Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ಕ್ರೀಡೆ

ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ

by Kodagu Varadi•ಅಕ್ಟೋಬರ್ 6, 2026BREAKING
ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ

ಕುಶಾಲನಗರ, ಅ.6: ಕೊಡಗು ಸೈನಿಕ ಶಾಲೆಯ 2026-27ನೇ ಸಾಲಿನ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಕೂಡಿಗೆಯ ಕ್ರೀಡಾಶಾಲೆಯ ಅಥ್ಲೆಟಿಕ್ಸ್ ಮೈದಾನದಲ್ಲಿ ಚಾಲನೆ ನೀಡಲಾಯಿತು.ಪಥಸಂಚಲನ ಮತ್ತು ಕ್ರೀಡಾಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟನಾ ಸಮಾರಂಭ ಆರಂಭವಾಯಿತು. ಶಾಲೆಯ ಪ್ರಭಾರ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಮುಖ್ಯ ಅತಿಥಿಯಾಗಿ ಹಾಗೂ ಆಡಳಿತಾಧಿಕಾರಿ ಸ್ಕ್ವಾಡ್ರನ್ ಲೀಡರ್ ದೀಪಕ್ ನಾಯಕ್ ಗೌರವ ಅತಿಥಿಯಾಗಿ ಭಾಗವಹಿಸಸಿದ್ದರು. ಶಿಸ್ತು, ದೃಢನಿಶ್ಚಯ ಮತ್ತು ಕ್ರೀಡಾಸ್ಫೂರ್ತಿಯ ಸಂಕೇತವಾಗಿ ಜ್ಯೋತಿ ಬೆಳಗಿಸಿ, ಶಾಂತಿಯ ದ್ಯೋತಕವಾಗಿ ಬಿಳಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಕೂಟಕ್ಕೆ ಅಧಿಕೃತ ಚಾಲನೆ ನೀಡಿ ಆನಂತರ ಮಾತನಾಡಿದ ಮೊಹಮ್ಮದ್ ಶಾಜಿ, ಎಲ್ಲಾ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಕೆಡೆಟ್‌ಗಳಿಗೆ ಕರೆ ನೀಡಿದರು. ಶೀಘ್ರದಲ್ಲೇ ಕೊಡಗು ಸೈನಿಕ ಶಾಲೆಯಲ್ಲಿ ನಡೆಯಲಿರುವ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಈ ಅಥ್ಲೆಟಿಕ್ಸ್ ಕೂಟ ಉತ್ತಮ ಪೂರ್ವಸಿದ್ಧತೆಯಾಗಲಿದೆ ಎಂದರು. ಮಹಿಳಾ ಅಥ್ಲೀಟ್‌ಗಳು ಪುರುಷರಿಗೆ ಸರಿಸಮನಾಗಿ, ಹಲವೆಡೆ ಅವರಿಗಿಂತಲೂ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ ಎಂದು ಹೇಳಿದ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಅಥ್ಲೀಟ್‌ಗಳ 'ನಾರಿ ಶಕ್ತಿ' ಸಾಧನೆಯನ್ನು ಶ್ಲಾಘಿಸಿ , ಶಾಲೆಯ ವಿದ್ಯಾರ್ಥಿನಿಯರು ಕೂಡ ಆತ್ಮವಿಶ್ವಾಸದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂದು ಪ್ರೇರೇಪಿಸಿದರು. ಸಮಾರಂಭದಲ್ಲಿ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 3ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 4ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 5ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 6ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 7ಕೊಡಗು ಸೈನಿಕ ಶಾಲೆಯಲ್ಲಿ 20ನೇ ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ ಆರಂಭ image 8

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!