತ್ತವೆ,  ಆದರೆ  ಈ ಎರಡು ಬೂತುಗಳಲ್ಲಿ ಬೇರೆ ಬೇರೆ ಮತದಾನವಾಗುತ್ತಿದ್ದು ಜನಪ್ರತಿನಿಧಿಗಳು ಎರಡಕ್ಕೂ ಸೇರಿ ನಾಲ್ವರಿದ್ದು ,  ಸಮಸ್ಯೆಯ ಭಾಗವಾಗಿ ಈ ಎರಡು ಗ್ರಾಮಗಳ ಮಧ್ಯೆ ಸುಮಾರು 14 ಕಿಲೋಮೀಟರ್ಗಳ ಅಂತರವಿದ್ದು ಈ ಅಂತರದಲ್ಲಿ ಬೊಳ್ಳೂರು ಗುಡ್ಡೆಹೊಸೂರು ಮತ್ತು ಬಸವನಹಳ್ಳಿ ಎಂಬ ಗ್ರಾಮಗಳಿದ್ದು ಅವುಗಳಿಗೆ ಪ್ರತ್ಯೇಕ ವಾರ್ಡ್ ಗಳಿರುತ್ತವೆ.

 ಇಲ್ಲಿನ ಬೂತ್ ಸಂಖ್ಯೆ 184 ಹಾಗೂ 185 ರಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರುಗಳು ಸುಮಾರು 14 ಕಿಲೋಮೀಟರ್ ಅಂತರವನ್ನು ಕ್ರಮಿಸಿ ಸಾರ್ವಜನಿಕ ಸೇವೆ ಸಲ್ಲಿಸುವ ಅನಿವಾರ್ಯತೆ ಇದೆ,  ಆದುದರಿಂದ ಸಾರ್ವಜನಿಕರಿಗೆ ಸರಿಯಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮತ್ತು ಜನರ ಸಮಸ್ಯೆಯನ್ನು ಆಲಿಸಿ ಅವರೊಂದಿಗೆ ಸ್ಪಂದಿಸಲು ಕಷ್ಟ ಸಾಧ್ಯವಾಗುತ್ತಿದೆ, ಎಂದು ಸೀಮಾ ನಿರ್ಣಯ ಆಯೋಗದ ಅದಾಲತ್ತಿನ ನಿಯೋಗ ಮುಂದೆ ಅವರು ವಾದವನ್ನು ಸ್ಪಷ್ಟಿಕರಿಸಿದರು.

ಹಾಗೂ ರಸಲ್ಪುರ- ಬಾಳುಗೋಡು ಮತಗಟ್ಟೆಯಲ್ಲಿ ಸುಮಾರು ಸಾವಿರದ ಇನ್ನೂರು ಮತದಾರರಿದ್ದು, ಕ್ಷೇತ್ರಕ್ಕೆ  ಜನಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಬೂತ್ ಇರುತ್ತದೆ ,  ಆದುದರಿಂದ ಈ ವಾರ್ಡಿನ ಮತದಾರರಿಗೆ  ಪ್ರತ್ಯೇಕ  ಚುನಾಯಿತ ಪ್ರತಿನಿಧಿಗಳನ್ನು  ಆಯ್ಕೆ ಮಾಡಿಕೊಳ್ಳುವ  ಅನಿವಾರ್ಯತೆಯ ಕುರಿತಾಗಿ ಸೀಮಾ ನಿರ್ಣಯ ಆಯೋಗದ ಅದಾಲತ್ತಿಗೆ ಅವರು ಮನವರಿಕೆ ಮಾಡಿದ್ದಾರೆ.

 ಅದೇ ರೀತಿ ಅತ್ತೂರು ಮತಗಟ್ಟೆಯಲ್ಲಿ ಕೂಡ   492 ಮತದಾರರಿದ್ದು ಅಲ್ಲಿಯೂ ಕೂಡ  ಅವರು ಪ್ರತ್ಯೇಕ ಚುನಾಯಿತ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳವ ಅಥವಾ ಸಮೀಪದ ಬೇರೊಂದು  ವಾರ್ಡಿನೊಂದಿಗೆ ಸಮಂಜಸವಾದ ಭೌಗೋಳಿಕ ಜೋಡಣೆಗೆ  ಅನುವು ಮಾಡಿಕೊಡಬೇಕೆಂದು  ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕರಡು ಪ್ರಕಟಣೆಯನ್ನು ಮರುಪರಿಶೀಲಿಸಿ, ನ್ಯಾಯಸಮ್ಮತವಾಗಿ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಬೇಕೆಂದು  ಅದಾಲತ್ನಲ್ಲಿ ತಮ್ಮ ವಿಚಾರವನ್ನು ಮಂಡಿಸಿದರು.

ಮತ್ತು 18 ಸ್ಥಾನಗಳಿದ್ದ ಗುಡ್ಡೆಹೊಸೂರು ಪಂಚಾಯತಿಯ ಸದಸ್ಯ ಸಂಖ್ಯಾ ಬಲವನ್ನು 15 ಸ್ಥಾನಗಳಿಗೆ ಸೀಮಿತಗೊಳಿಸಿರುವ  ಕುರಿತಾಗಿಯೂ ಇದೆ ಸಂದರ್ಭ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಈ ಎಲ್ಲಾ ಆಕ್ಷೇಪಣೆಗಳು ಪರಿಶೀಲಿಸಿ ಸರಿ ಎನಿಸಿದರೆ ಕರಡು ಪ್ರಕಟಣೆಯಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ಆನಂತರ ಅಂತಿಮ ಅಧಿಸೂಚನೆಯನ್ನು (Final Notification) ಹೊರಡಿಸಲಾಗುತ್ತದೆ. ಈ ಅಂತಿಮ ಪಟ್ಟಿಯ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ನಂಗಾರು ಜಗ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!