ಮಡಿಕೇರಿ, ಏ. 16: ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಏ 18 ಹಾಗೂ 19 ರಂದು 10 ಕುಟುಂಬ 18 ಗೋತ್ರದ ಅರೆಭಾಷೆ ಗೌಡ ಕ್ರೀಡಾ ಹಬ್ಬ ನಡೆಯಲಿದೆ ಎಂದು ಪ್ರಮುಖರು ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಪದಾಧಿಕಾರಿ ಪೊನ್ನಚ್ಚನ ಶ್ರೀನಿವಾಸ್, 2 ದಿನಗಳ ಕಾಲ ನಡೆಯಲಿರುವ ಕ್ರೀಡಾ ಹಬ್ಬದಲ್ಲಿ ನೂರಾರು ಆಟಗಾರರು ಭಾಗವಹಿಸಲಿದ್ದಾರೆ. ಬಿಡ್ಡಿಂಗ್ ಮಾಡಿ ಆಟಗಾರರನ್ನು ವಿವಿಧ ತಂಡಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಫುಟ್ಬಾಲ್ ಚಾಂಪಿಯನ್ ಲೀಗ್, 45 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, 16ವರ್ಷ ಒಳಗಿನವರ ಜೂನಿಯರ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಬಾಲಕಿಯರ ಫುಟ್ಬಾಲ್ ಚಾಂಪಿಯನ್ ಟ್ರೋಫಿ ಸ್ಪರ್ಧೆಗಳು ನಡೆಯಲಿವೆ. ಬೆಳಿಗ್ಗಿನಿಂದ ಪಂದ್ಯಾಟ ಆರಂಭವಾಗಲಿದ್ದು, ಹೊನಲು ಬೆಳಕಿನಲ್ಲಿಯೂ ಪಂದ್ಯ ಮುಂದುವರೆಯಲಿದೆ. ಇದರೊಂದಿಗೆ ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಲಿದೆ ಎಂದು ವಿವರಿಸಿದರು.
ಒಟ್ಟು 29 ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಈ ಪೈಕಿ ಚಾಂಪಿಯನ್ ಟ್ರೋಫಿಗೆ 12, 16 ವರ್ಷದೊಳಗಿನ ವಿಭಾಗದಲ್ಲಿ 8, ಬಾಲಕಿಯರ ವಿಭಾಗದಲ್ಲಿ 3 ತಂಡ ಸೆಣಸಾಡಲಿವೆ. 5 ಎ ಸೈಡ್ ಹಾಗೂ 6 ಎ ಸೈಡ್ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ. ಒಟ್ಟು ರೂ. 4.50 ಲಕ್ಷ ನಗದು ಬಹುಮಾನ ವಿಜೇತರಿಗೆ ಇರಲಿದೆ. ಇದರೊಂದಿಗೆ ವಿಶೇಷ ಆಕರ್ಷಣೆಯಾಗಿ ವಿಂಟೇಜ್ ವಾಹನಗಳ ಪ್ರದರ್ಶನವೂ ಇರಲಿದೆ ಎಂದು ಹೇಳಿದರು.
ತಾ. 18 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಪಂದ್ಯಾಟ ಉದ್ಘಾಟಿಸಲಿದ್ದು, ಮಡಿಕೇರಿಯ ಕೊಡಗು ಗೌಡ ಸಮಾಜ ಅಧ್ಯಕ್ಷ ದಂಬೇಕೋಡಿ ಆನಂದ್, ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷ ಆನಂದ್ ಕರಂದ್ಲಾಜೆ, ಅಂತರ್ ರಾಷ್ಟ್ರೀಯ ಫುಟ್ಬಾಲ್ ಆಟಗಾರ ಪದ್ಮಪ್ರಿಯ ಸಿಂಗೂರು, ಅಂತರ್ ರಾಷ್ಟ್ರೀಯ ಮಾಜಿ ಫುಟ್ಬಾಲ್ ಆಟಗಾರ ಬೆಪ್ಪುರನ ಅಣ್ಣಪ್ಪ ಕುಮಾರ್, ಗೌಡ ಸಮಾಜ ಒಕ್ಕೂಟದ ಉಪಾಧ್ಯಕ್ಷ ತೇನನ ರಾಜೇಶ್, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್, ಯುವವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಕೋಡಿ ವಿದಿತ ಪಾಲ್ಗೊಳ್ಳಲಿದ್ದಾರೆ. ತಾ. 19 ರಂದು ನಡೆಯಲಿರುವ ಹಗ್ಗಜಗ್ಗಾಟ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಕೊಡಗು ಗೌಡ ಮಹಿಳಾ ಒಕ್ಕೂಟ ಅಧ್ಯಕ್ಷೆ ಅಮೆ ದಮಯಂತಿ, ನಿವೃತ್ತ ಪೌರಾಯುಕ್ತೆ ಮೂಟೇರ ಪುಷ್ಪಾವತಿ, ನಗರಸಭಾ ಸದಸ್ಯೆ ಕುಟ್ಟನ ಶ್ವೇತಾ ಪ್ರಶಾಂತ್, ಮೀನುಗಾರಿಕೆ ಇಲಾಖೆ ಅಧಿಕಾರಿ ಮಿಲನಾ ಭರತ್ ಭಾಗವಹಿಸಲಿದ್ದಾರೆ.
ತಾ. 19 ರಂದು ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಉದ್ಯಮಿ ಎಡಿಕೇರಿ ಪ್ರಸನ್ನ, ಕೊಡಗು ಒಕ್ಕಲಿಗ ಗೌಡ ಸಂಘ ಉಪಾಧ್ಯಕ್ಷರುಗಳಾದ ಹರಪ್ಪಳ್ಳಿ ರವೀಂದ್ರ, ಪಿ.ಕೆ. ರವಿ, ಬೆಂಗಳೂರಿನ ಕೊಡಗು ಗೌಡ ಸಮಾಜದ ಅಧ್ಯಕ್ಷ ಅಯ್ಯಟ್ಟಿರ ಮನೋಜ್, ನಗರಸಭಾ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ಪೌರಾಯುಕ್ತ ರಮೇಶ್, ಸಮಾಜ ಸೇವಕ ಹೊಸೂರು ಸೂರಜ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಚೇತನ್, ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುಕ್ಕಾಟಿರ ಅರುಣ್ ಕುಮಾರ್, ಉದ್ಯಮಿ ಕೋಳುಮುಡಿಯನ ಮಿಲನ್, ಕಾಫಿ ಬೆಳೆಗಾರ ದಂಬೇಕೋಡಿ ಕವನ ಬೀಷ್ಮ, ತೋಟಂಬೈಲು ಅನಂತಕುಮಾರ್, ಬಡುವಂಡ ಲಕ್ಷಿಪತಿ, ಆನೇರ ಹಾಲಮ್ಮ ಉಪಸ್ಥಿತರಿರುತ್ತಾರೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕುಡೆಕಲ್ಲು ಸಂತೋಷ್, ಆರ್.ಆರ್. ಮನೋಜ್, ಕುಕ್ಕೇರ ನಯನ ಹಾಜರಿದ್ದರು.




