ವಿಶೇಷ ಧನ್ಯವಾದಗಳು
ವಿರಾಜಪೇಟೆ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಬರುವ ಪಂಜರ್ ಪೇಟೆ ಸರ್ವೋದಯ ಕಾಲೇಜಿನ ತಿರುವಿನಲ್ಲಿ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದು ವಾಹನ ಸವಾರರು ಸದರಿ ಸ್ಥಳದಲ್ಲಿ ವಾಹನ ಓಡಿಸಲು ಕಷ್ಟ ಪಡುವುದನ್ನು ಗಮನಿಸಿದ ನಾವು ನೀರು ಸರಬರಾಜು ಇಲಾಖೆಯ ಅಧಿಕಾರಿಗಳಾದ ಶ್ರೀಮಾನ್ ವಿಷ್ಣುರವರು ಮತ್ತು ಭೂ ಸಾರಿಗೆ ಇಲಾಖೆಯ ಅಧಿಕಾರಿಗಳಾದ ಶ್ರೀಮಾನ್ ನಾಗರಾಜು ಮತ್ತು ಶ್ರೀಮಾನ್ ಅಶೋಕ್ರವರನ್ನು ಸದರಿ ಗುಂಡಿಯನ್ನು ಮುಚ್ಚಿ ವಾಹನ ಸವಾರರು ಸುಗಮವಾಗಿ ಸಂಚಾರ ಮಾಡಲಿಕ್ಕೆ ಅನುಕೂಲ ಮಾಡಿಕೊಡಲಿಕ್ಕೆ ಮನವಿ ಮಾಡಿಕೊಂಡ ಮೇರೆಗೆ ತಾವುಗಳು ಕೂಡಲೇ ತುರ್ತಾಗಿ ಸದರಿ ರಸ್ತೆ ಗುಂಡಿಯನ್ನು ಮುಚ್ಚಿ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಟ್ಟಿರುವುದು ನಮಗೆ ಅತೀವ ಸಂತಸ ತಂದಿದೆ ತಮಗೆಲ್ಲರಿಗೂ ಕೊಡಗಿನ ಕಾವೇರಿ ಮಾತೆಯ ಮತ್ತು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಸದಾ ನಿಮ್ಮ ಮೇಲೆ ಇರಲೆಂದು ನಾವು ದೇವರಲ್ಲಿ ಪ್ರಾರ್ಥಿಸುತ್ತೇವೆ.🙏🙏




