Google search engine
Home♦️ಇತ್ತೀಚಿನ ಸುದ್ದಿಗಳು.ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬ 2026, ಇಂದಿನ ಪಂದ್ಯಾವಳಿಗಳ ವೇಳಾಪಟ್ಟಿ.

ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬ 2026, ಇಂದಿನ ಪಂದ್ಯಾವಳಿಗಳ ವೇಳಾಪಟ್ಟಿ.

ನಾಪೋಕ್ಲು ಏ.14. ಪ್ರತಿಷ್ಠಿತ ಚೇನಂಡ ಕಪ್ ಕೊಡವ ಕೌಟುಂಬಿಕ ಹಾಕಿ ಹಬ್ಬದ  ಇಂದಿನ ಪಂದ್ಯಾವಳಿಗಳ ವೇಳಾಪಟ್ಟಿ. ಸ್ಥಳ:  ಚೆರಿಯ ಪರಂಬು ಹಾಕಿ ಕ್ರೀಡಾಂಗಣ ನಾಪೋಕ್ಲು.

ಗೋಧೂಳಿ ಸಮಯದಲ್ಲಿ ಹುಲಿಯೊಂದಿಗೆ ಕಾದಾಡಿ ಮನೆಗೆ ಮರಳಿದ ಪಾಪುಲಿ ಎತ್ತು ಚೇನಂಡ ಕುಟುಂಬದ ಲಾಂಛನವಾದ ಸ್ವಾರಸ್ಯಕರ  ಕಥೆ

ಚೇನಂಡ ಕುಟುಂಬದ ಮೂಲ ಪುರುಷ ಉತ್ತಯ್ಯ ಅವರು ದನ ಕರುಗಳನ್ನು ಸಾಕುತ್ತಿದ್ದರು.  ಒಂದುಬಾರಿ ಉತ್ತಯ್ಯ ಅವರು ಸಂಪ್ರದಾಯದಂತೆ   ದೇವಸ್ತಾನಕ್ಕೆ ನೈವೇದ್ಯಕ್ಕಿರುವ ಅಕ್ಕಿ ಹಾಗೂ 35 ಎತ್ತುಗಳನ್ನು ಕೇರಳದ ಪೈಯ್ಯಾವೂರಿಗೆ ಹೊಡೆದುಕೊಂಡು ಹೋಗಿದ್ದರು.

ಪಾಪುಲಿ ಎತ್ತಿನ ಬೆನ್ನಲ್ಲಿ ನೈವೇದ್ಯದ ಅಕ್ಕಿ ಕಟ್ಟಿ ದೇವಸ್ಥಾನಕ್ಕೆ ಹೊರಟ ಉತ್ತಯ್ಯ ದೇವರ ದರ್ಶನ ಮಾಡಿ 2 ದಿನ ಕಳೆದು ಹಿಂದಿರುಗಿ ಬರುವಾಗ ಬಣ್ಣಾಯಿ ಕಡವು ಎಂಬಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಹೊರಟರು. ಆಗ ಕರೆದುಕೊಂಡು ಹೋಗಿದ್ದ ಎತ್ತುಗಳ ಪೈಕಿ ಪಾಪುಲಿ ಕಾಣೆಯಾಗಿತ್ತು. ಆಗ ಉತ್ತಯ್ಯನವರು ಪಕ್ಕದ ಹೊಳೆಯಲ್ಲಿ ಸ್ಥಾನ ಮಾಡಿ ಪಾಪುಲಿ ಸಿಕ್ಕರೇ ಅಂಜಿಕೂಟು ಮೂರ್ತಿಯ ಜತೆ ಎತ್ತು ತೆರೆ ಕಟ್ಟುತ್ತೇವೆಂದು ಊರ ದೇವರು ಮತ್ತು ಪೈಯ್ಯಾವೂರು ದೇವರಿಗೆ ಹರಿಕೆ ಹೊತ್ತರು. 

ಇದಾಗಿ ಉತ್ತಯ್ಯ ಮನೆ ತಲುಪಿದ ಬಳಿಕ ಹುಲಿ ದಾಳಿಗೆ ಸಿಲುಕಿ ಸಂಪೂರ್ಣ ಗಾಯಗೊಂಡ ಸ್ಥಿತಿಯಲ್ಲಿ ಬಂದ ಪಾಪುಲಿ ಮನೆಯ ಅಂಗಳದಲ್ಲಿ ಬಂದು ಕೊನೆಯುಸಿರೆಳೆಯಿತು.

ಅಂದಿನಿಂದ ಕುಟುಂಬಸ್ಥರು ಈ ಪಾಪುಲಿಯಲ್ಲಿ ಗುರುಕಾರೋಣರನ್ನು ಕಾಣುತ್ತಾರೆ.  ಪ್ರತಿ 2 ವರ್ಷಕ್ಕೊಮ್ಮೆ ಜುಲೈ ತಿಂಗಳ ಮೊದಲವಾರ ಚೇನಂಡ ಕುಟುಂಬದಿಂದ ಎತ್ತು ತೆರೆ ಕಟ್ಟಲಾಗುತ್ತದೆ. ಕೊಡವ ಸಮುದಾಯಕ್ಕೆ ತನ್ನದೇ ಆದ ಲಾಂಛನವಿದೆ. ಹಾಕಿ ಉತ್ಸವಕ್ಕೆ ಒಂದೊಂದು ಕುಟುಂಬಗಳು ತಮ್ಮ ಲಾಂಛನ ಸಿದ್ಧಪಡಿಸುತ್ತವೆ. ಆದರೇ ಕುಟುಂಬಕ್ಕೆಂದು ಮೊದಲಿಗೆ ಲಾಂಛನ ಸಿದ್ಧಪಡಿಸಿರುವ ಕುಟುಂಬ ಚೇನಂಡ. ಪವಿತ್ರ ಎತ್ತು ಪಾಪುಲಿಯಯನ್ನು ತಮ್ಮ ಲಾಂಛನವಾಗಿಸಿಕೊಳ್ಳಲಾಗಿದ್ದು, ಗೋಧೂಳಿ ಸಮಯದಲ್ಲಿ ಹುಲಿಯೊಂದಿಗೆ ಹೋರಾಟಕ್ಕೆ ಸಿದ್ಧವಾಗಿರುವ ಎತ್ತಿನ ಆಕಾರವನ್ನು ಲೋಗೋದಲ್ಲಿ ಬಳಸಿಕೊಳ್ಳಲಾಗಿದೆ. 

ಚೇನಂಡ ಹಾಕಿ ನಮ್ಮೆಗೂ ತಮ್ಮ ಕುಟುಂಬದ ಲೋಗೊ ಒಳಗೊಂಡ ಲಾಂಛನ ವಿನ್ಯಾಸಗೊಳಿಸಲಾಗಿದ್ದು, ಹಾಕಿ ಫಾರ್ವರ್ಡ್ ಆಟಗಾರರ ಬದಲು ಗೋಲ್ ಕೀಪರ್ ಒಳಗೊಂಡಿರುವುದು ಹಾಕಿ ನಮ್ಮೆ 2026ರ ಲೋಗೋದ ವಿಶೇಷತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!