Google search engine
Home♦️ಇತ್ತೀಚಿನ ಸುದ್ದಿಗಳು.ಜೆಎನ್‌ವಿ ಕೊಡಗಿನಲ್ಲಿ ನವೋದಯ ಸ್ಥಾಪನಾ ದಿನಾಚರಣೆ .

ಜೆಎನ್‌ವಿ ಕೊಡಗಿನಲ್ಲಿ ನವೋದಯ ಸ್ಥಾಪನಾ ದಿನಾಚರಣೆ .

ಮಡಿಕೇರಿ ಆ.06: ಇಲ್ಲಿನ ನಗರದ ಹೊರವಲಯದಲ್ಲಿರುವ  ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯದ  ಎಂ.ಪಿ. ಹಾಲ್‌ನಲ್ಲಿ ಆ.05 ರಂದು ನವೋದಯ ಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. “21ನೇ ಶತಮಾನದ ಪ್ರಮುಖ ಕೌಶಲ್ಯಗಳನ್ನು ಹೊಂದಿದ ಸಮಗ್ರ ವ್ಯಕ್ತಿತ್ವಗಳ ನಿರ್ಮಾಣ” ಎಂಬ ಧ್ಯೇಯದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಶಿಕ್ಷಕ ವರ್ಗ, ವಿದ್ಯಾರ್ಥಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವು ಎಂ.ಪಿ. ಹಾಲ್ ಮುಂಭಾಗದಲ್ಲಿ ಧ್ವಜಾರೋಹಣ ಮತ್ತು ಸಸಿ ನೆಡುವಿಕೆಯೊಂದಿಗೆ ಆರಂಭಗೊಂಡಿತು. ಬಳಿಕ ವಿದ್ಯಾಲಯದ ಗಾಯಕ ಬಳಗವು ನವೋದಯ ಗೀತೆಯನ್ನು ಹಾಡಿದರು. ಬಳಿಕ ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಲಾಯಿತು.

ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸಜೀವ್ ಕೆ ವವಚನ್ ಅವರು ಸ್ವಾಗತ ಭಾಷಣ ಮಾಡಿ, ಆಗಮಿಸಿದ್ದ ಎಲ್ಲರನ್ನು ಆದರದಿಂದ ಸ್ವಾಗತಿಸಿದರು ಬಳಿಕ ಮಾತನಾಡಿ ಅಂದಿನ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿಯವರ ಒಂದು ಮಹತ್ತರವಾದ ಯೋಜನೆ ನವೋದಯ ಶಾಲೆಗಳು. 1985 ರಲ್ಲಿ ಗ್ರಾಮೀಣ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಕೊಡುವ ಸಲುವಾಗಿ ಪ್ರಾರಂಭದಲ್ಲಿ ಎರಡು ನವೋದಯ ವಿದ್ಯಾಲಯಗಳು ಸ್ಥಾಪನೆಗೊಂಡವು ಒಂದು ಹರಿಯಾಣ ಹಾಗೂ ಮತ್ತೊಂದು ಮಹಾರಾಷ್ಟ್ರದ ಅಮರಾವತಿಯಲ್ಲಿ ಆರಂಭಗೊಂಡಿತು.

 ಆ ಬಳಿಕ ನವೋದಯ ವಿದ್ಯಾಲಯ ಬೆಳೆದು ಇಂದು 662 ವಿದ್ಯಾಲಯಗಳಾಗಿ ದೇಶಾದ್ಯಂತ ಹರಡಿ ನಿಂತಿವೆ. ಪ್ರತಿಭಾವಂತ ಗ್ರಾಮೀಣ ವಿದ್ಯಾರ್ಥಿಗಳ ಶಿಕ್ಷಣದ ಪ್ರಗತಿಗಾಗಿ ಎಲ್ಲ ಸವಲತ್ತುಗಳನ್ನು ಒದಗಿಸುವುದು ಈ ವಿದ್ಯಾಲಯದ ಗುರಿ. ಅದರ ಅಂಗವಾಗಿ ನವೋದಯ ಸ್ಥಾಪನಾ ದಿನವನ್ನು ಇಂದು ಎಲ್ಲೆಡೆ ಆಚರಿಸುತ್ತಾ ಬರಲಾಗುತ್ತಿದೆ ಎಂದು ಅವರು ದಿನದ ವಿಶೇಷತೆಯ ಕುರಿತಾಗಿ ಮಾಹಿತಿ  ನೀಡಿದರು.

 ಮುಂದುವರೆದು ಮಾತನಾಡಿದ ಅವರು ಕಳೆದ 41 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಗೆಯ್ಯಲು ಹಾಗೂ ಆ ಮೂಲಕ ಒಳ್ಳೆಯ ಉದ್ಯೋಗ ದೊರಕಿಸಿಕೊಳ್ಳಲು ಸಹಕರಿಸಿರುವ ಎಲ್ಲ ಅಧ್ಯಾಪಕರನ್ನೂ, ಅಧಿಕಾರಿಗಳನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇವೆ. ನವೋದಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಮೇಲೆ ಮಹತ್ತರವಾದ ಜವಾಬ್ದಾರಿ ಇದೆ. ವಿದ್ಯಾರ್ಥಿಗಳು ನವೋದಯದ ಅಂಬಾಸಿಡರ್ ಗಳಾಗಿ ಮುಂದೆ ಪ್ರಪಂಚದಾದ್ಯಂತ ಈ ಬೃಹತ್ ವಿದ್ಯಾಲಯದ ಹೆಸರು ಮತ್ತು ಕೀರ್ತಿಯನ್ನು ಹರಡಲು ಪ್ರಯತ್ನಿಸುವಂತಾಗಬೇಕು ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ವಿದ್ಯಾಲಯದ 4ನೇ ಬ್ಯಾಚ್‌ನ ಹಳೆ ವಿದ್ಯಾರ್ಥಿ ಜಾಕಿರ್ ಹುಸೇನ್  ಅವರು ಮಾತನಾಡಿ ಉನ್ನತ ವಿದ್ಯಾಭ್ಯಾಸದ ಪಡೆದ ನಂತರ ಉದ್ಯೋಗ ಅರಸಿ   ಹೊರದೇಶಗಳ ಹೋಗಿ ಅಲ್ಲಿಯೇ ಉಳಿದುಬಿಡಬಾರದು , ಮಾತೃಭೂಮಿಯಲ್ಲಿ  ಏನನ್ನಾದರೂ ಸಾಧಿಸುವ ಅದಮ್ಯ ಗುರಿ ಇರುಸಿಕೊಂಡು ದೇಶ ಕಟ್ಟುವ ಕಾಯಕದಲ್ಲಿ ವಿದ್ಯಾರ್ಥಿಗಳು ಭಾಗಿಗಳಾಗಬೇಕೆಂದು ಕರೆ ನೀಡಿದರು.  ವಿದ್ಯಾಲಯ ಗಾಯಕ ಬಳಗದಿಂದ ರಾಷ್ಟ್ರೀಯ ಸಮಗ್ರತಾ ಗೀತೆ ಪ್ರಸ್ತುತಪಡಿಸಲಾಯಿತು.

ಕೆ. ನಿಡುಗಣೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಡೆನ್ ಬೋಪಣ್ಣ ಅವರು ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪಿಟಿಸಿ ಸದಸ್ಯರಾದ ವಸಂತ ಕುಮಾರ್ ಎನ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೆನಪಿನ ಕಾಣಿಕೆಗಳನ್ನು ವಿತರಿಸಿದರು ಹಾಗೂ ವಿದ್ಯಾರ್ಥಿಗಳಿಂದ ವಿಡಿಯೋ ಪ್ರಸ್ತುತಿ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾಲಯದ ಹಿರಿಯ ಶಿಕ್ಷಕರಾದ ಎಂ.ಎಂ. ಮ್ಯಾಥ್ಯೂ (ಪಿಜಿಟಿ ಇಂಗ್ಲಿಷ್) ಅವರು ವಂದನಾರ್ಪಣೆ ಸಲ್ಲಿಸಿದರು. 

ವರದಿ: ಅನಿಫ್, ಸೋನಾ ಸ್ಟುಡಿಯೋ, ಮಡಿಕೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!