ಪೊನ್ನಂಪೇಟೆ ಏ.19: ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿ ಮುಕಳಮಾಡ ರತು ಕಾಯಿಮನೆ ಅವರ ಕುಟುಂಬದವರಿಗೆ ಸರಕಾರದಿಂದ ನೀಡುವ ಪರಿಹಾರ ಮೊತ್ತದ ಉಳಿಕೆ ₹15 ಲಕ್ಷಗಳ ಚೆಕ್ಕನ್ನು ಇಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರು ಹಸ್ತಾಂತರಿಸಿದರು.
ಈ ಹಿಂದೆ ಆನೆ ದಾಳಿಯಾದ ಸಂದರ್ಭದಲ್ಲಿ ಮೃತನ ಕುಟುಂಬಕ್ಕೆ ರೂ 5 ಲಕ್ಷದ ಚೆಕ್ಕನ್ನು ನೀಡಲಾಗಿತ್ತು.
ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರು ಮಿದೇರಿರ ನವೀನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.




