Google search engine
Home♦️ಇತ್ತೀಚಿನ ಸುದ್ದಿಗಳು.ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ.

ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ.

ಕುಶಾಲನಗರ, ಮಾ.24: ಕುಶಾಲನಗರ ಪ್ರತಿಷ್ಠಿತ ರೆಸಾರ್ಟ್ ರಿವರ್ ಎಡ್ಜ್ ನಲ್ಲಿ ಫ್ರೆಂಡ್ಸ್ ಕಪ್ ಬಿಡ್ಡಿಂಗ್ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು.

ಮುಂದಿನ ತಿಂಗಳು ಏಪ್ರಿಲ್ 11. 12 ರಲ್ಲಿ ನಡೆಯುವ ಫ್ರೆಂಡ್ಸ್ ಕಪ್ ಕ್ರಿಕೆಟ್  ಬಿಡ್ಡಿಂಗ್ ಗೆ  ಒಟ್ಟು 12 ತಂಡಗಳು ಭಾಗಿಯಾಗಿದ್ದು , ಆಟಗಾರರ ಖರೀದಿಯಲ್ಲಿ ಬಹಳಷ್ಟು ಜಿದ್ದಾಜಿದ್ದಿಗೆ ಬಿದ್ದು ಆಟಗಾರರನ್ನು ಖರೀದಿ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ ಕಾಂಗ್ರೆಸ್ ನ ಯುವ ಅಲ್ಪಸಂಖ್ಯಾತರ ಅಧ್ಯಕ್ಷರಾದ ಎಂ ಜೆ ಇರ್ಫಾನ್ ಟ್ರೋಫಿ ಬಿಡುಗಡೆ ಅನಾವರಣಗೊಳಿಸಿ ಮಾತನಾಡಿ  ಕ್ರೀಡೆಯು ಎಲ್ಲರನ್ನೂ ಒಗ್ಗೂಡಿಸಿ, ಪರಸ್ಪರ ಆತ್ಮೀಯತೆಯನ್ನು ಬೆಸೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಫ್ರೆಂಡ್ಸ್ ಕಪ್ ಬಹಳಷ್ಟು ಅದ್ದೂರಿಯಾಗಿ ನಡೆಯಲಿದ್ದು ತಂಡದ ಮಾಲೀಕರು ಆಟಗಾರರು ಫ್ರೆಂಡ್ಸ್ ಕಪ್ ಯಶಸ್ವಿಯಾಗಲು ಸಹಕರಿಸಬೇಕಾಗಿ ಮನವಿ ಮಾಡಿದರು. 

ಇದೇ ಸಂದರ್ಭ,ಸಲ್ಮಾನ್, ಮಣಿ. ಫಯಾಜ್. ನಾಣಿ. ಮಹದೇವ್. ಗ್ರೀನಿ. ಅವಿನಾಶ್. ಹಾಜರಿದ್ದರು. ಹರಾಜು ಪ್ರಕ್ರಿಯೆಯನ್ನು ತಂಡದ ವ್ಯವಸ್ಥಾಪಕ ದೇವೇಂದ್ರ ನೆರವೇರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!