Google search engine
Home♦️ಇತ್ತೀಚಿನ ಸುದ್ದಿಗಳು.ಕುಶಾಲನಗರದಲ್ಲಿ ಒಳಚರಂಡಿ(ಯು ಜಿ ಡಿ) ಸಂಸ್ಕರಣಾ ಘಟಕಕ್ಕೆ ಶಾಸಕರಾದ ಮಂತರ್ ಗೌಡ ಭೇಟಿ.

ಕುಶಾಲನಗರದಲ್ಲಿ ಒಳಚರಂಡಿ(ಯು ಜಿ ಡಿ) ಸಂಸ್ಕರಣಾ ಘಟಕಕ್ಕೆ ಶಾಸಕರಾದ ಮಂತರ್ ಗೌಡ ಭೇಟಿ.

Oplus_131072

ಕುಶಾಲನಗರ, ಏ.02:  ಕುಶಾಲನಗರದಲ್ಲಿ ಬಹುತೇಕ ಪೂರ್ಣಗೊಂಡಿರುವ ಒಳಚರಂಡಿ(ಯು ಜಿ ಡಿ) ಸಂಸ್ಕರಣಾ ಘಟಕಕ್ಕೆ ಮಾನ್ಯ ಶಾಸಕರಾದ ಡಾ.ಮಂತರ್ ಗೌಡ ರವರು ಭೇಟಿ ನೀಡಿದರು.

ನಂತರ  ಕಾಮಗಾರಿಯ ಗುಣಮಟ್ಟ ಹಾಗೂ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಶಾಸಕರು ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಹಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ಪಿ ಶಶಿಧರ್ ರವರು, KUDA ಅಧ್ಯಕ್ಷರಾದ  ಪ್ರಮೋದ್ ಮುತ್ತಪ್ಪ ರವರು, ಕಾಂಗ್ರೆಸ್ ಮುಖಂಡರಾದ  ನಟೇಶ್ ಗೌಡ ರವರು, ಕುಶಾಲನಗರ ಪುರಸಭೆಯ ಮಾಜಿ ನಾಮ ನಿರ್ದೇಶಿತ ಸದಸ್ಯರಾದ ಪ್ರಕಾಶ್ ರವರು, ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!