Google search engine
Home♦️ಇತ್ತೀಚಿನ ಸುದ್ದಿಗಳು.ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-III (ಪಿ.ಎಂ.ಜಿ.ಎಸ್.ವೈ.-III) ಅನ್ನು ಮಾರ್ಚ್ 2025 ರಿಂದ ಮಾರ್ಚ್ 2028 ರವರೆಗೆ...

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-III (ಪಿ.ಎಂ.ಜಿ.ಎಸ್.ವೈ.-III) ಅನ್ನು ಮಾರ್ಚ್ 2025 ರಿಂದ ಮಾರ್ಚ್ 2028 ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ 

ನವದೆಹಲಿ ಏ 18: ಇಂದು ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-III (ಪಿ.ಎಂ.ಜಿ.ಎಸ್.ವೈ.-III) ಅನ್ನು ಮಾರ್ಚ್ 2025 ರಿಂದ ಮಾರ್ಚ್ 2028 ರವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ.

 ಇದು ಗ್ರಾಮೀಣ ಕೃಷಿ ಮಾರುಕಟ್ಟೆಗಳು (ಜಿ.ಆರ್.ಎ.ಎಂ.), ಉನ್ನತ ಮಾಧ್ಯಮಿಕ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಜನವಸತಿಗಳನ್ನು ಸಂಪರ್ಕಿಸುವ ಮಾರ್ಗಗಳು ಮತ್ತು ಪ್ರಮುಖ ಗ್ರಾಮೀಣ ಸಂಪರ್ಕಗಳ ಏಕೀಕರಣವನ್ನು ಒಳಗೊಂಡಿರುತ್ತದೆ. ಯೋಜನೆಯ ಪರಿಷ್ಕೃತ ವೆಚ್ಚವು 83,977 ಕೋಟಿ ರೂ.ಗಳಾಗಿರುತ್ತದೆ.

ಹಾಗೂ ಸಮತಟ್ಟಾದ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಸೇತುವೆಗಳನ್ನು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ರಸ್ತೆಗಳನ್ನು ಪೂರ್ಣಗೊಳಿಸಲು ಮಾರ್ಚ್ 2028 ರವರೆಗೆ ಕಾಲಮಿತಿಯನ್ನು ವಿಸ್ತರಿಸಲಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸೇತುವೆಗಳನ್ನು ಪೂರ್ಣಗೊಳಿಸಲು ಕಾಲಮಿತಿಯನ್ನು ಮಾರ್ಚ್ 2029 ರವರೆಗೆ ವಿಸ್ತರಿಸಲಾಗಿದೆ. 31.03.2025 ಕ್ಕಿಂತ ಮೊದಲು ಮಂಜೂರಾದ ಆದರೆ ಇಲ್ಲಿಯವರೆಗೆ ಮಂಜೂರು ಆದೇಶ ಪಡೆಯದ ಕಾಮಗಾರಿಗಳನ್ನು ಟೆಂಡರ್/ ಮಂಜೂರು ಆದೇಶ ತೆಗೆದುಕೊಳ್ಳಬಹುದಾಗಿದೆ 

ಮಂಜೂರಾತಿಗೆ ಬಾಕಿ ಉಳಿದಿರುವ ಆದರೆ ಈಗಾಗಲೇ ಮಂಜೂರಾದ ರಸ್ತೆಗಳ ಜೋಡಣೆಯಲ್ಲಿ ಉಳಿದಿರುವ ಉದ್ದನೆಯ ಸೇತುವೆಗಳು (ಎಲ್.ಎಸ್.ಬಿ.ಗಳು) (ರೂ.961 ಕೋಟಿ ಅಂದಾಜು ವೆಚ್ಚದೊಂದಿಗೆ 161 ಸಂಖ್ಯೆಗಳು) ಮಂಜೂರಾತಿ ಮತ್ತು ಟೆಂಡರ್/ಮಂಜೂರು ಆದೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ರೂ.80,250 ಕೋಟಿ ಮೂಲ ವೆಚ್ಚದಿಂದ ರೂ.83,977 ಕೋಟಿಗೆ ವೆಚ್ಚವನ್ನು ಪರಿಷ್ಕರಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!