ವಿರಾಜಪೇಟೆ, ಏ.03: ಪವಿತ್ರ ಗುಡ್ ಫ್ರೈಡೆ ಆಚರಣೆ ಪ್ರಯುಕ್ತ ಇಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು, ವಿರಾಜಪೇಟೆಯ ಸಂತ ಅನ್ನಮ್ಮನ ದೇವಾಲಯಕ್ಕೆ ಇಂದು ಭೇಟಿ ನೀಡಿದರು.
ಚರ್ಚ್ ನಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ಬಳಿಕ, ಯೇಸು ಕ್ರಿಸ್ತನಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಅವರು ನಮಿಸಿ ನಂತರ ಅನಾಥ ಆಶ್ರಮಕ್ಕೆ ನೀಡಿ ಆಹಾರ ಸಾಮಗ್ರಿಯ ಕಿಟ್ ವಿತರಿಸಿ, ಈ ದಿನವೂ ನಾಡಿನ ಎಲ್ಲರಿಗೂ ಶುಭವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳು, ಪ್ರಮುಖರಾದ ಜೋಕಿಂ ರೋಡರಿಗಸ್, ಮರ್ವಿನ್ ಲೋಬೋ, ಜೇವಿಯರ್, ಹ್ಯಾಂಸಿ, ಮಾರ್ಟಿನ್, ಡೇನಿಯಲ್, ಜಗನ್, ರಿಯಾನ್ ಲೋಬೋ, ಚಾರ್ಲ್ಸ್ ಡಿಸೋಜ, ಮೆಲ್ರೋಯ್ ಲೋಬೊ,ಕುಂಡಚ್ಚಿರ ಮಂಜುದೇವಯ್ಯ, ಮೊದಲಾದವರು ಉಪಸ್ಥಿತರಿದ್ದರು.




