Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಗ್ರಾಮ ಪಂಚಾಯಿತಿ

ಚೆಟ್ಟಳ್ಳಿ ಪೊನ್ನತ್ತಮೊಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ: 30 ಕುಟುಂಬಗಳ ಜೀವದ ಜೊತೆ ಚೆಲ್ಲಾಟ, ಗ್ರಾಮ ಪಂಚಾಯಿತಿ ಆಡಳಿತ ದಿವ್ಯ ನಿರ್ಲಕ್ಷ

by Kodagu Varadi•ಅಕ್ಟೋಬರ್ 9, 2026BREAKING
ಚೆಟ್ಟಳ್ಳಿ ಪೊನ್ನತ್ತಮೊಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ: 30 ಕುಟುಂಬಗಳ ಜೀವದ ಜೊತೆ ಚೆಲ್ಲಾಟ, ಗ್ರಾಮ ಪಂಚಾಯಿತಿ ಆಡಳಿತ ದಿವ್ಯ ನಿರ್ಲಕ್ಷ

ಚೆಟ್ಟಳ್ಳಿ: ಇಲ್ಲಿನ ಪೊನ್ನತ್ತಮೊಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೈಸರಿ ಜಾಗದಲ್ಲಿ ವಾಸಿಸುತ್ತಿರುವ ಸುಮಾರು 30 ಬಡ ಕುಟುಂಬಗಳಿಗೆ ಈ ಹಿಂದೆ ಕಲ್ಪಿಸಲಾಗಿದ್ದ ಕುಡಿಯುವ ನೀರಿನ ಸಂಪರ್ಕವನ್ನು ದಿಢೀರನೆ ಸ್ಥಗಿತಗೊಳಿಸಲಾಗಿದ್ದು, ಈ ಭಾಗದ ನಿವಾಸಿಗಳು ತೀವ್ರ ಕುಡಿಯುವ ನೀರಿನ ಅಭಾವ ಎದುರಿಸುತ್ತಿದ್ದಾರೆ. ನೀರಿನ ಅಭಾವದಿಂದಾಗಿ ಅನಿವಾರ್ಯವಾಗಿ ಸ್ಥಳೀಯರು ಹತ್ತಿರದ ಸಣ್ಣ ಕೆರೆಯಂತಹ (ಕಲುಷಿತ) ಗುಂಡಿಯ ನೀರನ್ನು ಕುಡಿಯಲು ಮತ್ತು ದಿನನಿತ್ಯದ ಬಳಕೆಗೆ ಬಳಸುತ್ತಿದ್ದಾರೆ. ಕಲುಷಿತ ನೀರು ಬಳಸುತ್ತಿರುವುದರಿಂದ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈಗಾಗಲೇ ಹಲವರು ಅಸ್ವಸ್ಥಗೊಳ್ಳುವ ಭೀತಿಯಲ್ಲಿದ್ದರೂ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ವಿಷಯವಾಗಿ ಯಾವುದೇ ಸ್ಪಂದನೆ ನೀಡದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಈ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ , ಪಂಚಾಯಿತಿ ಕಚೇರಿ ಮುಂದೆ ನಿವಾಸಿಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ (CEO) ಮತ್ತು ತಾಲೂಕು ಪಂಚಾಯಿತಿ ಇಒ (EO) ಅವರಿಗೆ ದೂರು ನೀಡಲಾಗುವುದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ✍️ ವರದಿ ಪ್ರಿತುನ್ ಪೂವಣ್ಣ

ಚೆಟ್ಟಳ್ಳಿ ಪೊನ್ನತ್ತಮೊಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ: 30 ಕುಟುಂಬಗಳ ಜೀವದ ಜೊತೆ ಚೆಲ್ಲಾಟ, ಗ್ರಾಮ ಪಂಚಾಯಿತಿ ಆಡಳಿತ ದಿವ್ಯ ನಿರ್ಲಕ್ಷ image 3ಚೆಟ್ಟಳ್ಳಿ ಪೊನ್ನತ್ತಮೊಟ್ಟೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ: 30 ಕುಟುಂಬಗಳ ಜೀವದ ಜೊತೆ ಚೆಲ್ಲಾಟ, ಗ್ರಾಮ ಪಂಚಾಯಿತಿ ಆಡಳಿತ ದಿವ್ಯ ನಿರ್ಲಕ್ಷ image 4

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!