Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಜಿಲ್ಲೆ

ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಳ ಪರಿಶೀಲನೆ

by Kodagu Varadi•ಅಕ್ಟೋಬರ್ 2, 2026
ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಳ ಪರಿಶೀಲನೆ
ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಸಮುದಾಯ ಭವನ ನಿರ್ಮಾಣ ಸ್ಥಳ ಪರಿಶೀಲನೆ image 1

ನಾಪೋಕ್ಲು: ಬೆಟ್ಟಗೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಬಕ್ಕದಲ್ಲಿ ಇಲ್ಲಿನ ನಾಲ್ಕು ಸ್ವಾಸಹಾಯ ಸಂಘಗಳು, ಗಜಾನನ ಭಕ್ತ ಮಂಡಳಿ ಹಾಗೂ ಸಾರ್ವಜನಿಕರು ಸಲ್ಲಿಸಿದ ಮನವಿಯ ಮೇರೆಗೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ ಎಸ್ ಪೊನ್ನಣ್ಣನವರು ಇಲ್ಲಿಗೆ ಸಮುದಾಯ ಭವನವನ್ನು ಮಂಜೂರು ಮಾಡಿದ್ದರು. ಇದರ ಸ್ಥಳ ಪರಿಶೀಲನೆಗಾಗಿ ಗುತ್ತಿಗೆದಾರ ಗೌರೀಶ್ ಹಾಗೂ ಭಾಗಮಂಡಲ ಕಾಂಗ್ರೆಸ್ ವಲಯಾಧ್ಯಕ್ಷರಾದ ವೆಂಕಟೇಶ್ ರವರನ್ನು ಆಗಮಿಸಲು ತಿಳಿಸಲಾಗಿತ್ತು. ಅದರಂತೆ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಸ್ಥಳವನ್ನು ಗುರುತಿಸಲಾಯಿತು. ಕಾರ್ಯಕಾರಿ ಸಮಿತಿಯ ಕಾರ್ಯಗಳನ್ನು ಬೆಟ್ಟಗೇರಿ ಗ್ರಾಮ ಪಂಚಾಯಿತಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಕೊಡಗನ ತೀರ್ಥಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರುದರು. ಹಾಗೂ ಭಾಗಮಂಡಲ ಕಾಂಗ್ರೆಸ್ ವಲಯಾಧ್ಯಕ್ಷರಾದ ವೆಂಕಟೇಶ್ ರವರು ಮಾತನಾಡಿ ಅಗತ್ಯ ಸಲಹೆಗಳನ್ನು ನೀಡಿದರು. ಶ್ರೀ ಕೃಷ್ಣ ಸಂಘ ದ ಕಾರ್ಯ ದರ್ಶಿ ಹೊಸೋಕ್ಲು ಮೋನ್ನಪ್ಪ ಈ ಸಭೆಯ ಮೂಲಕ ಎಲ್ಲರೂ ಒಂದಾಗಿ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು. ಸಭೆಯಲ್ಲಿ ಸ್ಥಳೀಯರಾದ ಪ್ರಕಾಶ್ ರೈ , ನೆಯ್ಯಂಣಿ ತಾರೇಂದ್ರ, ರಂಜನ್, ಲೋಕನಾಥ್, ಬೈತಡ್ಕ ಎಸ್ ದೇವಯ್ಯ , ವೀಕ್ಷಿತ್ , ಜೀವನ್, ಲವ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ✍️ದುಗ್ಗಳ ಸದಾನಂದ..

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!