Google search engine
Home♦️ಇತ್ತೀಚಿನ ಸುದ್ದಿಗಳು.ನಾಪೋಕ್ಲು ನಡೆಯುತ್ತಿರುವ ಈ ಬಾರಿಯ  ಚೇನಂಡ ಕಪ್ 2026 ಹಾಕಿ ಹಬ್ಬದ ವೈಶಿಷ್ಟತೆಗಳು

ನಾಪೋಕ್ಲು ನಡೆಯುತ್ತಿರುವ ಈ ಬಾರಿಯ  ಚೇನಂಡ ಕಪ್ 2026 ಹಾಕಿ ಹಬ್ಬದ ವೈಶಿಷ್ಟತೆಗಳು

ನಾಪೋಕ್ಲು ಏ.12:  ಹಾಕಿ ಉತ್ಸವದಲ್ಲಿ ಸುಮಾರು 383 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಕೊಡವ‌ ಕೌಟುಂಬಿಕ ಹಾಕಿ ಉತ್ಸವದ ಇತಿಹಾಸದಲ್ಲಿ ಅತಿ ಹೆಚ್ಚು ತಂಡಗಳು ಪಾಲ್ಗೊಂಡ ಎರಡನೇ ಉತ್ಸವವೆಂಬ ಹೆಗ್ಗಳಿಕೆ.

ಏಪ್ರಿಲ್ 5 ರಂದು ಪ್ರಾರಂಭಗೊಂಡು ಮೇ 2ರಂದು ಕೊನೆಗೊಳ್ಳುವ ಕೊಡವ  ಕುಟುಂಬಗಳ ಕೌಟುಂಬಿಕ ಹಾಕಿ ಹಬ್ಬದಲ್ಲಿ ಸುಮಾರು 383 ತಂಡಗಳು ನೋಂದಣಿ ಮಾಡಿಕೊಂಡಿದ್ದು, ಪ್ರತಿನಿತ್ಯ 20ಕ್ಕು ಹೆಚ್ಚು ಪಂದ್ಯಗಳನ್ನು ನಡೆಸಲಾಗುತ್ತಿದ್ದು , ಸುಸಜ್ಜಿತ  ಮೂರು ಹಾಕಿ ಮೈದಾನಗಳಲ್ಲಿ  ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಇದುವರೆವಿಗೆ  ಸುಮಾರು 120ಕ್ಕೂ ಅಧಿಕ ಪಂದ್ಯಗಳು ನಡೆದಿದೆ. 450ಕ್ಕೂ ಅಧಿಕ ಗೋಲುಗಳು ದಾಖಲಾಗಿದೆ.

ಕಾಫಿ ನಾಡು ಕೊಡಗಿನಲ್ಲಿ ಜೇನು ಕೃಷಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಕಿ ಪಂದ್ಯದಲ್ಲಿ ಪಾಲ್ಗೊಂಡ ಎಲ್ಲಾ ತಂಡಗಳಿಗೂ ಜೇನು ಪೆಟ್ಟಿಗೆ ವಿತರಿಸಲಾಗುತ್ತಿದೆ.

ಹಾಗೆಯೇ ಕಾಫಿ ಹಾಗೂ ಜೇನು ಕೃಷಿಯ ಬಗ್ಗೆ ಉಪನ್ಯಾಸ ಹಾಗೂ  ಒಂದು ಗೋಲಿಗೆ ಒಂದು ಗಿಡ ನೆಡುವ ಕಾರ್ಯಕ್ರಮ ಕುರಿತಾಗಿ ಸಮಾಲೋಚನೆ.

ಮೈದಾನದಲ್ಲಿ ಕೊಡವ ಕೌಟುಂಬಿಕ ಹಾಕಿಯ ಜನಕ ಪಾಂಡಂಡ ಕುಟ್ಟಣಿ ಕುಟ್ಟಪ್ಪ ಅವರ ಪುತ್ಥಳಿ ಅನಾವರಣ ಮಾಡಲಾಗಿದೆ.

ಚೇನಂಡ ಹಾಕಿ ನಮ್ಮೆಯ ಅಂಗವಾಗಿ ಮೂರ್ನಾಡು ಶಾಲಾ ಮೈದಾನದಲ್ಲಿ ಜಿಲ್ಲೆಯ  ಒಟ್ಟು 33 ಶಾಲಾ ತಂಡಗಳ ಹಾಕಿ ಪಂದ್ಯ ಆಯೋಜಿಸಿಲಾಗಿತ್ತು , ಅವರಲ್ಲಿ  12 ಮಂದಿ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣ ಹಾಕಿ ಕಿಟ್ ಒದಗಿಸುವ ಜೊತೆಗೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಅವರ ಸಹಕಾರದೊಂದಿಗೆ ಕ್ರೀಡಾ ವಸತಿ ನಿಲಯಕ್ಕೆ ಸೇರ್ಪಡೆಗೊಳಿಸುವ ಉದ್ದೇಶ ಹೊಂದಲಾಗಿದೆ.

ಎಂದಿನಂತೆ ಈ ಬಾರಿಯೂ ಆರೋಗ್ಯ ಹಾಗೂ ಶುಚಿತ್ವಕ್ಕೆ ಒತ್ತುನೀಡಲಾಗಿದ್ದು, ಮೈದಾನದಲ್ಲಿ  ಸುಸಜ್ಜಿತ ತಾತ್ಕಾಲಿಕ ಶೌಚಾಲಯ ನಿರ್ಮಿಸಲಾಗಿದೆ. ಹಾಗೂ  ವೈದ್ಯಕೀಯ ಸೇವೆಗೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ,  ಜೊತೆಗೆ ತುರ್ತು ವೈದ್ಯಕೀಯ ಸೇವೆಗೆ ಆಂಬುಲೆನ್ಸ್  ಸೌಲಭ್ಯ ಕಲ್ಪಿಸಲಾಗಿದೆ.

ಶಾಲಾ‌ ಮಕ್ಕಳಿಗೆ ಕೊಡವ ಸಾಂಪ್ರದಾಯಿಕ ಆಟ್ ಪಾಟ್ ಪಡಿಪು ಕಾರ್ಯಕ್ರಮದಲ್ಲಿ ಉಮ್ಮತ್ತಾಟ್, ಬೊಳಕಾಟ್, ಬಾಳೋಪಾಟ್ ತರಬೇತಿ ನೀಡಿ ಅದನ್ನು ಮೈದಾನದಲ್ಲಿ ಪ್ರದರ್ಶನ ಆಯೋಜಿಸಲು ಸಿದ್ಧತೆ ಮಾಡಲಾಗುತ್ತಿದೆ

ಆಡಳಿತ ಮಂಡಳಿ ಅಧ್ಯಕ್ಷರು: ಕಂಬನಿ ಕರುಂಬಯ್ಯ ಸಿ.ಪಿ,ಕಾರ್ಯನಿರ್ವಾಹಕ ಅಧ್ಯಕ್ಷರು: ದೀನಾ ಚೆಂಗಪ್ಪ ಎಸ್.ಟಿ.ಕಾರ್ಯದರ್ಶಿ: ಮಧು ಮಾದಯ್ಯ ಸಿ.ಎಸ್, ಜಂಟಿ ಕಾರ್ಯದರ್ಶಿ: ತಮ್ಮಿ ತಮ್ಮಯ್ಯ ಸಿ.ಪಿ, ಖಜಾಂಚಿ: ಜಿಮ್ಮಿ ಅಚ್ಚಯ್ಯ ಸಿ.ಪಿ, ವಕ್ತಾರ: ಸುರೇಶ್ ನಾಣಯ್ಯ ಸಿ.ಎಂ, ಲೆಕ್ಕಾಧಿಕಾರಿ: ಶ್ಯಾಮಲಾ ಚೆಂಗಪ್ಪ, ಜಂಟಿ ಲೆಕ್ಕಪರಿಶೋಧಕ: ಬಬಿತಾ ಅಯ್ಯಪ್ಪ,ಸದಸ್ಯರು: ಸಚಿನ್ ಅಯ್ಯಪ್ಪ ಸಿ.ಬಿ, ನಮೃತಾ ಅಯ್ಯಣ್ಣ, ರೋಹನ್ ಪೊನ್ನಯ್ಯ ಸಿ.ಎ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!