Google search engine
Home♦️ಇತ್ತೀಚಿನ ಸುದ್ದಿಗಳು.​ಮಡಿಕೇರಿ ಇಂದಿರಾ ಕ್ಯಾಂಟೀನ್ ಗೆ  ಕರವೇ ಸ್ವಾಭಿಮಾನಿ ಬಣದಿಂದ  ಮುತ್ತಿಗೆ, ಅವ್ಯವಸ್ಥೆ ಕುರಿತು ತೀವ್ರ ಆಕ್ರೋಶ.

​ಮಡಿಕೇರಿ ಇಂದಿರಾ ಕ್ಯಾಂಟೀನ್ ಗೆ  ಕರವೇ ಸ್ವಾಭಿಮಾನಿ ಬಣದಿಂದ  ಮುತ್ತಿಗೆ, ಅವ್ಯವಸ್ಥೆ ಕುರಿತು ತೀವ್ರ ಆಕ್ರೋಶ.

 ಮಡಿಕೇರಿ, ಜು 08:  ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸರ್ಕಾರ ನಿಗದಿಪಡಿಸಿದ 5 ರೂಪಾಯಿ ಬೆಲೆಗಿಂತ ಅಧಿಕ ( 10 ರೂಪಾಯಿ) ವಸೂಲಾತಿ , ಕಳಪೆ ಆಹಾರ ವಿತರಣೆ, ಕುಡಿಯುವ ನೀರಿನ ಯಂತ್ರದ ವೈಫಲ್ಯ, ಆವರಣದಲ್ಲಿ ತುಂಬಿದ್ದ ಕಳೆ ಹಾಗೂ ನಿಯಮಬಾಹಿರವಾಗಿ ನಡೆಯುತ್ತಿದ್ದ ಪಾರ್ಸೆಲ್ ದಂಧೆ ಇತ್ಯಾದಿ ಸಮೆಸ್ಯೆಗಳ ಕುರಿತಾಗಿ ಸಾರ್ವಜನಿಕರ ದೂರಿನ ಬೆನ್ನಲ್ಲೇ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು  ಕ್ಯಾಂಟೀನ್ ಗೆ ಭೇಟಿ ನೀಡಿದ್ದರು.

ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ, ನೇತೃತ್ವದಲ್ಲಿ ಉಪಾಧ್ಯಕ್ಷರಾದ ರಾಜಶೇಖರ ಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಜಯಶ್ರೀ ಮುರುಗೇಶ್ ಸೇರಿದಂತೆ ಹಲವು ಪ್ರಮುಖ ಪದಾಧಿಕಾರಿಗಳು  ಇದೆ ಸಂದರ್ಭ ಅವ್ಯವಸ್ಥೆ ಕುರಿತಾಗಿ ತೀವ್ರವಾಗಿ ಪ್ರತಿಭಟಿಸಿದರು.

ನಂತರ ಕರವೇ ಕಾರ್ಯಕರ್ತರು ನಗರಸಭೆಯ ಎ.ಡಬ್ಲ್ಯೂ.ಇ (AEE) ಸತೀಶ್ ಅವರ ಕಚೇರಿಗೆ ಬೇಟಿ ನೀಡಿ ಸಮಸ್ಯೆ ಕುರಿತಾಗಿ ಅವರಿಗೆ ಮನವರಿಕೆ ಮಾಡಿದರು.  ಸಂಘಟನೆಯ ಆಕ್ರೋಶಕ್ಕೆ ತಕ್ಷಣ ಸ್ಪಂದಿಸಿದ ಅಧಿಕಾರಿ ಸತೀಶ್ ಅವರು, ಇಂದಿನಿಂದಲೇ ಸರ್ಕಾರದ ನಿಯಮದಂತೆ 5 ರೂಪಾಯಿ ಮಾತ್ರ ಪಡೆಯಲು, ಅಕ್ರಮ ಪಾರ್ಸೆಲ್ ನಿಲ್ಲಿಸಲು, ಆವರಣ ಸ್ವಚ್ಛಗೊಳಿಸಿ ಕುಡಿಯುವ ನೀರಿನ ಯಂತ್ರವನ್ನು ಶೀಘ್ರದಲ್ಲೇ ದುರಸ್ತಿ ಮಾಡಲು ಕಟ್ಟುನಿಟ್ಟಿನ ಆದೇಶ ನೀಡಿ ಎರಡು ದಿನಗಳಲ್ಲಿ ವ್ಯವಸ್ಥೆ ಸರಿಪಡಿಸುವ ಭರವಸೆ ನೀಡಿದರು.

 ಹಸಿದು ಬರುವ ನೈಜ ಬಡ ಗ್ರಾಹಕರಿಗೆ ಆಗುತ್ತಿರುವ  ತೀವ್ರ ಅನ್ಯಾಯವನ್ನು ಸರಿಪಡಿಸದಿದ್ದರೆ, ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಮಡಿಕೇರಿ ನಗರಸಭೆಯ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು  ಎಚ್ಚರಿಸಿದ್ದಾರೆ.

ಕುಶಾಲನಗರ ತಾಲೂಕು ಅಧ್ಯಕ್ಷರಾದ ಶಿವು ಮತ್ತು ಕುಶಾಲನಗರ ಕರವೇ ಸ್ವಾಭಿಮಾನಿ ಬಣದ ತಾಲ್ಲೂಕು ಉಪಾಧ್ಯಕ್ಷರಾದ ನಾಸಿರ್ ಮತ್ತು ಕುಶಾಲನಗರ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಮತ್ತು ಕುಶಾಲನಗರ ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರದ ಮಣಿಕಂಠ ಮತ್ತು ಮಡಿಕೇರಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ನಂದಿನಿ ಮತ್ತು ಸುಂಟಿಕೊಪ್ಪ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಭವ್ಯ ಮತ್ತು ಪದಾಧಿಕಾರಿಗಳಾದ ರವೀಂದ್ರ ಮತ್ತು ವಿಲ್ಸನ್ ಮತ್ತು ನಂಜಪ್ಪ ಮತ್ತು ರಮೇಶ್ ಮತ್ತು ಕಾರ್ತಿಕ್ ಮತ್ತು ಬಾಲಕೃಷ್ಣ ಅವರುಗಳು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!