ಶಾಂತಳ್ಳಿ ಏ.16: ಶಾಂತಳ್ಳಿ ಸಮೀಪ ಹರಗ ಗ್ರಾಮದ, “ಹೆಮ್ಮಟ್ಟಿರ ಮನೆ” ಕುಟುಂಬಸ್ಥರ ಏಳು ಕೂಟ ಆರಾಧ್ಯ ದೈವಗಳ ನೇಮೋತ್ಸವ (ಕೋಲ)ದ ಅಂಗವಾಗಿ ನಾಳೆ ಸಂಜೆ ಸರಿಯಾಗಿ 6:30 ಗಂಟೆಗೆ ತಾಯಿ ಮನೆಯಲ್ಲಿ ಗಗ್ಗರ ಪೂಜೆ ನೇಮೋತ್ಸವ ನಡೆಯಲಿದೆ . ಆನಂತರ ಏಳು ಕೂಟ ದೈವಗಳ ನೇಮೋತ್ಸವ (ಕೋಲ) ಆರಂಭವಾಗುವುದು 17-04-2026ರ ಸಂಜೆಯಿಂದ 18-04-2026ರ ಬೆಳಗ್ಗೆ 6:30 ವರೆಗು ಹರಕೆ ಒಪ್ಪಿಸಲಾಗುವುದು ಎಂದು ಹರಗ ಗ್ರಾಮದ, “ಹೆಮ್ಮಟ್ಟಿರ ಮನೆ” ಕುಟುಂಬಸ್ಥರು ಮಾಹಿತಿ ನೀಡಿದ್ದು, ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಿದ್ದರೆ.
ದೈವಾರಾಧನೆಯ ಹಿನ್ನೆಲೆ
ದೈವಾರಾಧನೆ (ಭೂತಾರಾಧನೆ) ತುಳುನಾಡು (ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು) ಮತ್ತು ಕೊಡಗಿನ ಅವಿಭಾಜ್ಯ ಸಂಸ್ಕೃತಿಯಾಗಿದ್ದು, ಜಾರಂದಾಯ, ಉಳ್ಳಾಲ್ತಿ, ಪಂಜುರ್ಲಿ, ಬಬ್ಬುಸ್ವಾಮಿ ಮುಂತಾದ ದೈವಗಳನ್ನು ಭಯ-ಭಕ್ತಿಯಿಂದ ಆರಾಧಿಸುವ ಉತ್ಸವವಾಗಿದೆ. ಈ ಆರಾಧನೆಯಲ್ಲಿ ಕೋಲ, ನೇಮ, ಬಂಡಿ ಉತ್ಸವಗಳ ಮೂಲಕ ದೈವಗಳು ಮಾನವನಿಗೆ ರಕ್ಷಣೆ ನೀಡುತ್ತವೆ ಎಂಬ ಪ್ರತೀತಿ ಇದೆ.






