Google search engine
Home♦️ಇತ್ತೀಚಿನ ಸುದ್ದಿಗಳು.ಮರಗೋಡುವಿನಲ್ಲಿ ಗೌಡ ಕುಟುಂಬಗಳ ಕ್ರೀಡಾ ಕಲರವ;  ಈವನಿಂಗ್ ಸ್ಟಾರ್ ಆಯೋಜಿತ ಕ್ರಿಕೇಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ.

ಮರಗೋಡುವಿನಲ್ಲಿ ಗೌಡ ಕುಟುಂಬಗಳ ಕ್ರೀಡಾ ಕಲರವ;  ಈವನಿಂಗ್ ಸ್ಟಾರ್ ಆಯೋಜಿತ ಕ್ರಿಕೇಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ.

ಮರಗೋಡು ಏ14:   ಕೌಟುಂಬಿಕ ಹಬ್ಬ ಹಾಗೂ ಕ್ರೀಡೆಗಳಲ್ಲಿ ಕುಟುಂಬದ ಸದಸ್ಯರು ಪಾಲ್ಗೊಂಡು ತಂಡವಾಗಿ ಆಡುವಾಗ ಪರಸ್ಪರರಲ್ಲಿ  ಸಹಕಾರ, ಶಿಸ್ತು, ಮತ್ತು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ ಎಂದು ಅಂತಾರಾಷ್ಟ್ರೀಯ ಮ್ಯಾರಾಥಾನ್ ಓಟಗಾರರಾದ ಹೊಸೋಕು ಚಿಣ್ಣಪ್ಪ ಅಭಿಪ್ರಾಯಪಟ್ಟರು.

ಮರಗೋಡಿನ ಭಾರತೀ ಜೂನಿಯರ್ ಕಾಲೇಜು ಮೈದಾನದಲ್ಲಿ ನಿನ್ನೆ ದಿನ  ಗೌಡ ಕುಟುಂಬಗಳ  ಕ್ರೀಡಾಕೂಟ  “ಗೌಡ ಕುಟುಂಬ ಕಲರವ-2026″ ದ ಉದ್ಗಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಅವರು  ಹಿರಿಯರ ಅನುಭವವನ್ನು ಕಿರಿಯರಿಗೆ ಹಸ್ತಾಂತರಿಸುವ ಹಾಗೂ ತಮ್ಮ ಸಂಸ್ಕೃತಿಯನ್ನು ಉಳಿಸಿ  ಬೆಳೆಸುವಲ್ಲಿ  ಇಂತಹ ಕ್ರೀಡಾ ಕೂಟಗಳ  ಸಹಕಾರಿಯಾಗಲಿದೆ ಎಂದು ಅಭಿಪ್ರಾಯಿಸಿದರು.

ಕ್ರೀಡಾಕೂಟದ  ಭಾಗವಾದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸುಮಾರು 100 ಕ್ಕೂ ಅಧಿಕ  ಗೌಡ ಕುಟುಂಬಗಳ ತಂಡಗಳು ಹೆಸರು ನೋಂದಾಯಿಸಿದ್ದು, ಉದ್ಘಾಟನಾ ಪಂದ್ಯದಲ್ಲಿ  ಕೊಡಗು ಪತ್ರಕರ್ತ ಸಂಘ (ರಿ) ದ ತಂಡ , ಅತಿತೇಯ ತಂಡವನ್ನು 2 ರನ್ ಗಳಿಂದ ಮಣಿಸಿ ರೋಚಕ ಗೆಲುವನ್ನು ಸಾಧಿಸಿತು.

ಗೌಡ ಕುಟುಂಬಗಳ ಕಲರವ  ಕ್ರೀಡಾಕೂಟದಲ್ಲಿ ಕ್ರಿಕೆಟ್ ಜೊತೆಗೆ ಹಗ್ಗಜಗ್ಗಾಟ ಹಾಗೂ ಹತ್ತು ಹಲವಾರು ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಏಪ್ರಿಲ್ 26 ರಂದು ಪಂದ್ಯಾಟಗಳು ಕೊನೆಗೊಳ್ಳಲಿವೆ.

 ಮರಗೋಡುವಿನ ಗೌಡ ಇವನಿಂಗ್ ಸ್ಟಾರ್ ಅಧ್ಯಕ್ಷರಾದ  ರೋಷನ್ ಕಟ್ಟೆಮನೆ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಿ.ಕೆ. ರವಿ, ಉಪಾಧ್ಯಕ್ಷರು, ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಮಡಿಕೇರಿ, ಕಟ್ಟೆಮನೆ ಜನಾರ್ಧನ ಅಧ್ಯಕ್ಷರು, ಗೌಡ ಸಮಾಜ ಮರಗೋಡು, ಮಳ್ಳಂದಿರ ಕೃಷ್ಣರಾಜು ಅಧ್ಯಕ್ಷರು ಭಾರತಿ ಗ್ಲೋಬಲ್ ಎಜುಕೇಷನ್ ಸೊಸೈಟಿ ಮರಗೋಡು,ಬಾಳಾಡಿ ಮನೋಜ್ ಕುಮಾರ್ ಅಧ್ಯಕ್ಷರು ಗೌಡ ಯುವ ವೇದಿಕೆ ಮಡಿಕೇರಿ, ಪೂಳಕಂಡ ಸಂದೀಪ್ ಸದಸ್ಯರು, ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮುಂತಾದವರು ಉಪಸ್ತಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!