Google search engine
Home♦️ಇತ್ತೀಚಿನ ಸುದ್ದಿಗಳು.ಬುಟ್ಟಂಗಾಲ ಸೇತುವೆ ತಿರುವಿನಲ್ಲಿ ಗಿಡಗಳ ಬೆಳವಣಿಗೆ: ಅಪಘಾತ ಭೀತಿ, ತೆರವಿಗೆ ಆಗ್ರಹ

ಬುಟ್ಟಂಗಾಲ ಸೇತುವೆ ತಿರುವಿನಲ್ಲಿ ಗಿಡಗಳ ಬೆಳವಣಿಗೆ: ಅಪಘಾತ ಭೀತಿ, ತೆರವಿಗೆ ಆಗ್ರಹ

✍️✍️✍️✍️✍️✍️ಕೆಂಜಂಗಡ ರೋಶನ್ ನಾಣಯ್ಯ.ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೊಡಗು ಬೆಂಗಳೂರು: 9448619408

ಇವರಿಗೆ. ಶ್ರೀಮಾನ್ ಸತೀಶ್ ರವರಿಗೆ ಇಂಜಿನಿಯರ್ ಲೋಕೋಪಯೋಗಿ ಇಲಾಖೆ , ವಿರಾಜಪೇಟೆ

ವಿಷಯ: ಬುಟ್ಟಂಗಾಲ ಪೆಟ್ರೋಲ್ ಬಂಕ್ ಹತ್ತಿರದ ತಿರುವಿನ ಸೇತುವೆಯ ಕಟ್ಟೆಯ ಹತ್ತಿರದಲ್ಲಿ ಬೆಳೆದಿರುವ ಗಿಡಗಳನ್ನು ಕಡಿದು ವಾಹನ ಸವಾರಿಗೆ ರಸ್ತೆ ಕಾಣುವ ಹಾಗೆ ಮಾಡಿಕೊಡುವ ಬಗ್ಗೆ.

ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಬರುವ ಬುಟ್ಟಿಂಗಾಲ ಪೆಟ್ರೋಲ್ ಬಂಕ್ ಹತ್ತಿರದ ತಿರುವಿನಲ್ಲಿ ಇರುವ ಸೇತುವೆಯ ಕಟ್ಟೆ ರಸ್ತೆಗೆ ಬಹಳ ಹತ್ತಿರವಾಗಿ ಇದ್ದು ಸದರಿ ತಿರುವಿನಲ್ಲಿ ಗಿಡಗಳು ದೊಡ್ಡದಾಗಿ ಬೆಳೆದು ವಿರಾಜಪೇಟೆಯಿಂದ ಗೋಣಿಕೊಪ್ಪ ಕಡೆಗೆ ಹೋಗುವ ವಾಹನ ಸವಾರರು ಸದರಿ ತಿರುವಿನಲ್ಲಿ ಗಿಡಗಳು ಬೆಳೆದು ಇರುವುದರಿಂದ ಎಡ ಭಾಗದ ರಸ್ತೆ ಕಾಣದೆ ವಾಹನಗಳನ್ನು ರಸ್ತೆಯ ಬಲಭಾಗಕ್ಕೆ ತೆಗೆಯುವುದರಿಂದ ಗೋಣಿಕೊಪ್ಪ ಕಡೆಯಿಂದ ಬರುವ ವಾಹನ ಗಳಿಗೆ ರಸ್ತೆಯ ಅಗಲ ಕಡಿಮೆಯಾಗಿ ಅಪಘಾತಗಳು ಸಂಭವಿಸುತ್ತಿದ್ದು ತಾವುಗಳು ಸದರಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸದರಿ ಸೇತುವೆ ತಿರುವಿನಲ್ಲಿ ಬೆಳೆದಿರುವ ಗಿಡಗಳನ್ನು ಕಡಿದು ಸದರಿ ಜಾಗದಲ್ಲಿ ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟು ವಾಹನ ಸವಾರರ ಜೀವ ರಕ್ಷಣೆಗೆ ತುರ್ತಾಗಿ ಮುಂದಾಗಬೇಕಾಗಿ ನಾವು ತಮ್ಮಲ್ಲಿ ವಿಶೇಷ ಮನವಿ ಮತ್ತು ಪ್ರಾರ್ಥನೆ ಮಾಡಿಕೊಳ್ಳುತ್ತೇವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!